ಎಲ್ಲೋ ಜೋಗಿ ನಿನ್ನ ಅರಮನೆ…..ಎಲ್ಲೋ ಜೋಗಪ್ಪ ನಿನ್ನ ತಳಮನೆ…….

Date:

ಎಲ್ಲೋ ಜೋಗಿ ನಿನ್ನ ಅರಮನೆ…..ಎಲ್ಲೋ ಜೋಗಪ್ಪ ನಿನ್ನ ತಳಮನೆ…….…….
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳಮನೆ…
ಎಲ್ಲೋ ಜೋಗಪ್ಪ ನಿನ್ನ ಅರಮನೆ……
ಯಾಕೋ ಬಸ್ಯಾ, ಬೆಳಿಗ್ಗೆ, ಬೆಳಿಗ್ಗೆ ಜೋಗಿಗೆ ಯಾಕ್ ಗಂಟ್‌ಬಿದ್ದಿಯೋ? “ಅಂವಾ ಅರಮನ್ಯಾಗೂ ಇಲ್ಲ, ತಳಮನ್ಯಾಗೂ ಇಲ್ಲ. ಇತ್ತಿತ್ಲಾಗ್ ಅಂವಾ ಕಾಣಾಕ ಒಲ್ಲ ನೋಡು”!
ಗೌಡ್ರ, ಜೋಗಿ ಅಂದ ಕೂಡ್ಲೇ ನೀವು ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ ಅಂತ ಅನಕೊಂಡ್ರಿ?.
ಏ ಇಲ್ಪಾ, ಶಿವರಾಜಕುಮಾರ‍್ಗ ಆರವತ್ತವರ್ಷಾದ್ರು ವಯಸ್ಸಾದಂಗ್ ಕಾಣ್ಸೋದಿಲ್ಲ!, ಇನ್ನು ಹರೆದ ಹುಡ್ಗ ಕಂಡಂಗ್ ಕಾಣಸ್ತಾನ!. ಇನ್ನು ಹಾಡ್ತಾನಾ, ಕುಣಿತಾನ, ಅಮೇರಿಕಾಕ್ಕ ಹೋಗಿ ಆಪರೇಶನ ಮಾಡ್ಸಿಕೊಂಡ್ ಬಂದ್ ಮ್ಯಾಲ ಸಲ್ಪ ಸೊರ‍್ಗಿದಂಗ್ ಕಾಣ್ಸತಾನ.

ಅವ್ನ ವಿಷ್ಯಾ ಬಿಡು, ಜೋಗಿ ವಿಷ್ಯಾ ಏನಾತು? ಹೇಳು
ನಾನು ಆ ಜೋಗಿ ಬಗ್ಗೆ ಅಲ್ರಿ ಹಾಡಿದ್ದು, ನಮ್ಮೂರ ಜೋಗಿ ಬಗ್ಗೆ ಹೇಳಿದ್ದು….! “ಸಿನ್ಮಾದ ಜೋಗಿನ ಯಾವಾಗ ಬೇಕಾದ್ರೂ ನೋಡಬಹ್ದು, ಆದ್ರ ನಿಜವಾದ ಜೋಗಿಗಳು ಈಗ ಇಲ್ಲ ಇಲ್ಲ,ಬರಿರೋಗಿಗಳ ತುಂಬಿಕೊಂಡಾರ್, ಜೋಗಿ ಇದ್ರ ಅಲ್ಲ ನಿಮ್ಗ ಕಾಣ್ಸೋದು!, ಈ ಕಾಲ ಅನ್ನೋ ಚಕ್ರದೋಳ್ಗ ಸಿಕ್ಕಂಡ್ ಜೋಗಿ ಅನ್ನೋ ಜೋಗಪ್ಪ ಊರಬಿಟ್ಟು ಬಾಳಾ ದೂರ ಹೋಗ್ಯಾನ್” ನೋಡ್ರಿ ಗೌಡ್ರ.
ಹೌದೋ, ನಾವು ಸಣ್ಣರಿದ್ದಾಗ “ಜೋಗಪ್ಪಗಳು ಕೋಟು ಹಾಕ್ಕೊಂಡು, ರುಮಾಲು ಸುತಗೆಂಡ್ ಜರ‍್ಕಿ ಚಪ್ಪಲ್ ಹಾಕೊಂಡು ಹಾಡಹೇಳಿಕೋತ ಮನಿ ಮನಿಗೆ ಭಿಕ್ಷಾಕ್ಕ ಬರೋರು, ಕೊಟ್ಟದ್ದನ್ನ ಇಸಗೊಂಡು ಹೊಕ್ಕಿದ್ದು, ಬರ‍್ತಾ, ಬರ‍್ತಾ ಇವ್ರ ಸಂಖ್ಯಾ ಕುಸ್ದಹೋಗೇತಿ” ನೋಡು.
ಸಂಖ್ಯಾ ಕುಸದಿಲ್ಲರಿ ಗೌಡ್ರ, “ಈ ಜೋಗಿ ಅನ್ನೋ ಸಂಸ್ಕ್ರತಿ ನಾಶ ಆಗಿ ಹೋಗೇತಿ. ತಲೆಮಾರಿಂದ ತಲೆಮಾರಿಗೆ ವರ್ಗ ಆಕ್ಕೊಂಡ್ ಬಂದಿದ್ದ ಈ ಜೋಗಿ ಸಂಸ್ಕ್ರತಿನ ಹಗಲ ಹೊತ್ತಿನ್ಯಾಗ ಕಂದೀಲು ಹಿಡ್ದ್ ಹುಡ್ಕೋ ಪರಿಸ್ಥಿತಿ ಬಂದೈತಿ”.
ಹೌದೋ, “ಜೋಗಿಗೆ ಹೋಗಿ ತಬ್ಬಿಕೊಂಡ್ರ ಮೈಯೆಲ್ಲಾ ಬೂದಿ ಅನ್ನೋ ಗಾದಿ ಮಾತು ಇತ್ತು. ಈ ಜೋಗಪ್ಪಗಳ ವೃತ್ತಿನ ಹಾಡಹೇಳೋದ ಆಗಿತ್ತು, ಇವ್ರ್ನ ಕಿನ್ನರಿ ಜೋಗಿಗಳು ಅಂತ್ ಕರಿತಿದ್ರು. ನಾವು ಸಣ್ಣೋರಿದ್ದಾಗ ಇವರನ್ನ ಆಹ್ವಾನಿಸಿ ಹಾಡುಗಾರಿಕೆ ಏರ್ಪಡಿಸುತ್ತಿದ್ದರು. ಇವ್ರು ಕಿನ್ನರಿ ಹಿಡ್ದು ಹಾಡಹೇಳಾಕ ಹತ್ತಿದ್ರು ಅಂದ್ರ ಬೆಳಕು ಹರದಿದ್ದ ಗೊತ್ತಾಗತಿರಲಿಲ್ಲ ನೋಡು”.
ಅಲ್ರಿ ಗೌಡ್ರ, ಬರಿ ಜೋಗಿಗಳಲ್ಲ, “ಕಪ್ಪತ್ತ ಮಲ್ಲಯ್ಯನ ಹೋತಗಂಡ ಬರ‍್ತಿದ್ರಲ್ಲ ಅವ್ರು ಸಹ ಕಣ್ಮರೆ ಆಗ್ಯಾರ್, ಅದ್ರಾಗೂ ರಾಮ ರಾಮ ಗೋವಿಂದಾ ಗೋವಿಂದ ಅಂತ್ ಗೋಪಾಳ, ಶಂಖಾ, ಜಾಗಟಿ ಹಿಡ್ದ್ ಬರ‍್ತಿದ್ದರಲ್ಲ ಈ ದಾಸಪ್ಪಗಳು ಇವ್ರು ಸಹ ಕಾಣಾಕವಲ್ರು. ಇನ್ನ ಚೌಡ್ಕಿ ವಾದ್ಯ ಬಾರಿಸಿಕೋತ ಎಲ್ಲಮ್ಮನ ಪದಾ ಹೇಳಿಕೊಂಡು ಬರ‍್ತಿದ್ರಲ್ಲ ಜೋಗಮ್ಮ-ಜೋಗಪ್ಪಗಳು ಅವ್ರು ಕಾಣವಲ್ರು”?.
ಅವ್ರು ಅಷ್ಟ ಅಲ್ಲೋ….”ಬುಡು ಬುಡಕಿಯವ್ರು, ದುರುಮುರುಗಿಯವ್ರು, ಸುಡಗಾಡಸಿದ್ದರು, ದೊಂಬರಾಟದವ್ರು, ಕರಡಿ ಕುಣ್ಸವರು, ಗಂಗೆ-ತುಂಗೆಬಾರೇ ಅಂತ್ ಸಣ್ಣ ಪೆನಪೆಟಗಿ ಹಿಡಕಂಡು ಸರ್ವಜ್ಞನ ವಚನಾನ ಪ್ರಚಾರ ಮಾಡತಿದ್ದವ್ರು, ರಾಮ ಕುಂಡಡಿ ಟೆವಂ..ಟೆಂವ್ ಅಂತ ಭವಿಷ್ಯ ಹೇಳತಿದ್ದವರು, ಮುಳ್ಳಾವಗಿಮ್ಯಾಲ್ ನಿತಗಂಡ ಪಾವಲಿ ಭಿಕ್ಷಾಬೇಡತಿದ್ದವರು, ಬಾಲ ಬಸವಗಳು, ಕೊಡಾಹುತಗಂಡ ಸಂತಿ ತಿರಗತಿದ್ದವ್ರು, ವೇಶಗಾರರು, ಮೋಡಿಗಾರ್ರು, ಹಿಂಗ್ ಒಬ್ಬರ, ಇಬ್ರ…ಇಂತಾ ಹತ್ತಾರು ಕಲಾವಿದರು, ಕಲೆಗಳು ಕಣ್ಮರೆ ಆಗ್ಯಾವು”. “ತಲೆಮಾರಿಂದ ತಲೆಮಾರಿಗೆ ನಮ್ಮ ಕಲೆ ಮತ್ತ ಸಂಸ್ಕ್ರತಿನ ದಾಟಿಸ್ಕೋತ ಬರ‍್ತಿದ್ದ ಈ ಜನಾಂಗ ಈ ಕಾಲಾ ಅನ್ನೋ ಹೊಳೆ ಒಳ್ಗ ಕೊಚಿಗೆಂಡ ಹೋಗ್ಯಾರ, ಈ ಹೇಳವ್ರ ಮಾತ್ರ ಆಗಾ ಕಾಣಾಕಾ ಸಿಗ್ತಾರ ಅಷ್ಟ.”.!
ಹೌದ್ರಿ… ಗೌಡ್ರ, “ಹಳೆ ತಲೆಮಾರು ಹೋದ ಮ್ಯಾಲ್ ಹೊಸತಲೆ ಮಾರಿನವ್ರು ತಮ್ಮ ಹಿರಿಕರು ನಡ್ಸಿ ಕೊಂಡು ಬಂದಿದ್ದ ಕಲೆಗಳಿಂದ ತಮ್ಮ ಹೊಟ್ಟಿ ತುಂಬೋದಿಲ್ಲ ಅಂತ್ ಬೇರೆ ಕೆಲ್ಸಕ್ಕ್ ಹೊಂದಿಕೊಂಡ್ ಬಿಟ್ಟಾರ, ಹಿಂಗಾಗಿ ನಮ್ಮ ಸಂಸ್ಕ್ರತಿ ವಕ್ತಾರರು ಇದ್ದಂಗ ಇದ್ದ ಈ ಜನಾಂಗದವ್ರು ಮತ್ತ ಇವ್ರ ಕಲೆ ಕಣ್ಮರೆ ಆಗ್ಯಾರ್ ನೋಡ್ರಿ”
ಹೌದೋ, ನಿನ್ನ ಮಾತು ನೂರಕ್ಕ ನೂರು ಬರೋಬ್ಬರಿ ಐತಿ…. “ಮೊದ್ಲ ಕಲಾವಿದರ‍್ನ ಕರ‍್ಸಿ, ಅವ್ರಿಗೆ ಬೇಕಾದಷ್ಟು ಕಾಳು-ಕಡಿ ಕೊಟ್ಟು ಕಳ್ಸತಿದ್ರು.
“ಕಿನ್ನರಿಯ ಸ್ವಾಮಿ ನನ್ನ ಕೇರಿಗೆ ಬಾರೊ ನಮ್ಮಲ್ಲಿ ಒಬ್ಬ ಸೂಜಾಣ ಕಂದಯ್ಯ ನಿನ್ನ ಕಿನ್ನುಡಿಗೆ ದನಿಯ ಕೊಡ್ತಾನ” ಅಂತ್ ಕಿನ್ನರಿಯ ಜೋಗಿನ ಕರಿತಿದ್ರು. ಸುಸಂಸ್ಕೃತ- ಅಸಂಸ್ಕೃತರೆನ್ನದೆ, ಮೇಲು-ಕೀಳು ಎನ್ನದೆ ವಿದ್ಯಾವಂತ-ಅವಿದ್ಯಾವಂತ ಎನ್ನದೆ ಎಲ್ಲರೂ ಅವರನ್ನು ಕರೆದು ಹಾಡಿಸುವ ಮೂಲಕ ಅವ್ರು ಗೌರವಿಸುತ್ತಿದ್ರು”.
“ಕಿನ್ನರಿಜೋಗಿಗಳ ವೇಷಭೂಷಣ ಮೋಹಕವಾದುವು. ಆಕರ್ಷಕವಾದ ಬಣ್ಣದ ಮುಂಡಾಸು, ಮಣಿಕುಚ್ಚು, ತುರಾಯಿ, ಮುತ್ತಿನ ಸರ. ಗಾಜಿನ ಕೊಳವೆ, ಗುಳಾಪುಗಳು-ಇದನ್ನು ಅಲಂಕರಿಸುತ್ತಿದ್ದವು. ಒಂದು ಬದಿಯಲ್ಲಿ ಬಣ್ಣದ ವಸ್ತುವೊಂದನ್ನು ಸಿಕ್ಕಿಸಿ ಸಣ್ಣ ತ್ರಿಶೂಲವನ್ನು ಅಲ್ಲಿ ಅಳವಡಿಸುವರು. ಹಣೆಯಲ್ಲಿ ವಿಭೂತಿ ಗಂಧಗಳೆರಡನ್ನೂ ಧರಿಸುವುದು ಸಂಪ್ರದಾಯ. ಕರಿಯ ನಿಲುವಂಗಿ, ಶುಭ್ರವಾದ ಕಚ್ಚೆಯ ಪಂಚೆ, ಹೆಗಲಲ್ಲಿ ಜೋಳಿಗೆ, ಕೈಯಲ್ಲಿ ಕಿನ್ನರಿ ಹಿಡಿದು ಊರಾಡಲು ಹೊರಡುತ್ತಿದ್ದ ಇವರ ಮೋಜು ವಿಶಿಷ್ಟ ಆಗಿತ್ತು. ಕೆಲವು ಜೋಗಿಗಳು ಕಾವಿಬಣ್ಣ ಕಲ್ಗಿ ತುರಾಯಿ ಮಣಿ ಮುಂಡಾಸು ಕೊರಳ ರುದ್ರಾಕ್ಷಿ ಮೈಮೇಲೆ ಬಣ್ಣಬಣ್ಣದ ವಸ್ತ್ರ-ಇವುಗಳೊಡನೆಯೂ ಕಾಣಿಸಿಕೊಳ್ಳುತ್ತಿದ್ದರು. ಆದ್ರ ಇವ್ರ ವೇಷಭೂಷಣದ ವೈಖರಿ ಈಗ ಕಣ್ಮರೆಯಾಗೇತಿ. ಈ ಸಂಪ್ರದಾಯ ಸಂಪೂರ್ಣವಾಗಿ ಮರೆತುಹೋಗೇತಿ ನೋಡು”
ಅಲ್ಲಾ ಗೌಡ್ರ ಹಿಂಗಾದ್ರ ಹೆಂಗ್ಯ, ಇವ್ರನ್ನ ಕಾಪಾಡೋರು ಯಾರು?.
ಯಾರಾ ಕಾಪಾಡ್ತಾರೋ? ಕಾಪಾಡಬೇಕಾದರೋ ಇವ್ರ ಹೊಟ್ಟಿಮ್ಯಾಗ್ ಹೊಡ್ತಾರ!. ಇನ್ನ ನನ್ನ ನಿನ್ನಂತ ಬಡಪಾಯಿಗಳು ಏನು ಮಾಡಕಾ ಆಕ್ಕೈತಿ?
ಹೌದು, ಎಲ್ಲಿಗೆ ಬಂತಪಾ ನಿಮ್ಮ ಧರ್ಮಸ್ಥಳದ ಪುರಾಣ? ಟ್ರಂಕ್‌ನ ಸುಂಕದಾಟ, ಚೀನಾದವ್ರನ್ ಕಂಡ್ರ ಉರುಕೊಳ್ಳತ್ತಿದ್ದ ನಿಮ್ಮ ಮಂದಿ ಈಗ ನೋಡಿದ್ರ ಚೀನಾದವ್ರ ಜೋತಿಗೆ ಗೆಳೆತನ ಬೆಳ್ಸಾಕ ಹತ್ತೀರಲ್ಲ ಏನು ನಿಮ್ಮ ಹಕಿಕತ್?
ಹೌದ್ರಿ, “ಟ್ರಂಕ್ ಇಲ್ಲಾಂದ್ರ ನಮ್ಗ ಬ್ಯಾರೇ ಗತಿ ಇಲ್ಲಾ ಅಂತ ಮಾಡಿರೇನು”? “ಸಂದ್ಕಾ, ಚೆಂದ್ಕಾ, ಚೆರ‍್ಗಿ, ಪರ‍್ಗಿ ಇದ್ದಿರ‍್ತಾವು!, ಅಂವಾ ಹೋದ್ರ ಎಷ್ಟು, ಬಿಟ್ಟರ ಎಷ್ಟು? ಒಟ್ಟಿನ್ಯಾಗ ಅಂವಾ ವೇಸ್ಟು. ಅದ್ಕ ಈಗ ನಾವು ಚೀನಾದವ್ರ ಜೊತಿಗೆ ದೋಸ್ತಿ ಬೆಳೆಸಾಕ ಹತ್ತೇವಿ. ಈ ದೋಸ್ತಿ ಯಾವಾಗ ಮುರದ ಬಿಳತೈತಿ ಅಂತ ಪ್ರಶ್ನೆ ಮಾಡಬ್ಯಾಡ್ರಿ. ದಿನಾ ನೀವು ೨೫+೩೬೫ ಸುದ್ದಿ ಚಾನಲ್ ನೋಡೋದಿಲ್ಲಾ? ಹಂಗ್ ಬೆಳಿಗ್ಗೆ ಒದ್ರಾಕ ಹತ್ತಿದವ್ರು ಒಂದಕ್-ಎರಡಕ್ಕ್ ಹೋಗಲಿಲ್ಲದಂಗ್ ಒದರೆ ಒದರತಾರ, ನಮ್ದರಾಗ ಮೊದ್ಲ ನೋಡ್ರಿ, ಈಗ ಆ ಗುಂಡಿ ತೋಡಿದ್ರು, ಮತ್ತ ಬ್ಯಾರೇ ಗುಂಡಿ ತೋಡಿದ್ರು, ಆದ್ರೂ ಏನು ಸಿಕ್ಕಿಲ್ಲ. ಇದ್ರಾಗೂ ಏನು ಸಿಕ್ಕಿಲ್ಲ, ಮುಂದ ತೋಡೋಗುಂಡಿ ಒಳ್ಗ ಏನಾದ್ರು ಸಿಗಬಹುದೇ? ಎನ್ನುತ್ತಾ ಜನ್ರ ತಲಿಗೆ ಹುಳಾ ಬಿಡ್ತಾ, ತಾವು ಗುಂಡಿಗೆ ಬಿಳೋದಲ್ದ ಜನ್ರನ್ನು ಸಹ ಗುಂಡಿಗೆ ಬಿಳಸಾಕ ನೋಡ್ತಾರ. ಈ ಸುದ್ದಿ ನೋಡಿ, ನೋಡಿ ತಲೆ ಅನ್ನೋದು ಕೆಟ್ಟ ಕೆರಾ ಹಿಡ್ದು ಹೋಗೇತಿ. ಮ್ಯಾಲ್ ಈ ರಾಜಕಾರ‍್ಣಿಗಳು ಉರಿಯೋ ಬೆಂಕಿನ ಆರ‍್ಸಾಕ ನೋಡವಲ್ರು, ಇದ್ರಾಗ ಮೈ-ಕೈ ಕಾಸಿಗೊಂಡು ಮತಗಳನ್ನ ಬೆಚ್ಚಗ ಮಾಡಿಕೊಳ್ಳಾಕ ಹೊಂಟಾರ. ಇವ್ರು ಹೊಟ್ಟಿಗೇನು ತಿಂತಾರ ಅಂತ್”?
ನೋಡ್ಪಾ “ಅವ್ರು ಹೊಟ್ಟಿಗೇನು ತಿಂತಾರ ಅಂತ್ ಹೇಳಾಕ ನಾ ಏನು ಬ್ರಹ್ಮಾಂಡ ಗುರೂಜಿ ಅಲ್ಲ, ಅವ್ರು ನಾನು-ನೀನು ತಿನ್ನೋ ಹಿಂಡಿ-ರೊಟ್ಟಿ ತಿಂದ್ರಿದ್ರ ಅವ್ರು ಹಿಂಗ್ ಮಾತನಾಡತಿದ್ದಿಲ್ಲ, ಅವ್ರು ಮಾತಾಡೋದ ನೋಡಿದ್ರ ಅವ್ರು ಹೊಟ್ಟಿಗೆ ಬ್ಯಾರೇನ್ ತಿನ್ನೋಹಂಗ್ ಕಾಣತೈತಿ”!.
ಹೋಗ್ಲಿ ಬೀಡ್ರಿ, ಅವ್ರಿಗೆ ಮಾಡಾಕ ಬ್ಯಾರೇ ಕೆಲ್ಸಾ ಇಲ್ಲಾ, “ಗೋದಿ ಹಿಂಗ್, ರಾವಣಗಾಂಧಿ, ಟ್ರಂಕ್‌ಹೆಂಗ್ಯ, ನಾವು ಹಿಂದ್ ಅವ್ರು ಅಹಿಂದ್ ಅಂತ್ ಬಾಯಿ ತಗದ್ರ ಬರಿ ಹೆಣದವಾಸ್ನಿ ಇವ್ರ ಮಾತಿನ್ಯಾಗ ಇರತೈತಿ. ಕುಂತ್ರ, ನಿಂತ್ರು ಪ್ರತಿಯೊಂದ್ರಾಗ ತಪ್ಪ ಹುಡ್ಕಿ, ಹುಡ್ಕಿ ಆಡಳಿತ ಪಕ್ಷ-ವಿರೋಧಪಕ್ಷ ಅಂತ್ ಗುದ್ಯಾಡತಾರ್. ಹಂದಿ ಕಣ್ಣಾಗ ಬರಿ ಹೇಸ್ಗಿ ಅನ್ನೊಂಹಂಗ್ ಇವ್ರ ಮಾತು-ನಡೆ-ನುಡಿ ಆಗ್ಯಾವು ನೋಡಿ”.
ಅಲ್ಲೋ? “ಮಳಿ ಹೆಚ್ಚಾಗಿ ಜನ ಕಂಗಾಲಾಗ್ಯಾರ, “ರೈತರು ಕೈಗೆ ಬಂದ್ ಬೆಳಿ ಬಾಯಿಗೆ ಬರಲಿಲ್ಲ ಅಂತ್ ಎಸ್ನಾ ಹಚಿ ಗೆಂಡ್ಯಾರ, ರಾಜ್ಯದಾಗ ಅತೀ ಹೆಚ್ಚು ರೈತರು ಹಾವೇರಿಜಿಲ್ಲಾದಾಗ ಆತ್ಮಹತ್ಯೆ ಮಾಡಿಕೊಂಡಾರ, ಇತ್ತೀಚೆಗಂತು ಯಾವ್ ಪೇಪರ್ ನೋಡಿದ್ರು ಸಾಲ ಬಾಧೆ-ರೈತ ಆತ್ಮಹತ್ಯೆ ಅನ್ನೋ ಸುದ್ದಿ ಮ್ಯಾಲಿಂದ್ ಮ್ಯಾಲ್ ಪ್ರಕಟ ಆಗಾಕಹತ್ಯಾವು, ಹಿಂಗಾದ್ರ ಹೆಂಗ್ಯೋ ಮಾರಾಯ?, ನಮ್ಮ ರೈತರನ್ ಕಾಪಾಡೋರು ಯಾರು”?.
ನೋಡ್ರಿ “ಇವ್ರಿಗೆ ನಮ್ಮ ರೈತರ ಚಿಂತಿಗಿಂತ್ ಓಟ್ ಬ್ಯಾಂಕಿನ ಚಿಂತಿ ಬಾಳಾ ಹತ್ತೈತಿ….. ಅದ್ಕ ದಸ್ರಾ ಉದ್ಘಾಟನೆಯನ್ನ ಭಾನು ಅಕ್ಕ ಮಾಡಬಾರ‍್ದು ಅಂತ್ ತಕರಾರು ತಗದಾರ್, ಇಷ್ಟ ದಿವ್ಸ್ ಬಿಲಾ ಸೇರಿದ್ದ ಇಲಿ, ಹೆಗ್ಣಾ ಬಿಲದಿಂದ ಹೊರ‍್ಗ ಬಂದು ಹುಚನಾಯಿ ಕಡ್ದರಹಂಗ್ ಸಿಕ್ಕಿದ್ದ ಚಾನ್ಸ್ ಅಂತ್ ಮುಕಳಿ-ಬಾಯಿ ಏಕಾಗಿ ಸ್ಥಿಮಿತ ಕಳಕೊಂಡು ಬಾಯಿಗೆ ಬಂದಂಗ್ ಒದ್ರಾಕ ಹತ್ಯಾರ್ ನೋಡ್ರಿ”.
ಹೌದು, ಈ ಬಗ್ಗೆ ನಮ್ಮ ಸಿಎಂ ಸಿದ್ರಾಮಣ್ಣ ದೂಸ್ರಾ ಮಾತಾಡಾವಲ್ರರಲ್ಲ ಯಾಕ?
ಅಲ್ರಿ ಮಾತು ಮನಿ ಕೆಡ್ಸಿತು, ತೂತು ಒಲಿ ಕೆಡ್ಸಿತು ಅನ್ನೋ ಆದಿ ಮಾತು ಕೇಳಿರಿಲ್ಲ ನೀವು, ಹಿಂಗಾಗಿ ಸಿದ್ದ್ರಾಮಣ್ಣ ಈ ಬಗ್ಗೆ ಮಾತಾಡ್ತಾ ಇಲ್ಲ, “ಆಡದೇ ಮಾಡುವವನು ರೂಢಿಯೋಳಗೆ ಉತ್ತಮನು” ನಮ್ಮ ಸರ್ವಜ್ಞನ ವಚನದಂಗ್ ಸಿದ್ದ್ರಾಮಣ್ಣ ಈ ಟೀಕಾ ಮಾಡೋರಿಗೆ ಮಾರುತ್ತ್ರಾ ಕೊಡ್ದ, ತಾವು ಹಿಡ್ದ ಕೆಲ್ಸಾ ಸಾಧ್ಸಾಕ ಹತ್ಯಾರ ನೋಡಿ”.
ನೀ ಏನ ಅನ್ನೋ ಸಿದ್ದ್ರಾಮಣ್ಣ ಮದ್ಲಿನ್ ಸಿದ್ದರಾಮಣ್ಣ ಇದ್ದಂಗ್ ಇಲ್ಲಾ ನೋಡು..
ನೀವು ಹಂಗ್, “ಅಲ್ರಿ ನೀವು ಮದ್ಲ ಇದ್ದಂಗ್ ಅದೀರನು? ನಿಮ್ಗು ವಯಸ್ಸಾಗೇತ, ಅವ್ರು ಹಂಗ್ ಅಧಿಕಾರ ನಡ್ಸಿ ಮಾಗ್ಯಾರ, ಮೊದ್ಲ ಎಲ್ಲಾರ‍್ನು ಹಳ್ದಿ ಕಣ್ಣಿಂದ ನೋಡೋದ್ ಬಿಡ್ರಿ….. ನಡ್ರಿ ನಡ್ರಿ ಮಾತಾಡಿ ಮಾತಾಡಿ ಸಾಕಾಗೇತಿ, ಹಿಡ್ದ್ ಮಳಿ ಬಿಡವಲ್ದು, ಕಾಕಾನ ಹೋಟೆಲ್ಗೆ ಹೋಗಿ ಶುಂಠಿ ಕಷಾಯ ಕುಡೇನ ನಡ್ರಿ ಎನ್ನುತ್ತಾ ಇಬ್ಬರು ಮಾತಿಗೆ ವಿರಾಮ ನೀಡಿದರು.
ಹಾವೇರಿಯಾಂವ್
ಮಾಲತೇಶ ಅಂಗೂರ. 

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...