ವಾಲ್ಮೀಕಿ ಜಯಂತಿಯಂದು ವಾಲ್ಮೀಕಿಗೆ ಅವಮಾನ!-ಹಾವೇರಿಜಿಲ್ಲೆಯಲ್ಲಿ ಎರಡು ಮಹಾ ಶಿಕ್ಷಣ ಸಂಸ್ಥೆಗಳಲ್ಲಿ ಉಡಾಫೆ ವರ್ತನೆ!!

Date:

ಹಾವೇರಿ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವನ್ನು ನಾಡಿನಾದ್ಯಂತ ಅ.೭ರಂದು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ವಾಲ್ಮೀಕಿ ಜಯಂತಿ ಆಚರಣೆ ಸರ್ಕಾರಿ ದಿನಾಚರಣೆಯಾಗಿದ್ದು, ಸರಕಾರಿ ಹಾಗೂ ಅರೆ ಸರಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಕಡ್ಡಾಯಗೊಳಿಸಿತ್ತು. ಆದರೆ ಜಿಲ್ಲೆಯ ಎರಡು ಪ್ರತಿಷ್ಠಿತ ಮಹಾ, ಮಾಹ ಶಿಕ್ಷಣ ಸಂಸ್ಥೆಗಳಲ್ಲಿ ಅ.೭ರಂದು ವಾಲ್ಮೀಕಿ ಜಯಂತಿ ಆಚರಿಸಿದೇ ಅವಮಾನಿಸಿದ ಘಟನೆಗಳು ತಡವಾಗಿ ಬೆಳಕಿಗೆ ಬಂದಿವೆ.
ಹಾವೇರಿಜಿಲ್ಲೆಯ  ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ತಾಯಿ ಸ್ಥಾನದಲ್ಲಿರುವ ಹಾವೇರಿಯ ಮಹಾ ಶಿಕ್ಷಣ ಸಂಸ್ಥೆಯಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿರುವುದಾಗಿ ಕೊಚ್ಚಿಕೊಳ್ಳುವ ಪುಣ್ಯಾತ್ಮನೊಬ್ಬ ಅ.೭ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವುದನ್ನು ಬಿಟ್ಟು, ಅಂದಿನ ರಜೆಯ ಮಜಾ ಉಡಾಯಿಸಲೆಂದು ತನ್ನ ವ್ಯಾಪ್ತಿಯ ಕೆಲ ಸಿಬ್ಬಂದಿಯನ್ನು ಕಟ್ಟಿಕೊಂಡು ಅ.೬ರಂದು ಸೂಟು-ಬೂಟಿನ ಸಾಡೆಸಾತಿ ವಾಲ್ಮೀಕಿ ಜಯಂತಿ ಆಚರಿಸುವ ಮೂಲಕ ಸರಕಾರಿ ರಜೆಯನ್ನು ಬಳಸಿಕೊಂಡಿರುವ ಸಂಗತಿ ಹೊರ ಬಂದಿದೆ.
ಅ.೬ರಂದು ಶಿಕ್ಷಣ ಸಂಸ್ಥೆಯಲ್ಲಿನ ಕೋಣೆಯೊಂದರಲ್ಲಿ ಕಪ್ಪು ಹಲಗೆಯಲ್ಲಿ “ಅ.೭ಎಂದು ಮಹರ್ಷಿ ವಾಲ್ಮೀಕಿ ಜಯಂತಿ” ಎಂದು ಬರೆಸಿ ಅ.೬ರಂದು ಪೋಟೋಗಳನ್ನು ತಗೆಸಿಕೊಂಡು ಅ.೭ರಂದು ಆಚರಿಸಬೇಕಿದ್ದ ವಾಲ್ಮೀಕಿ ಜಯಂತಿಯನ್ನು ಅ.೬ರಂದು ಆಚರಿಸುವ ಮೂಲಕ ಸರ್ಕಾರಿ ಆದೇಶವನ್ನು ಧಿಕ್ಕರಿಸಿ ತನ್ನನ್ನು ಪ್ರಶ್ನೆ ಮಾಡುವವರು ಯಾರು? ಎನ್ನುವ ಉಡಾಫೆ ವರ್ತನೆ ತೋರಿದ್ದು ವಿಪರ್ಯಾಸವೇ ಸರಿ. ಸಂಸ್ಥೆಯ ಮುಖ್ಯಸ್ಥನೇ ರಜೆಯ ಮಜಾ ಉಡಾಯಿಸಲು ಅ.೬ರಂದು ವಾಲ್ಮೀಕಿ ಜಯಂತಿ ಆಚರಿಸಿದ ಬಗ್ಗೆ ಸಿಬ್ಬಂದಿ ಮೌನಮುರಿದಿಲ್ಲ!. ಮುಖ್ಯಸ್ಥನ ಹಾದಿ ಅನುಸರಿಸಿದ್ದಾರೆ. ಈ ಬಗ್ಗೆ ಅಧಿಕೃತ ದಾಖಲೆಗಳು ಬೇಕಾದಲ್ಲಿ ಅ. ೬ ಮತ್ತು ಅ.೭ರಂದು ಶಿಕ್ಷಣ ಸಂಸ್ಥೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ಮತ್ತು ಶಾಲಾ ಹಾಜರಾತಿ ದಾಖಲಿಗಳನ್ನು ಪರೀಕ್ಷಿಸಿದರೇ ಇವರ ಗೋಸುಂಬೆ ಬಣ್ಣ ಬಯಲಾಗುತ್ತದೆ.
ಇಂತದೇ ಇನ್ನೊಂದು ಘಟನೆ ಬ್ಯಾಡಗಿ ತಾಲೂಕಿನ ಶಿಕ್ಷಣ ಸಂಸ್ಥೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ಶಿಕ್ಷಣ ಸಂಸ್ಥೆಯಲ್ಲಿ ಅ.೭ರಂದು ವಾಲ್ಮೀಕಿ ಜಯಂತಿಯಂದು ಶಿಕ್ಷಣ ಸಂಸ್ಥೆಗೆ ರಜೆ ನೀಡದೇ ತರಗತಿಗಳನ್ನು ನಡೆಸಲಾಗಿದೆ. ಅದೇ ಅ.೮ರಂದು ಶಿಕ್ಷಣ ಸಂಸ್ಥೆಗೆ ರಜೆ ಗೋಷಣೆ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೇ ಸಂಸ್ಥೆಯ ಮುಖ್ಯಸ್ಥ ಈ ಶಿಕ್ಷಣ ಸಂಸ್ಥೆ ಯಾರದೂ ಎಂದು ಗೊತ್ತೇ? ನಮಗೆ ಸರಕಾರಿ ಆದೇಶ ಅನ್ವಯಿಸುವುದಿಲ್ಲ ಎಂದು ಉಡಾಫೆ ಮಾತುಗಳನ್ನು ಆಡಿದ್ದಾನೆ. ಈ ಬಗ್ಗೆ ಡಿಡಿಪಿಯು ಅವರನ್ನು ಪ್ರಶ್ನಿಸಿದಾಗ ಅವರು ಈ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ವಿಚಾರಿಸುವುದಾಗಿ ಹಾರಿಕೆ ಉತ್ತರ ನೀಡಿದ್ದಾರೆ. ಈ ಬಗ್ಗೆಯೂ ಈ ಶಿಕ್ಷಣ ಸಂಸ್ಥೆಯಲ್ಲಿ ಸಿಸಿ ಕ್ಯಾಮರಾ ಪುಟೇಜುಗಳನ್ನು ಪರಿಶೀಲಿಸಿದರೆ  ಇವರ ಬಣ್ಣ ಬಯಲಾಗುತ್ತದೆ.
ಮಹನೀಯರ ದಿನಾಚರಣೆಗೆ ಸರ್ಕಾರ ರಜೆ ಘೋಷಣೆ ಮಾಡುವ ಮೂಲಕ ಈ ಆಚರಣೆಗಳಲ್ಲಿ ಸರ್ವರೂ ಭಾಗವಹಿಸುವ ಮೂಲಕ ಮಹನೀಯರ ಆದರ್ಶಗಳನ್ನು ತಿಳಿದುಕೊಂಡು ಅನುಸರಿಸಲಿ ಎನ್ನುವ ಸದಾಶಯಹೊಂದಿದೆ. ಆದರೆ ಈ ದುರುಳರು ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೇ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು, ರಜೆಯನ್ನು ತಮಗಿಷ್ಟ ಬಂದಂತೆ ಉಪಯೋಗಿಸಿಕೊಳ್ಳುವ ಮೂಲಕ ತೋರಿದ ಉಡಾಫೆ ವರ್ತನೆಗಳಿಗೆ ಲಂಗು-ಲಾಗಾಮು ಬಿಳಬೇಕಿದೆ. ಮುಂಬರುವದಿನಗಳಲ್ಲಿ ಈರೀತಿಯ ಆಚರಣೆಗಳು ನಡೆಯದೇ ಮಹನೀಯರಿಗೆ ಗೌರವ ತುರುವ ರೀತಿಯಲ್ಲಿ ಆಚರಣೆಗಳು ನಡೆಯಬೇಕೆನ್ನುವುದು ಜನಾಗ್ರಹವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!  ಹಾವೇರಿ :...

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ ಹಾವೇರಿ: ಶ್ರೀರಾಮಚಂದ್ರನ ಜನ್ಮ ದಿನವನ್ನು ಶುಕ್ರವಾರ  ಶ್ರದ್ಧಾ-ಭಕ್ತಿಯಿಂದ...

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ...

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ ಜೈಲು ಶಿಕ್ಷೆ ಹಾಗೂ ರೂ.೧೮ ಸಾವಿರ ದಂಡ

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ...