ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಅರ್ಜಿ ಸಲ್ಲಿಕೆ

Date:

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಡಾ. ಕುಬೇರಪ್ಪ ಅರ್ಜಿ ಸಲ್ಲಿಕೆ
ಹಾವೇರಿ: ಈಗಾಗಲೇ ಚುನಾಚಣೆ ಘೋಷಣೆಯಾಗಿರುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಅಕ್ಟೋಬರ್ ೦೬ ರಂದು ಮಧ್ಯಾಹ್ನ ಧಾರವಾಡದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಉಮೇದುವಾರಿಕೆಯ ಅರ್ಜಿಸಲ್ಲಿಸುವುದಾಗಿ ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷರಾಗಿದ್ದ ರಾಣೇಬೆನ್ನೂರಿನ ಡಾ. ಆರ್.ಎಂ.ಕುಬೇರಪ್ಪ ಘೋಷಣೆ ಮಾಡಿದ್ದಾರೆ. 
ಪತ್ರಿಕಾ ಹೇಳಿಕೆ ನೀಡಿರುವ ಅವರು ೨೦೨೦ ರಲ್ಲಿ ಈ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಅಭ್ಯರ್ಥಿ ಇರಲಿಲ್ಲ, ಹಿಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಹಾಗೂ ಕೆಪಿಸಿಸಿ ಅಧ್ಯಕ್ಷ  ದಿನೇಶ ಗುಂಡೂರಾವ್‌ರವರು ನನಗೆ ಒತ್ತಾಯ ಮಾಡಿ ಚುನಾವಣೆಗೆ ಸ್ಪರ್ಧೆಮಾಡಿಸಿದ್ದು, ಕಾಂಗ್ರೆಸ್ ಪಕ್ಷದ ಗೌರವ ಉಳಿಸಲು ಸ್ಪರ್ಧೆಮಾಡಿ ಕೊಟ್ಯಾಂತರ ಹಣ ಖರ್ಚು ಮಾಡಿಕೊಂಡಿದ್ದೆ, ಆಗ ನಮ್ಮ  ಇಡಿ ಕ್ಷೇತ್ರದಲ್ಲಿ ಪಕ್ಷದಲ್ಲಿ ಕೇವಲ ಐದಾರು ಶಾಸಕರು ಮಾತ್ರ ಇದ್ದು ನಮಗೆ ಹಿನ್ನೆಡೆಯಾಗಿತ್ತು, ಈಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು  ಕ್ಷೇತ್ರದಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಾಸಕರಿದ್ದು, ನಾನು ಕಳೆದ ೦೨ ವರ್ಷದಿಂದ ಎಲ್ಲಾ ತಯಾರಿ ಮಾಡಿಕೊಂಡಿದ್ದು ಇಡೀ ಕ್ಷೇತ್ರ ತಿರುಗಾಡಿ ನಾಲ್ಕೂ ಜಿಲ್ಲೆಗಳಲ್ಲಿ ಅರ್ಜಿಗಳನ್ನು ಹಂಚಿ ಮತದಾರರ ನೊಂದಣಿ ಮಾಡಿಸಿದ್ದು, ನನ್ನ ಯಾವ ತ್ಯಾಗವನ್ನೂ ಪರಿಗಣಿಸದೇ ಇತ್ತೀಚೆಗೆ ಬಿಜೆಪಿಯಿಂದ ಬಂದವರಿಗೆ ಟಿಕೇಟ್ ಘೋಷಣೆ ಮಾಡಲಾಗಿದೆ. 
ಇದನ್ನು ಪ್ರತಿಭಟಿಸಿ, ಹಿಂದುಳಿದ ಸಮಾಜದ ಒಬ್ಬರಿಗೂ ಟಿಕೇಟ್ ನೀಡಲಿಲ್ಲವೆಂಬ ಕಾರಣಕ್ಕಾಗಿ ನಾನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೆ. ಹಾವೇರಿ ಜಿಲ್ಲೆಯ ಆಗಿನ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ  ಶಿವಾನಂದ ಪಾಟೀಲರು, ಈಗಿನ ಜಿಲ್ಲಾ ಉಸ್ತುವಾರಿ ಸಚಿವ  ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾ ಅಧ್ಯಕ್ಷ  ಸಂಜೀವ ನೀರಲಗಿ ಹಾಗೂ ಪಕ್ಷದ  ಸಂಸತ್ ಅಭ್ಯರ್ಥಿ  ಆನಂದ ಗಡ್ಡದೇವರಮಠ ಮುಂತಾದವರು ನನ್ನ ಮನೆಗೇ ಬಂದು ಶೀಘ್ರದಲ್ಲೇ ಸರ್ಕಾರದಲ್ಲಿ ಒಂದು ಹುದ್ದೆ ಕೊಡುವುದಾಗಿ ವಚನಕೊಟ್ಟ ಕಾರಣ ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯಲು ತೀರ್ಮಾನಿಸಿದ್ದೆ. 
ಹೀಗೆ ವಚನಕೊಟ್ಟು ಆರು ತಿಂಗಳು ಕಳೆದರೂ ಸಹ ನನಗೆ ಯಾವುದೇ ಹುದ್ದೆ ನೀಡಲಿಲ್ಲ. ಸುಮಾರು ಐದು ವರ್ಷಗಳ ಕಾಲ ಶಿಕ್ಷಕರು ಮತ್ತು ಪದವೀಧರ ಘಟಕದ ರಾಜ್ಯಾಧ್ಯಕ್ಷನಾಗಿ ರಾಜ್ಯದ ತುಂಬೆಲ್ಲಾ ಸುತ್ತಾಡಿ ಪಕ್ಷ ಕಟ್ಟಿದ್ದೇನೆ. ಪಕ್ಷ ಅಧಿಕಾರದಲ್ಲಿ ಇಲ್ಲದಾಗ, ಯಾರೂ ಅಭ್ಯರ್ಥಿ ಇಲ್ಲದಾಗ ಪಕ್ಷದ ಗೌರವಕ್ಕಾಗಿ ೨೦೨೦ ರಲ್ಲಿ ಪದವೀಧರ ಕ್ಷೇತ್ರಕ್ಕೆ ಚುನಾವಣೆಯಲ್ಲಿ ಸ್ಪರ್ಧೆಮಾಡಿ ಪಕ್ಷದ ಗೌರವ ಉಳಿಸಿದ್ದೇನೆ. ಇದ್ಯಾವುದನ್ನೂ ಕಾಂಗ್ರೆಸ್ ಪಕ್ಷದ ಹಿರಿಯರು ಗೌರವಿಸುತ್ತಿಲ್ಲ. ಇದರಿಂದಾಗಿರುವ ನೋವು ಹಾಗೂ ಬೇಸರದಿಂದ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. 
ನಾನು ಸುಮಾರು ೪೦ ವರ್ಷಗಳಿಗೂ ಹೆಚ್ಚು ಕಾಲದಿಂದ ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. 
ಕ್ಷೇತ್ರದ ತುಂಬೆಲ್ಲಾ ನಾನೇ ಮತದಾರರ ನೋಂದಣಿ ಮಾಡಿಸಿದ್ದೇನೆ. ನನಗೆ ನನ್ನದೇ ಆಗಿರುವಂತಹ ಬೆಂಬಲಿಗರಿದ್ದಾರೆ. ಅವರ ಶ್ರೀ ರಕ್ಷೆ ನನಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ನೂರಾರು ಕೆಲಸ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ, ಇಡೀ ಕ್ಷೇತ್ರದಲ್ಲಿರುವ ನನ್ನ ಎಲ್ಲಾ ಬೆಂಬಲಿಗರು, ಸ್ನೇಹಿತರು ಅಭಿಮಾನಿಗಳು ಹಾಗೂ ಹಿತೈಷಿಗಳು ೦೬ ನೇ ತಾರೀಖು ಮಧ್ಯಾಹ್ನ ಧಾರವಾಡಕ್ಕೆ ಬಂದು ನನಗೆ ಬೆಂಬಲಿಸಬೇಕೆಂದು ಡಾ ಆರ್.ಎಂ.ಕುಬೇರಪ್ಪ ಮನವಿ ಮಾಡಿಕೊಂಡಿದ್ದಾರೆ.
malatesh angur
haveri

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ “ಹುಲಿ ಬೀರ”

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ...

ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ 

ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ  ಹಾವೇರಿ: ಜಿಲ್ಲೆಯ...

“ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ” ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ  ಚೂರಿ ಹೇಳಿಕೆ

"ಆತ್ಮ ಸಂತೋಷದಿಂದ ಸರ್ಕಾರಿ ಕೆಲಸ ನಿರ್ವಹಿಸಿರುವೆ" ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮುನಿಶ್ವರ ...

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ

ಹಾನಗಲ್ ಬಳಿ ಕೂಸನೂರಲ್ಲಿ ಶಿರಸಿಯ ತಾಯಿ,ಮಗನ ಭೀಕರ ಕಗ್ಗೊಲೆ ಹಾವೇರಿ: ಮನೆ ಆಸ್ತಿ...