
ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟದ ಬದುಕು ನಮಗೆ ಆದರ್ಶವಾಗಲಿ; ಉಡಚಪ್ಪ ಮಾಳಗಿ
ಹಾವೇರಿ:ಶೋಷಿತರ ಮನೆ ಮನೆಗಳಲ್ಲಿ ಹೋರಾಟದ ಹಣತೆಯನ್ನು ಹಚ್ಚಿ, ಶೋಷಿತರ ಧ್ವನಿಯಾಗಿ ಹಾಗೂ ಸ್ಪೂರ್ತಿಯಾಗಿ ಕೆಲಸ ಮಾಡಲು ಪ್ರೊ. ಬಿ.ಕೃಷ್ಣಪ್ಪ ಅವರು ನಿರಂತರವಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಹೋರಾಟದ ಬದುಕು ನಮಗೆ ಆದರ್ಶವಾಗಲಿ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ವತಿಯಿಂದ ಆಯೋಜಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಸಂಸ್ಥಾಪಕರಾದ ಪ್ರೊ|| ಬಿ.ಕೃಷ್ಣಪ್ಪ ಅವರ ೨೯ನೇ ಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೊ. ಬಿ.ಕೃಷ್ಣಪ್ಪ ಅವರನ್ನು ದಲಿತ ಚಳುವಳಿಯ ಪಿತಾಮಹ, ರಾಜ್ಯದ ಎರಡನೇ ಅಂಬೇಡ್ಕರ್ ಎಂದು ಹೇಳಬಹುದು.ಅವರು ನಮಗೆ ನೀಡಿದ ಕೊಡುಗೆ ಅಪಾರವಾಗಿದೆ. ಪ್ರೊ. ಬಿ.ಕೃಷ್ಣಪ್ಪ ಅವರ ಬದುಕಿನ ಆದರ್ಶಗಳನ್ನು ಪಾಲಿಸುವ ಮೂಲಕ ಅವರ ಹೋರಾಟದ ಹೆಜ್ಜೆಗಳನ್ನು ಮುನ್ನಡಿಸೋಣ. ಅವರು ಹಚ್ಚಿದ ಶೋಷಣೆಯ ವಿರುದ್ಧದ ಹೋರಾಟದ ಹಣತೆಯನ್ನು ಎಂದಿಗೂ ಹಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರೊ. ಬಿ.ಕೃಷ್ಣಪ್ಪ ಅವರು ನಮಗಾಗಿ ಎಲ್ಲವನ್ನು ತ್ಯಾಗ ಮಾಡಿದ್ದಾರೆ ಅವರು ನಮಗೆ ಸದಾ ಸ್ಪೂರ್ತಿದಾಯಕವಾಗಲಿದ್ದಾರೆ ಎಂದು ಉಡಚಪ್ಪ ಮಾಳಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿಎಸ್ ಎಸ್ ಸಂಚಾಲಕರಾದ ಮಾಲತೇಶ ಯಲ್ಲಾಪುರ,ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ,ಅಲೆಮಾರಿ ಸಮಾಜದ ಅಧ್ಯಕ್ಷರಾದ ಶೆಟ್ಟಿ ವಿಭೂತಿ,ಬಿಎಸ್‌ಪಿ ಪಕ್ಷದ ಅಧ್ಯಕ್ಷರಾದ ಎಂ.ಕೆ ಮಖಬೂಲ್,ಮುಖಂಡರಾದ ಸುಭಾಷ ಚವ್ಹಾಣ,ಸುರೇಶ ಛಲವಾದಿ,ಬಸವಣ್ಣೆಪ್ಪ ಅಳ್ಳಿಳ್ಳಿ,ಬಸವರಾಜ ಕಾಳೆ,ಹನಮಂತಪ್ಪ ಸಿ.ಡಿ, ಹನುಮಂತಪ್ಪ ಹೌಂಶಿ,ಮಹಾದೇವಪ್ಪ ಹರಿಜನ,ಪರಸಪ್ಪ ಹರಿಜನ,ಕೋಟೆಪ್ಪ ಹರಿಜನ,ಮಾಲತೇಶ ಬಜಳ್ಳಿ,ಅಣ್ಣಪ್ಪ ಹರಿಜನ,ಹನುಮಂತಪ್ಪ ಹರಿಜನ,ಸಂತೋಷ ಕನ್ನಮ್ಮನವರ,ಹುಲಿಗೆಪ್ಪ ಕಿಳ್ಳಿತ್ಯಾತರ ಸೇರಿದಂತೆ ಅನೇಕರಿದ್ದರು.

