ಹಾವೇರಿ; ಹೊಂಡದಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವು

Date:

ಹಾವೇರಿ; ಹೊಂಡದಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವು
ಹಾವೇರಿ: ವಾಕಿಂಗ್ ಮಾಡುವಾಗ ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವನ್ನಪ್ಪಿರುವ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಆಲದಕಟ್ಟಿ ಗ್ರಾಮದ ಶಂಭುಲಿಂಗಪ್ಪ ಹಂಸಭಾವಿ (೪೦) ಹಾಗೂ ಶರತ ಹಂಸಭಾವಿ (೮) ಎಂದು  ಗುರುತಿಸಲಾಗಿದೆ.  ತಂದೆ ಶಂಭುಲಿಂಗಪ್ಪ ವಿಶೇಷಚೇತನ ಮಗ ಶರತ್‌ನನ್ನು ವಾಕಿಂಗ್‌ಗೆ ಕರೆದುಕೊಂಡು ಹೋದಾಗ ದುರ್ಘಟನೆ ಸಂಭವಿಸಿದೆ.
ಗ್ರಾಮದ ಮಧ್ಯದಲ್ಲಿರುವ ಹೊಂಡದ ಬಳಿ ವಾಕಿಂಗ್ ಮಾಡುವಾಗ ಹೊಂಡದ ಸುತ್ತ ಹಸಿರು ಪಾಚಿ ಕಟ್ಟಿದ್ದರಿಂದ ಬಾಲಕ ಶರತ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಮಗನನ್ನು ರಕ್ಷಣೆ ಮಾಡಲು ಮುಂದಾಗಿದ್ದ ಶಂಭುಲಿಂಗಪ್ಪನೂ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಈಜು ಬಾರದೆ ಮೃತಪಟ್ಟಿದ್ದಾರೆ. ಬೆಳಗಿನ ಹೊತ್ತು ಹೊಂಡದ ಬಳಿ  ಹೊಲಕ್ಕೆ ಹೊರಟಿದ್ದ ಸ್ಥಳೀಯರೋರ್ವರು ಹೊಂಡದಲ್ಲಿ ಬಿದ್ದಿದ್ದ ತಂದೆ-ಮಗನ ರಕ್ಷಣೆಗೆ ಪರಿಚಿತರಿಗೆ ಪೋನ ಕರೆಮಾಡಿದರು, ಆದರೆ ಅಷ್ಟರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶವಗಳನ್ನು ಹೊರಕ್ಕೆ ತಗೆದು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಸ್ಥಳಲ್ಲಿ ಮೃತರ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ : ಅನುದಾನಿತ ಶಾಲಾ -ಕಾಲೇಜುಗಳ ಹುದೆ ತುಂಬಲು ಒಕ್ಕೂಟದ ಆಗ್ರಹ 

ಹಾವೇರಿ : ಅನುದಾನಿತ ಶಾಲಾ -ಕಾಲೇಜುಗಳ ಹುದೆ ತುಂಬಲು ಒಕ್ಕೂಟದ ಆಗ್ರಹ  ಹಾವೇರಿ...

ಡಾ.ರಾಜಕುಮಾರ್ ಮರೋಳ ಅವರಿಗೆ  “ಕರ್ನಾಟಕ ಹೆಲ್ತ್‌ಕೇರ್ ವೈದ್ಯ ರತ್ನ ಪ್ರಶಸ್ತಿ-೨೦೨೬”

ಡಾ.ರಾಜಕುಮಾರ್ ಮರೋಳ ಅವರಿಗೆ  "ಕರ್ನಾಟಕ ಹೆಲ್ತ್‌ಕೇರ್ ವೈದ್ಯ ರತ್ನ ಪ್ರಶಸ್ತಿ-೨೦೨೬" ಹಾವೇರಿ: ಹಾವೇರಿಯ...

ಟಾಕ್ಸಿಕ್: ಲೌಕಿಕ ಬದುಕಿನ ಭ್ರಮಾ ಲೋಕಕ್ಕೆ ಕನ್ನಡಿ ಹಿಡಿದ ಯಶ್ 

ಟಾಕ್ಸಿಕ್: ಲೌಕಿಕ ಬದುಕಿನ ಭ್ರಮಾ ಲೋಕಕ್ಕೆ ಕನ್ನಡಿ ಹಿಡಿದ ಯಶ್ ಚಿತ್ರವಿಮರ್ಶಾ...

ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ

ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ ಹಾಬೇರಿ: ನಾಗೇಂದ್ರನಮಟ್ಟಿ (ನಗರ)...