ಅಧಿಕಾರ ಹಸ್ತಾಂತರ ಗೊಂದಲಕ್ಕೆ ಕೊನೆಗೂ ತೆರೆ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Date:

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಕಸರತ್ತು, ಊಹಾಪೋಹಗಳಿಗೆ ಅಂತಿಮವಾಗಿ ತೆರೆ ಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಶೀಘ್ರದಲ್ಲೇ ಹೊಸ ಮುಖ್ಯಮಂತ್ರಿಯೊಂದಿಗೆ ನೂತನ ಸರ್ಕಾರ ರಚನೆಯಾಗಲಿದೆ.
ಕುರ್ಚಿ ಬದಲಾವಣೆ ಚರ್ಚೆಯ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಹಾರ ಸಭೆ ನಡೆಸಿದರು. ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ, ಸಿದ್ದರಾಮಯ್ಯ ತಮ್ಮ ನಿರ್ಧಾರ ಪ್ರಕಟಿಸಿದರು.
ಅಧಿಕಾರ ಹಸ್ತಾಂತರ ಸಂಬಂಧ ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ನೇತೃತ್ವದ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಬೇರೆಯವರಿಗೆ ನೀಡಲು ಸಮ್ಮತಿಸಿದ್ದರು. ಕಾಂಗ್ರೆಸ್? ನಾಯಕ ರಾಹುಲ್ ಗಾಂಧಿಯವರಿಂದಲೇ ಸಂದೇಶ ಬಂದಿದ್ದರಿಂದ, ಸಿದ್ದರಾಮಯ್ಯ ರಾಜೀನಾಮೆ ನೀಡಲು ನಿರ್ಧರಿಸಿದರು ಎಂದು ವಿಶ್ವಸನೀಯ ಮೂಲಗಳು ಹೇಳಿವೆ.
ಮಂಗಳವಾರವೇ ಸಿದ್ದರಾಮಯ್ಯ ಬೆಂಗಳೂರಿಗೆ ಮರಳಿದ್ದರು. ಆದರೆ ಅಧಿಕಾರ ಹಸ್ತಾಂತರದ ಬಗ್ಗೆ ಕಾಂಗ್ರೆಸ್?ನ ಯಾವೊಬ್ಬ ನಾಯಕರಿಂದಲೂ ಸ್ಪಷ್ಟ ಹೇಳಿಕೆ ಹೊರಬಂದಿರಲಿಲ್ಲ. ಸಿದ್ದರಾಮಯ್ಯ ಅವರೇ ಬ್ರೇಕ್ ಫಾಸ್ಟ್ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದೇ ಹೇಳುತ್ತಿದ್ದರು.ಮಧ್ಯಾಹ್ನ ೩ ಗಂಟೆಗೆ ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯ ಅವರು ರಾಜಭವನದ ಕಾರ್ಯದರ್ಶಿಗೆ ಸಲ್ಲಿಸಿದರು. ರಾಜ್ಯಪಾಲರ ಪರವಾಗಿ ಲೋಕಭವನ ಕಾರ್ಯದರ್ಶಿ ಅವರು ರಾಜೀನಾಮೆ ಪತ್ರವನ್ನು ಸ್ವೀಕರಿಸಿದರು. ಡಿ.ಕೆ. ಶಿವಕುಮಾರ್ ಸೇರಿದಂತೆ ಇನ್ನಿತರ ಸಚಿವರೊಂದಿಗೆ ಆಗಮಿಸಿದ್ದ ಸಿದ್ದರಾಮಯ್ಯ, ರಾಜೀನಾಮೆ ಬಳಿಕ ಅಲ್ಲಿಂದ ಹೊರಟರು. ಇದೀಗ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ.

ಸಿಎಂರಿಂದ ಸಚಿವರುಗಳಿಗೆ ಆರ್ಥಿಕ ಪಾಠ, ಡಿಕೆಶಿಗೆ ಸಹಕರಿಸುವಂತೆ ಮನವಿ
ಸಿಎಂ ಸಿದ್ದರಾಮಯ್ಯ ಅವರಿಂದು ಕಾವೇರಿ ನಿವಾಸದಲ್ಲಿ ವಿದಾಯದ ಭಾಷಣ ಮಾಡಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಕೆ ವೇಳೆ ಹಾಜರಿದ್ದ ಪಕ್ಷದ ಶಾಸಕರು, ಸಚಿವರು, ಆಪ್ತರು ರಾಜೀನಾಮೆಗೂ ಮುನ್ನ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಬೆಳಗ್ಗೆ ಉಪಹಾರ ಸಭೆ ನಡೆಸಿದರು. ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ, ತಾವು ಸಿಎಂ ಹುದ್ದೆಯಿಂದ ಕೆಳಗಿಳಿಯುವುದಾಗಿ ಅವರು ಪ್ರಕಟಿಸಿದ್ದರು. ಇದಕ್ಕೂ ಮುನ್ನ ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ನೇತೃತ್ವದ ಸಭೆಯಲ್ಲಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಕ್ಕೆ ಸಮ್ಮತಿಸಿದ್ದರು.
ಮಾಧ್ಯಮಗೋಷ್ಟಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಿಷ್ಟು: ಎಲ್ಲರಿಗೂ ನಮಸ್ಕಾರ. ನಾನು ಸಿಎಂ ಸ್ಥಾನಕ್ಕೆ ಲೋಕಭವನದಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ. ರಾಜ್ಯಪಾಲರು ಊರಿನಲ್ಲಿ ಇಲ್ಲ. ರಾತ್ರಿ ಬರುತ್ತಾರಂತೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿಗೆ ಕೊಟ್ಟಿದ್ದೇನೆ. ಅನೇಕ ಸಾರಿ ಹೇಳಿದ್ದೇನೆ. ಹೈಕಮಾಂಡ್ ಯಾವಾಗ ಸೂಚಿಸುತ್ತಾರೆ. ಆವಾಗ ನಾನು ರಾಜೀನಾಮೆ ಕೊಡುತ್ತೇನೆ ಅಂದಿದ್ದೆ. ಅದರ ಪ್ರಕಾರ ಮೊನ್ನೆ ಹೈಕಮಾಂಡ್ ರಾಜೀನಾಮೆ ಕೊಡಿ ಅಂತ ಹೇಳಿದ ಮೇಲೆ ರಾಜೀನಾಮೆ ಕೊಡುತ್ತೇನೆ ಅಂದಿದ್ದೆ. ಅದರಂತೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.
ರಾಜ್ಯಪಾಲರು ನನ್ನ ರಾಜೀನಾಮೆ ಪತ್ರವನ್ನು ಅವರು ಬಂದ ಬಳಿಕ ಅಂಗೀಕಾರ ಮಾಡುತ್ತಾರೆ ಅಂತ ವಿಶ್ವಾಸ ಇದೆ. ಸಂವಿಧಾನದ ಪ್ರಕಾರ ಅಂಗೀಕಾರ ಮಾಡಲೇಬೇಕು. ಸಿಎಂ ರಾಜೀನಾಮೆ ಹಾಗೂ ಮುಂದಿನ ಸಿಎಂಗೆ ಅವಕಾಶ ಮಾಡಿಕೊಡುವುದು ಅವರ ಜವಾಬ್ದಾರಿ. ನಮ್ಮ ಪಕ್ಷ ೧೩೫+೧ ಸ್ಥಾನಗಳನ್ನು ಪಡೆದಿದೆ. ಜೊತೆಗೆ ಪಕ್ಷೇತರರು ನಮ್ಮ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ನಾವು ಸಂಪೂರ್ಣ ಬಹುಮತದಲ್ಲಿ ಇದ್ದೇವೆ. ಮುಂದಿನ ಸಿಎಂಗೆ ಅವಕಾಶ ಮಾಡಿಕೊಡುವುದು ಸಂವಿಧಾನಬದ್ಧವಾಗಿದೆ ಎಂಬ ಮಾತು ಹೇಳುತ್ತೇನೆ ಎಂದರು.
ಮೇರು ನಟ ರಾಜಕುಮಾರ್ ಅವರು ಅಭಿಮಾನಿಗಳನ್ನು ದೇವರು ಅಂತ ಕರೆಯುತ್ತಿದ್ದರು. ನಾನು ರಾಜಕಾರಣಿ ನಾನು ಸಂವಿಧಾನವನ್ನೇ ನನ್ನ ಧರ್ಮ ಅಂತ ತಿಳಿದುಕೊಂಡವನು. ಮತದಾರರೇ ನಮ್ಮ ಅಭಿಮಾನಿ ದೇವರು. ಕನ್ನಡ ನಾಡಿನ ಏಳು ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಎರಡು ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಎರಡು ಬಾರಿ ವಿಪಕ್ಷ ನಾಯಕ ಆಗುವ ಅವಕಾಶ ಸಿಕ್ಕಿತ್ತು. ಈ ಅವಕಾಶ ಕೊಟ್ಟ ಸೋನಿಯಾ ಗಾಂಧಿಗೆ, ರಾಹುಲ್ ಗಾಂಧಿಗೆ, ಮಲ್ಲಿಕಾರ್ಜುನ ಖರ್ಗೆಗೆ ಅಪಾರವಾದ ಧನ್ಯವಾದ ತಿಳಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ನಾನು ಕಾಂಗ್ರೆಸ್ ಸೇರಿದ್ದು ೨೦೦೬ರಲ್ಲಿ. ಅಲ್ಲಿಂದ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಕಾಂಗ್ರೆಸ್ ಮುಖಂಡರು, ಶಾಸಕರು, ಸಂಸದರು, ನನಗೆ ಪ್ರೀತಿ ತೋರಿಸಿದ್ದಾರೆ. ಅವರಿಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಎರಡು ಸಾರಿ ಸಿಎಂ ಆಗಿದ್ದಾಗ, ನನ್ನ ಜೊತೆ ಕೆಲಸ ಮಾಡಿದ್ದ ಸಹೋದ್ಯೋಗಿಗಳು ಎಲ್ಲಾ ರೀತಿಯ ಬೆಂಬಲ, ಸಹಕಾರ, ಪ್ರೀತಿಯನ್ನು ತೋರಿದ್ದಾರೆ. ಅವರಿಗೆ ಯಾವಗಲೂ ಚಿರ ಋಣಿಯಾಗಿರುತ್ತೇನೆ. ನಾನು ಹಳ್ಳಿಗಾಡಿನಿಂದ ಬಂದವನು. ನಾನು ಮುದೊಂದು ದಿನ ಶಾಸಕನಾಗಿ, ಮಂತ್ರಿಯಾಗ್ತೇನೆ, ಸಿಎಂ ಆಗ್ತೇನೆ ಎಂಬ ಕನಸು ಕಂಡಿರಲಿಲ್ಲ. ನಾನು ರಾಜಕಾರಣಕ್ಕೆ ಬಂದದ್ದು ಆಕಸ್ಮಿಕ. ನನ್ನ ಕುಟುಂಬದವರು ಯಾರೂ ರಾಜಕಾರಣದಲ್ಲಿ ಇರಲಿಲ್ಲ. ರಾಜಕಾರಣಕ್ಕೆ ಬಂದಾಗಿನಿಂದ ಬುದ್ದ, ಬಸವ, ಅಂಬೇಡ್ಕರ್, ಗಾಂಧೀಜಿ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟವನು. ಸಂವಿಧಾನದಲ್ಲಿ ಅಪಾರವಾದ ನಂಬಿಕೆ ಇಟ್ಟವನು. ನಾವು ಎಲ್ಲಾರೂ ಕುಟುಂಬವಾಗಿ ಬಾಳವೇಕು ಎಂಬ ನಂಬಿಕೆ ಇಟ್ಟವನು. ಆರ್ಥಿಕವಾಗಿ, ಸಾಮಾಜಿಕವಾಗಿ ಈ ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ನಂಬಿಕೆ ಇಟ್ಟವನು. ಅದಕ್ಕಾಗಿನೇ ಬುದ್ದನ ವಿಚಾರ, ಬಸವಣ್ಣನ ವಿಚಾರ, ಗಾಂಧೀಜಿ ವಿಚಾರ, ಅಂಬೇಡ್ಕರ್ ವಿಚಾರ ನಮಗೆ ಆದರ್ಶಪ್ರಾಯ ಎಂದು ನಿರ್ಗಮಿತ ಸಿಎಂ ತಿಳಿಸಿದರು.
ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ: ನಾನು ಯಾವತ್ತೂ ಕೂಡ ಅಧಿಕಾರ, ಹಣದ ಹಿಂದೆ ಹೋದವನಲ್ಲ. ಆಸ್ತಿ, ಪಾಸ್ತಿ ಬಗ್ಗೆ ಯೋಚನೆ ಮಾಡಿಲ್ಲ. ೧೯೭೮ ತಾಲೂಕು ಬೋರ್ಡ್ ಮಂಡಳಿ ಸದಸ್ಯನಾದವನು. ಸುಮಾರು ೫೦ ವರ್ಷ ರಾಜಕಾರಣದಲ್ಲಿ ಇದ್ದೇನೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಾಗಿದೆ. ಇಂದಿನ ರಾಜಕೀಯದಲ್ಲಿ ಜನ ಶಕ್ತಿ ಇರುವವರು ಮಾತ್ರ ರಾಜಕೀಯದಲ್ಲಿ ಇರಲು ಸಾಧ್ಯ. ನಾನೆಂದೂ ಕೂಡ ನಾನು ನಂಬಿದ ಮೌಲ್ಯಗಳ ಜೊತೆ ರಾಜಿ ಮಾಡಿಕೊಂಡಿಲ್ಲ. ನಂಬಿದ ಸಿದ್ಧಾಂತ ಜೊತೆ ರಾಜಿ ಆಗಿಲ್ಲ. ಪ್ರತಿ ಮನುಷ್ಯನಿಗೆ ಕೂಡ ಬದುಕಿನ ಪ್ರಾಥಮಿಕ ಆದ್ಯತೆಯಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ ಒದಗಿಸಬೇಕು ಎಂಬುದು ನನ್ನ ನಂಬಿಕೆ. ಅದಕ್ಕಾಗಿ ಎಲ್ಲಾ ಬಡವರಿಗೆ ಅನ್ನ, ಗೃಹ ಲಕ್ಷ್ಮಿ ಮೂಲಕ ೨೦೦೦ ರೂ. ಕೊಡುವುದು, ಗೃಹ ಜ್ಯೋತಿ ಮೂಲಕ ಉಚಿತ ವಿದ್ಯುತ್, ಯುವ ನಿಧಿ, ಶಕ್ತಿ ಯೋಜನೆ ಕೊಡಲಾಗಿದೆ. ಬರ ಬಂದಾಗ ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ರಾಜ್ಯದ ಜಲ, ನೆಲ, ಭಾಷೆ ಅದರಲ್ಲಿ ಯಾವತ್ತೂ ರಾಜಿ ಆಗಿಲ್ಲ. ಅದು ರಾಜ್ಯದ ಹಕ್ಕು. ೮ ವರ್ಷ ಸಿಎಂ ಆಗಲು, ಎರಡು ಬಾರಿ ಪ್ರತಿಪಕ್ಷ ನಾಯಕನಾಗಲು ಕಾಂಗ್ರೆಸ್ ಅವಕಾಶ ಕೊಟ್ಟಿದೆ ಎಂದು ಹೇಳಿದರು.
ಸಂವಿಧಾನ ಇಲ್ಲದಿದ್ದರೆ ಕುರಿ ಮೇಯಿಸುತ್ತಿದ್ದೆ: ಜೆಡಿಎಸ್ ಪಕ್ಷದಿಂದ ವಜಾ ಮಾಡಿದಾಗ, ನಾನು ಅಹಿಂದ ಚಟುವಟಿಕೆ ಮಾಡುತ್ತಿದ್ದಾಗ ಕಾಂಗ್ರೆಸ್?ನ ಅಹಮದ್ ಪಟೇಲ್ ಮೂಲಕ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆಯಾದೆ. ಆವತ್ತು ನನ್ನ ಜೊತೆ ಎಂಟು ಜನ ಶಾಸಕರು ಕಾಂಗ್ರೆಸ್ ಸೇರಿದ್ದರು. ಅವರಿಗೂ ನಾನೂ ಚಿರಋಣಿ. ರಾಜಕಾರಣದಲ್ಲಿ ಕೊನೆ ಉಸಿರುವ ಇರುವವರೆಗೂ ಕೂಡ ನಾನು ಕೋಮುವಾದಿ ಭಕ್ತಿ ವಿರುದ್ಧ ಹೋರಾಟ ಮಾಡುತ್ತೇನೆ. ಸಂವಿಧಾನ ಇಲ್ಲದಿದ್ದರೆ ವಿದ್ಯಾವಂತನೂ ಆಗುತ್ತಿರಲಿಲ್ಲ, ಶಾಸಕನಾಗುತ್ತಿರಲಿಲ್ಲ, ಮಂತ್ರಿ ಆಗುತ್ತಿರಲಿಲ್ಲ, ಸಿಎಂ ಆಗುತ್ತಿರಲಿಲ್ಲ. ಸಂವಿಧಾನ ಇಲ್ಲದಿದ್ದರೆ ಇಲ್ಲವಾದರೆ ನಾನು ಅವಿದ್ಯಾವಂತನಾಗಿರುತ್ತಿದ್ದೆ, ಕುರಿ ಮೇಯಿಸುತ್ತಿದ್ದೆ. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ, ಜನರ ಸಮಾನತೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತೇನೆ. ಇನ್ನೊಮ್ಮೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ, ನಮ್ಮ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ ಎಂದರು ಸಿದ್ದರಾಮಯ್ಯ.
ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಹೈಕಮಾಂಡ್ ನನಗೆ ರಾಜ್ಯಸಭೆಗೆ ಹೋಗಲು ಹೇಳಿದರು. ನಾನು ಅದನ್ನು ವಿನಮ್ರವಾಗಿ ತಿರಸ್ಕರಿದ್ದೇನೆ. ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕೀಯದಲ್ಲಿ ಆಸಕ್ತಿ ಇದೆ. ರಾಜ್ಯದ ಜನರು ನನ್ನನ್ನು ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಇನ್ನೂ ಎರಡು ವರ್ಷ ಶಾಸಕನಾಗಿ ಕೆಲಸ ಮಾಡುತ್ತೇನೆ. ನಾನು ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ನಾನೇ ಸ್ವಯಂಪ್ರೇರಿತವಾಗಿ ಅವರು ಹೇಳಿದ ಕೂಡಲೇ ರಾಜೀನಾಮೆ ಕೊಟ್ಟಿದ್ದೇನೆ. ಹೈಕಮಾಂಡ್ ಹಾಗೂ ಸಿಎಲ್?ಪಿ ಮುಂದಿನ ಸಿಎಂ ಆಯ್ಕೆ ಮಾಡಲಿದೆ. ಅವರು ಆಯ್ಕೆ ಮಾಡಿದ ವ್ಯಕ್ತಿ ರಾಜ್ಯದ ಸಿಎಂ ಆಗಿರುತ್ತಾರೆ ಎಂದು ಹೇಳಿದರು.
ನಾನು ಎರಡು ವರ್ಷ ಶಾಸಕನಾಗಿ ನಿಮ್ಮ ಜೊತೆಗೇ ಇರುತ್ತೇನೆ. ಹೈಕಮಾಂಡ್ ಡಿ. ಕೆ. ಶಿವಕುಮಾರ್ ಮುಂದಿನ ಸಿಎಂ ಅಂತ ಹೇಳಿದೆ. ಅದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ. ನಾನು ಇನ್ನೂ ರಾಜಕೀಯದಲ್ಲಿ ಸಕ್ರಿಯವಾಗಿಯೇ ಇರುತ್ತೇನೆ. ೨೦೨೮ರಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರೋಣ. ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಸಿಎಂರಿಂದ ಸಚಿವರುಗಳಿಗೆ ಆರ್ಥಿಕ ಪಾಠ : ನಾನು ರಾಜಕಾರಣದಲ್ಲಿ ಇರೋದಿಲ್ಲ ಅಂತಾ ಭಾವಿಸಬೇಡಿ. ನಾನು ನಿಮ್ಮೊಂದಿಗೆ ಇರುತ್ತೇನೆ. ಒಟ್ಟಾಗಿ ಹೋಗೋಣ. ಮೂರು ವರ್ಷದ ಸರ್ಕಾರದ ಉತ್ತಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಿ ಎಂದು ಮನವಿ ಮಾಡಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಸಚಿವರುಗಳಿಗೆ ಆರ್ಥಿಕ ಪಾಠ ಹೇಳಿದರು. ರಾಜ್ಯ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಸಾಲ, ಹಣಕಾಸು ಹೊಣೆಗಾರಿಕೆ ಕಾಯ್ದೆ ಮಿತಿಯೊಳಗೇ ಇದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಪರಿಷ್ಕರಣೆ ಇಲ್ಲದೆ ಮುಂದುವರಿಸಿಕೊಂಡು ಹೋಗಿ. ಹಣಕಾಸು ಇಲಾಖೆ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ತಾಕೀತು ಮಾಡುತ್ತಿರುತ್ತದೆ. ಆದರೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಜನಕಲ್ಯಾಣ ಯೋಜನೆಗಳಾದ ಪಂಚ ಗ್ಯಾರಂಟಿಯನ್ನು ಮುಂದುವರಿಸಿಕೊಂಡು ಹೋಗಿ. ಆಡಳಿತವನ್ನು ಚೆನ್ನಾಗಿ ನಡೆಸಿ ಎಂದು ಡಿಕೆಶಿಗೆ ಸಲಹೆ ನೀಡಿದರು.
ನಾನು ರಾಜೀನಾಮೆಯನ್ನು ಕೊಡ್ತಿದ್ದೇನೆ. ಡಿಕೆಶಿ ಮುಖ್ಯಮಂತ್ರಿ ಅಂತ ಹೈಕಮಾಂಡ್ ಹೇಳಿ ಕಳಿಸಿದ್ದಾರೆ. ಹಾಗಾಗಿ ಎಲ್ಲರೂ ಡಿಕೆಶಿಗೆ ಸಹಕಾರ ನೀಡಿ. ಇನ್ನೂ ಎರಡು ವರ್ಷ ಸರ್ಕಾರ ಇರಲಿದೆ. ಎಲ್ಲರ ಸಹಕಾರದಿಂದ ಮತ್ತೆ ಅಧಿಕಾರಕ್ಕೆ ತರೋಣ. ಯಾರು ಅನ್ಯತಾ ಭಾವಿಸಬೇಡಿ. ನಾನು ನನ್ನ ನಿರ್ಧಾರವನ್ನು ತಿಳಿಸಿದ್ದೇನೆ. ಹೈಕಮಾಂಡ್ ಹೇಳಿದ್ದಕ್ಕೆ ನಾನು ಬದ್ಧನಾಗಿದ್ದೇನೆ. ಅವರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡ್ತಿದ್ದೇನೆ. ಯಾರು ಬೇರೆ ರೀತಿ ಅಪಾರ್ಥ ಮಾಡುವುದು ಬೇಡವೆಂದು ಸಿದ್ದರಾಮಯ್ಯ ಹೇಳಿದರು. ಪಕ್ಷಕ್ಕಾಗಿ ಎಲ್ಲರ ಸಹಕಾರವೂ ಇರಲಿ. ಡಿಕೆಶಿಗೆ ಸಹಕರಿಸಿ ಎಂದು ಮನವಿ ಮಾಡಿದರು. ಸಿಎಂ ಘೋಷಣೆಯಿಂದ ಕೆಲ ಸಚಿವರು ಕಣ್ಣೀರು ಹಾಕಿದರು.
ಇದೇ ವೇಳೆ ಕೆಲ ಸಚಿವರು ಮಾತನಾಡಿ, ನಿಮ್ಮ ಆಡಳಿತದಲ್ಲಿ ರಾಜ್ಯ ಸಾಕಷ್ಟು ಅಭಿವೃದ್ಧಿ ಕಂಡಿದೆ. ಉತ್ತಮ ಆಡಳಿತ ನಡೆಸಿದ್ದೀರಿ. ನಮಗೆ ಎಲ್ಲಾ ರೀತಿಯ ಸಲಹೆ, ಸಹಕಾರಗಳನ್ನು ನೀಡಿದ್ದೀರಿ ಎಂದು ಭಾವುಕರಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.೩ ಗಂಟೆಗೆ ಸಿಎಂ ರಾಜೀನಾಮೆ: ಇನ್ನು ಇಂದು ಮಧ್ಯಾಹ್ನ ೩ ಗಂಟೆ ಸುಮಾರಿಗೆ ಸಿದ್ದರಾಮಯ್ಯ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಸಚಿವರೊಂದಿಗೆ ನಡೆದ ಉಪಹಾರ ಸಭೆಯಲ್ಲಿ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಕೃತಜ್ಞತೆ: ನಾನು ಮಧ್ಯಾಹ್ನ ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ. ಕಳೆದ ಮೂರು ವರ್ಷ ನನ್ನ ನೇತೃತ್ವದಲ್ಲಿ ನಡೆಸಿದ ಆಡಳಿತಕ್ಕೆ ನೀವೆಲ್ಲರೂ ಸಹಕಾರ ನೀಡಿದ್ದೀರಿ. ಸಹಕಾರ ನೀಡಿದ್ದಕ್ಕೆ ನಿಮಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಜತೆಗೆ ನಾನು ಎರಡು ವರ್ಷ ಶಾಸಕನಾಗಿ ನಿಮ್ಮ ಜೊತೆಗೇ ಇರುತ್ತೇನೆ. ಹೈಕಮಾಂಡ್ ಡಿ. ಕೆ. ಶಿವಕುಮಾರ್ ಮುಂದಿನ ಸಿಎಂ ಅಂತ ಹೇಳಿದೆ. ಅದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ. ನಾನು ಇನ್ನೂ ರಾಜಕೀಯದಲ್ಲಿ ಸಕ್ರಿಯವಾಗಿಯೇ ಇರುತ್ತೇನೆ. ೨೦೨೮ರಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರೋಣ. ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ವಿನಂತಿಸಿದರು.
ಒಗ್ಗಟ್ಟೇ ನಮ್ಮ ಶಕ್ತಿ ಎಂದ ಕಾಂಗ್ರೆಸ್: ಅಂದು, ಇಂದು, ಎಂದೆಂದೂ… ಒಗ್ಗಟ್ಟೇ ನಮ್ಮ ಶಕ್ತಿ! ಎಂದೆಂದಿಗೂ ಜನಸೇವೆಯೇ ನಮ್ಮ ಬದ್ಧತೆ! ಎಂದು ಕರ್ನಾಟಕ ಕಾಂಗ್ರೆಸ್‌ಎಕ್ಸ್‌ನಲ್ಲಿ ಪೋಸ್ಟ್‌ಮಾಡಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲು ಆಗ್ರಹ

ಹಾವೇರಿಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲು ಆಗ್ರಹ ಹಾವೇರಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊದಲ ಸಂಪುಟದಲ್ಲಿ...

ಕರ್ನಾಟಕ ಶಕ್ತಿ ಕೇಂದ್ರ ಸಮಿತಿಗೆ ಸಂಜಯಗಾಂಧಿ ನೇಮಕ

ಕರ್ನಾಟಕ ಶಕ್ತಿ ಕೇಂದ್ರ ಸಮಿತಿಗೆ ಸಂಜಯಗಾಂಧಿ ನೇಮಕ ಹಾವೇರಿ; ಬೆಂಗಳೂರಿನಲ್ಲಿಯ ಶಾಸಕರ ಭವನದಲ್ಲಿ...

ತೈಲ & ಅನಿಲ ಬೆಲೆ ಹೆಚ್ಚಳ ಡಿವೈಎಫ್‌ಐ ಖಂಡನೆ  

-- ತೈಲ & ಅನಿಲ ಬೆಲೆ ಹೆಚ್ಚಳ ಡಿವೈಎಫ್‌ಐ ಖಂಡನೆ   ಹಾವೇರಿ: ಪಶ್ಚಿಮ...