ಗೃಹಜ್ಯೋತಿ ಪರಿಶೀಲನೆಗೆ ಎಲ್ಲರೂ ಸಹಕರಿಸಿ : ಸೈಯದ್ ಅಜೀಮ್‌ಪೀರ್ ಖಾದ್ರಿ

Date:

ಹಾವೇರಿ : ರಾಜ್ಯ ಸರ್ಕಾರದ ಮಹತ್ವಾಂಕ್ಷೆ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಫಲಾನುಭವಿಗಳ ದಾಖಲೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಎಲ್ಲರೂ ಸಹಕರಿಸುವಂತೆ ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮ್ ಪೀರ್ ಎಸ್. ಖಾದ್ರಿ ಮನವಿ ಮಾಡಿದ್ದಾರೆ. ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಮೆಹಬೂಬ್ ನಗರದಲ್ಲಿ ಗುರುವಾರ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನಾ ಕಾರ್ಯ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ರಾಜ್ಯದ ಜನರಿಗೆ ಗೃಹಜ್ಯೋತಿ ಯೋಜನೆಯಡಿ ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಇದೊಂದು ಯಶಸ್ವಿ ಯೋಜನೆಯಾಗಿದೆ ಎಂದರು.
ಹೆಸ್ಕಾಂ ವ್ಯಾಪ್ತಿಯಲ್ಲಿ ಜುಲೈ ೦೧ರಿಂದ ದಾಖಲೆಗಳ ಪರಿಶೀಲನೆಗಾಗಿ ಹೆಸ್ಕಾಂ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ) , ರೇಷನ್ ಕಾರ್ಡ್ ( ಪಡಿತರ ಚೀಟಿ) ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ತೋರಿಸಬೇಕು. ಹೆಸ್ಕಾಂ ಸಿಬ್ಬಂದಿಯು ಮನೆ ಮಾಲೀಕರು ಅಥವಾ ಬಾಡಿಗೆದಾರರಿಂದ ಮಾಹಿತಿ ಪಡೆದು ಸೇವಾ ಸಿಂಧು ತಂತ್ರಾಂಶದಲ್ಲಿ ದಾಖಲಿಸಲಿದ್ದಾರೆ. ಸಾರ್ವಜನಿಕರು ಈ ಪ್ರಕ್ರಿಯೆಗೆ ಸಹಕರಿಸಬೇಕೆಂದು ಕೋರಿದರು.
ಫಲಾನುಭವಿಗಳ ದಾಖಲೆಗಳ ಪರಿಶೀಲನಾ ಕಾರ್ಯದ ಬಗ್ಗೆ ಜನರಿಗೆ ತಿಳಿ ಹೇಳಿದ ಅಧ್ಯಕ್ಷರು, ಸ್ವತಃ ತಾವೇ ಒಂದು ಅರ್ಜಿಯನ್ನು ಭರ್ತಿ ಮಾಡಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಪಟ್ಟಣದ ಮುಖಂಡರು ಸೇರಿದಂತೆ ಹಲವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಟಾಕ್ಸಿಕ್: ಲೌಕಿಕ ಬದುಕಿನ ಭ್ರಮಾ ಲೋಕಕ್ಕೆ ಕನ್ನಡಿ ಹಿಡಿದ ಯಶ್ 

ಟಾಕ್ಸಿಕ್: ಲೌಕಿಕ ಬದುಕಿನ ಭ್ರಮಾ ಲೋಕಕ್ಕೆ ಕನ್ನಡಿ ಹಿಡಿದ ಯಶ್ ಚಿತ್ರವಿಮರ್ಶಾ...

ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ

ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ ಹಾಬೇರಿ: ನಾಗೇಂದ್ರನಮಟ್ಟಿ (ನಗರ)...

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ ಹಾವೇರಿ:ಕರ್ನಾಟಕ ವಿಧಾನಸಭೆಯ...

ಹಾವೇರಿ: ಪ್ರೋತ್ಸಾಹ ಧನ ಬಿಡುಗಡೆಗೆ ಲಂಚ-ಸಮಾಲೋಚಕ ಲೋಕಾಯುಕ್ತ ಬಲೆಗೆ

ಹಾವೇರಿ: ಪ್ರೋತ್ಸಾಹ ಧನ ಬಿಡುಗಡೆಗೆ ಲಂಚ-ಸಮಾಲೋಚಕ ಲೋಕಾಯುಕ್ತ ಬಲೆಗೆ ಹಾವೇರಿ: ಪ್ರೋತ್ಸಾಹ ಧನ...