ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರ: ಗೆಲುವಿನ ನಗೆ ಬೀರಿದ ಸಂಕನೂರ ಎಸ್.ವಿ.

ಧಾರವಾಡ:ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರಲ್ಲಿ ಬಿಜೆಪಿ ಪಕ್ಷ ದ ಅಭ್ಯರ್ಥಿ ಎಸ್. ವಿ. ಸಂಕನೂರ ಗೆಲುವಿನ ನಗೆ ಬೀರಿದ್ದಾರೆ.
ಆರು ಸುತ್ತುಗಳಲ್ಲಿ ಎಣಿಕೆಯಾದ ಒಟ್ಟು 73691 ಮತಗಳಲ್ಲಿ ಸಂಕನೂರ ಎಸ್.ವಿ ಅವರು 33,711 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ ಅವರು 24,388 ಮತಗಳನ್ನು ಪಡೆದುಕೊಂಡಿದ್ದು, ಎಸ್. ವಿ. ಸಂಕನೂರು 9323 ಮತಗಳಿಂದ ಗೆಲುವು ಸಾಧಿಸಿದ್ದಾರೆ.
10,245 ಮತಗಳು ತಿರಸ್ಕೃತವಾಗಿವೆ.

