
ಇತ್ತ ಮನರೇಗಾನು ಇಲ್ಲ… ಅತ್ತ ಜಿ ರಾಮಜಿನು ಇಲ್ಲ…! ವಲಸೆ ಹಾದಿ ಹಿಡಿದ ಕಾರ್ಮಿಕರು!
ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರಕಾರದ ದ್ವಂದ ನೀತಿಗಳಿಂದ ಇತ್ತ ಮನರೇಗಾನು ಇಲ್ಲ, ಅತ್ತ ಜಿ ರಾಮ್ ಜಿ ನೂ ಇಲ್ಲದಂತಾಗಿ ಮೊದಲಿನ ಮನರೇಗಾ ಸಹ ಕೆಲಸ ನೀಡದೆ ಇದ್ದುದ್ದರಿಂದ ಅನಿವಾರ್ಯವಾಗಿ ಕೆಲಸ ಆರೆಸಿ ಹಾವೇರಿ ಜಿಲ್ಲೆಯಲ್ಲಿನ ಕಾರ್ಮಿಕರು ವಲಸೆ ಹೊರಟಿದ್ದಾರೆ.
ಮೊದಲಿನ “ಮನರೇಗಾ ಜಿ ರಾಮ್ ಜಿ” ಆಗಿ ಬದಲಾದ ನಂತರ ಇವರೆಗೆ ಕಾನೂನು ರಾಷ್ಟ್ರಪತಿ ಅಂಕಿತ ಬಿದ್ದರು. ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಇದರ ನಿಯಮವಳಿ ರೂಪಿಸದೇ ಅನುಷ್ಠಾನ ಮಾಡಿಲ್ಲ. ಇತ್ತ ಯಾವ ರಾಜ್ಯಗಳು 40% ಅನುದಾನ ನೀಡದೆ ಇದ್ದುದ್ದ ರಿಂದ ಗ್ರಾಮ ಪಂಚಾಯತ್ಗಳು ಗ್ರಾಮೀಣ ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ, ಯಾವ ಮಾರ್ಗಸೂಚಿ ಬಂದಿಲ್ಲ ಎಂದು ಹೇಳುತ್ತಿದ್ದರಿಂದ ಇಂದು ಕೂಲಿಕಾರರು ಅನಿವಾರ್ಯವಾಗಿ ಕೆಲಸ ಆರಸಿಕೊಂಡು ವಲಸೆಕಡೆಗೆ ಮುಖ ಮಾಡುತ್ತಿದ್ದಾರೆ. ಮಾಡಿಯೂ ಇದ್ದಾರೆ.
ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ಕೂಲಿಕಾರರ ಅನ್ನದ ಬಟ್ಟಲಾಗಿದ್ದ “ಮನರೇಗಾ” “ಜಿ ರಾಮ್ ಜಿ”ಆಗಿ ಬದಲಾದ ನಂತರ ಕೂಲಿಕಾರರ ಅನ್ನದ ಬಟ್ಟಲನ್ನು ಕಸಿದುಕೊಂಡು ಬಿಟ್ಟಿದೆ. ಕೈಗಾರಿಗಳು ಇಲ್ಲದ ಮತ್ತು ಕೃಷಿಯೇ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರವಾದ ಹಾವೇರಿಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಕೂಲಿಕಾರರು “ಮನರೇಗಾ” ವನ್ನೆ ನಂಬಿಕೊಂಡಿದ್ದವರು. ಆದರೆ ಮಾರ್ಗಸೂಚಿ ಬರದ ಕರಣಕ್ಕೆ ಮತ್ತೆ ವಲಸೆ ಪ್ರಾರಂಭ ಮಾಡುವ ಸ್ಥಿತಿ ಬಂದಿದೆ.
ಕೂಲಿಕಾರರ ಬದುಕಿನ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. “ಜಿ ರಾಮ್ ಜಿ”
ಕಾನೂನು ಮಾಡಿದ ಆರಂಭದಲ್ಲಿ ಅಲ್ಲಿ-ಇಲ್ಲಿ ವಿರೋಧ ಮಾಡಿ ಇಂದು ಶಾಸಕರು ಸಹ ಸುಮ್ಮನಾಗಿ ಬಿಟ್ಟಿದ್ದಾರೆ. ಗ್ರಾಮೀಣ ಕಾರ್ಮಿಕರ ಗೋಳು ಹಾಗೂ ಜೀವನೋಪಾಯ ತುಂಬಾ ಕಷ್ಟ ಆಗಿದೆ, ಮನರೇಗಾ ಅಡಿಯಲ್ಲಿ ವ್ಯಾಪಕ ಭ್ರಷ್ಟಚಾರ ಎಂದು ಮಾಹಿತಿಯನ್ನು ಹಂಚಿಕೊಳ್ಳುವ ಮಾಫಿಯ, ತಾವು ಗುತ್ತಿಗೆದಾರರಿಗೆ ಮೂಲಕ ಕೆಲಸ ಮಾಡಿಸಲು ಇದೊಂದು ಸಂಚು, ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ರಾಜಕೀಯ ಮಧ್ಯವರ್ಥಿಗಳು ಅಪಪ್ರಚಾರ ಮಾಡುತ್ತಿದ್ದಾರೆ, ಬಡ ಕಾರ್ಮಿಕರು ಇದರಲ್ಲಿ ಭ್ರಷ್ಟಚಾರ ಮಾಡಲು ಹೇಗೆ ಸಾಧ್ಯ ಅನ್ನುತ್ತಾರೆ ಹಾವೇರಿ ಜಿಲ್ಲಾ ಮಹಾತ್ಮ ಗಾಂಧೀಜಿ ಜಿಲ್ಲಾ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾ ಅಧ್ಯಕ್ಷೆ ಗುತ್ತೆಮ್ಮ ಸುಣಗಾರ.
ಭ್ರಷ್ಟಚಾರ ತಡೆಯಬೇಕಾಗಿದ್ದುದು ಸರಕಾರಿ ಅಧಿಕಾರಿಗಳು, ಅವರೇ ಕಾರ್ಮಿಕರ ದಾರಿ ತಪ್ಪಿಸಿ ಮಧ್ಯವರ್ತಿ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಸಹಕಾರ ನೀಡುತ್ತಿದ್ದಾರೆ ಹೊರತು ಯಾವ ಕೂಲಿಕಾರರು ಮಾಡಲು ಸಾಧ್ಯವಿಲ್ಲ.ಹಾಗೆ ಮನ ರೇಗಾ ಅಡಿಯಲ್ಲಿ ರಾಜ್ಯದಲ್ಲಿ 7000
ಹೊರಗುತ್ತಿಗೆ ದಾರರು ವಿವಿಧ ಗ್ರಾಮ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಕೆಲಸ ನಿರ್ವಹಿಸು ತ್ತಿದ್ದಾರೆ. ಕಳೆದ 3/4 ತಿಂಗಳು ‘ಜಿ ರಾಮ್ ಜಿ’ ‘ಕಾನೂನು ಪಾಸಾದ ನಂತರ ಯಾರು ಕೆಲಸ ಮಾಡದೇ ಇದ್ದು ಅವರಿಗೆ ವೇತನ ಪಾವತಿ ಮಾಡುವುದು ಸಹ ಒಂದು ರೀತಿ ಇಂದ ಭ್ರಷ್ಟಾಚಾರ ಅಲ್ವೇ” ಅನ್ನುತ್ತಾರೆ ಗ್ರಾಮ ಪಂಚಾಯತ್ ಮಾಜಿಸದಸ್ಯ ಹಾಗೂ ಕಾರ್ಮಿಕ ಹೋರಾಟಗಾರ ದಾದಾಪೀರ್ ತಿಳವಳ್ಳಿ,
ಕೂಡಲೇ ರಾಜ್ಯ ಮತ್ತು ಕೇಂದ್ರ ಸರಕಾರ, ಸಂಬಂಧಿಸಿದ ಇಲಾಖೆ ಕೂಡಲೇ ‘ಜಿ ರಾಮ್ ಜಿ” ಕಾನೂನನ್ನು ರದ್ದುಪಡಿಸಿ ಹಿಂದಿನ ನರೇಗಾ ಕಾನೂನು ಮರುಸ್ತಾಪಿಸಬೇಕು ಎಂದು ಹಾವೇರಿ ಜಿಲ್ಲಾ ಕೂಲಿ ಕಾರ್ಮಿಕ ಅರಳಿಕಟ್ಟಿ ಗ್ರಾಮದ ಮೆಟ್ ಸಚಿನ್ ಬೂದಿಹಾಳ ನೋವನ್ನು ತೋಡಿಕೊಂಡರು.
“ಮಕ್ಕಳಿಗೆ ಪುಸ್ತಕ ಹಾಗೂ ಫೀ ಕಟ್ಟಲು ಹಾಗೂ ವಾರದ ಸಂತಿ ಮಾಡಲು ನಮ್ಮ ಕಾರ್ಮಿಕರಿಗೆ ತುಂಬಾ ತೊಂದರೆ ಎದುರಿಸುತ್ತಿದ್ದಾರೆ” ನಮ್ಮ ಕಾರ್ಮಿಕ ಮಹಿಳೆಯರು ಎಂದು ಬನ್ನಿಹಟ್ಟಿ ಗ್ರಾಮ ಪಂಚಾಯತ್ ಕಾರ್ಮಿಕ ಮಹಿಳಾ ಮೆಟ್ ನಾಗಮ್ಮ ಮಲ್ಲಲ್ಲಿ ತಮ್ಮ ಅಲಳನ್ನು ನೋವಿನಿಂದ ತೋಡಿಕೊಂಡರು. ರಾಜ್ಯದಲ್ಲಿ ಮನರೇಗಾ ರಕ್ಷಣಾ ಒಕ್ಕೂಟ ಸತತವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನರೇಗಾವನ್ನು ಮತ್ತೆ ಮರು ಸ್ಥಾಪಿಸುವಂತೆ ಇತ್ತೀಚಿಗೆ ರಾಜ್ಯ ಗ್ರಾಮೀಣ ಅಭಿರುದ್ದಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಒತ್ತಯ ಮಾಡಿದ್ದಾರೆ. ಆದರೂ ಕೇಂದ್ರ ರಾಜ್ಯ ಸರಕಾರಗಳು ಕಾರ್ಮಿಕರ ಮನವಿಗಳಿಗೆ ಕಿಂಚಿತ್ತೂ ಯೋಚಿಸುತ್ತಿಲ್ಲ, ಕೂಡಲೇ ಕೇಂದ್ರ ಸರಕಾರ ಒಂದು ಸರಿಯಾದ ತೀರ್ಮಾನ ಕೈಗೊಂಡು, ಕಾರ್ಮಿಕರ ವಲಸೆ ತಡೆದು ಕೆಲಸ ಕೊಡುವಂತೆ ಹಾನಗಲ್ ತಾಲೂಕ ತಿಳವಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಾದಾಪಿರ್ ತಿಳವಳ್ಳಿ ಅಗ್ರಹ ಮಾಡಿದ್ದಾರೆ.

