ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ
ಅ. 23ರಂದು ಮತದಾನ : ಸುಗಮ ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
– ಜಿಲ್ಲಾಧಿಕಾರಿ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ್

ಹಾವೇರಿ : ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನವು ದಿನಾಂಕ 23.10.2026 ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಜಿಲ್ಲೆಯ 29 ಮತಗಟ್ಟೆಗಳಲ್ಲಿ ಜರುಗಲಿದ್ದು, ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು
ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ಬಿ ದಾನಮ್ಮನವರ ಅವರು ತಿಳಿಸಿದ್ದಾರೆ.
24,648 ಮತದಾರರು : ಜಿಲ್ಲೆಯಲ್ಲಿ 15,547 ಪುರುಷ ಹಾಗೂ 9101 ಮಹಿಳಾ ಮತದಾರರು ಸೇರಿ ಒಟ್ಟು 24,648 ಮತದಾರರಿದ್ದಾರೆ
ನಿಷೇಧ: ಮತದಾನ ದಿನದಂದು ಮತ ಚಲಾಯಿಸುವ ಮತದಾರರು ಮತಗಟ್ಟೆ ಒಳಗೆ ಹರಿತವಾದ ವಸ್ತು, ಮೊಬೈಲ್ ಕ್ಯಾಮೆರಾ,ಪೆನ್, ಬೆಂಕಿ ಪಟ್ಟಣ, ಲೈಟರ್, ನೀರಿನ ಬಾಟಲ್ ನಂತಹ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಮತದಾನಕ್ಕೆ ದಾಖಲೆಗಳು : ಚುನಾವಣಾ ಆಯೋಗ ನಿಗದಿಪಡಿಸಿದಂತೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಈ ಕೆಳಕಂಡ 10 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಗಳನ್ನು ಬಳಸಬಹುದು.
1. ಆಧಾರ್ ಕಾರ್ಡ್, 2. ಚಾಲನಾ ಪರವಾನಗಿ (Driving Licence), 3. ಪ್ಯಾನ್ (PAN) ಕಾರ್ಡ್, 4. ಭಾರತೀಯ ಪಾಸ್ಪೋರ್ಟ್, 5. ರಾಜ್ಯ/ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು, ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ನೀಡಿರುವ ಸೇವಾ ಗುರುತಿನ ಚೀಟಿ, 6. ಸಂಸದರು (MPs)/ಶಾಸಕರು (MLAs)/ವಿಧಾನ ಪರಿಷತ್ ಸದಸ್ಯರಿಗೆ (MLCs) ನೀಡಲಾದ ಅಧಿಕೃತ ಗುರುತಿನ ಚೀಟಿಗಳು,7. ಪದವೀಧರರ ಕ್ಷೇತ್ರಕ್ಕೆ (Graduates’ Constituency) ಸಂಬಂಧಿಸಿದ ಮತದಾರರು ಉದ್ಯೋಗಿಗಳಾಗಿರುವ ಶಿಕ್ಷಣ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, 8. ವಿಶ್ವವಿದ್ಯಾನಿಲಯವು ನೀಡಿರುವ ಪದವಿ/ಡಿಪ್ಲೊಮಾ ಪ್ರಮಾಣಪತ್ರ (ಮೂಲ ಪ್ರತಿ), 9. ಸಕ್ಷಮ ಪ್ರಾಧಿಕಾರವು ನೀಡಿರುವ ದೈಹಿಕ ಅಂಗವೈಕಲ್ಯ ಪ್ರಮಾಣಪತ್ರ (ಮೂಲ ಪ್ರತಿ) ಹಾಗೂ 10. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನೀಡುವ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ (UDID Card).
ಪೊಲೀಸ್ ಬಂದೋಬಸ್ತ್ :
ಮೂರು ಜನ ಡಿಎಸ್ಪಿ, ಹತ್ತು ಜನ ಸಿಪಿಐ, 19 ಜನ ಪಿಸಿ ಐ, 29 ಜನ ಏಎಸ್ಐ, 77 ಜನ ಹೆಡ್ ಕಾನ್ಸ್ಟೇಬಲ್, 85 ಜನ ಪೊಲೀಸ್ ಕಾನ್ಸ್ಟೇಬಲ್, 29 ಜನ ಡಬ್ಲ್ಯೂ ಪಿ ಸಿ ಗಳನ್ನು ನೇಮಕ ಮಾಡುವ ಮೂಲಕ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಹಾವೇರಿ ಜಿಲ್ಲಾಧ್ಯಂತ ಮತದಾನ ಪ್ರಕ್ರಿಯಗೆ ಮತಗಟ್ಟೆ ಸಿಬ್ಬಂದಿಗಳಾದ ಪಿ.ಆರ್.ಓ ಹಾಗೂ ಎ.ಪಿ.ಆರ್.ಓ ಮತ್ತು ಪಿ.ಓ ಗಳಿಗೆ ದಿನಾಂಕ 13-10-2026 ಹಾಗೂ 17-10-2026 ರಂದು 2 ಬಾರಿ ತರಬೇತಿ ನೀಡಲಾಗಿದೆ. ಮೈಕ್ರೋ ಅಬಜರ್ವರ್ ಗಳಿಗೆ ದಿನಾಂಕ 14-10-2026 ರಂದು ಹಾಗೂ 15-10-2026 ರಂದು ಎರಡು ಬಾರಿ ತರಬೇತಿ ನೀಡಲಾಗಿರುತ್ತದೆ.
29 ಮತಗಟ್ಟೆಗಳು :
ಜಿಲ್ಲೆಯ ಎಲ್ಲ 29 ಮತ ಕೇಂದ್ರಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ. ಎಲ್ಲ ಮತ ಗಟ್ಟೆಗಳಿಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲು ಕ್ರಮವಹಿಸಲಾಗಿರುತ್ತದೆ.
19 ವಾಹನಗಳ ವ್ಯವಸ್ಥೆ : ಹಾವೇರಿ-3, ರಾಣೇಬೆನ್ನೂರ-3, ಬ್ಯಾಡಗಿ-2, ಹಿರೇಕೆರೂರ-1, ರಟ್ಟಿಹಳ್ಳಿ-1, ಶಿಗ್ಗಾಂವ-4, ಸವಣೂರ-1, ಹಾನಗಲ್ಲ-4 ಒಟ್ಟು 19 ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ.
ಮಾಸ್ಟರಿಂಗ್ -ಡಿ ಮಾಸ್ಟರಿಂಗ್:
ಹಾವೇರಿ ಜಿಲ್ಲೆಯ 8 ತಹಶೀಲ್ದಾರರ ಕಛೇರಿಗಳಲ್ಲಿ ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದಿನಾಂಕ 22-10-2026 ರಂದು ಮಸ್ಟರಿಂಗ್ ಕಾರ್ಯ ಜರುಗಿಸಿ ನೇಮಕಗೊಂಡ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಸಾಮಗ್ರಿಗಳೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ತಲುಪಿಸಲಾಗುವುದು.
ದಿನಾಂಕ 23-10-2026 ರಂದು ಮತದಾನ ಪ್ರಕ್ರಿಯೇ ಮುಕ್ತಾಯದ ನಂತರ ಮತಗಟ್ಟೆಗಳಿಂದ ಆಯಾ ತಾಲ್ಲೂಕಿನ ತಹಶೀಲ್ದಾರರ ಕಛೇರಿಗಳಲ್ಲಿ ಸ್ಥಾಪಿಸಿದ ಡಿ-ಮಸ್ಟರಿಂಗ್ ಕೇಂದ್ರಗಳಲ್ಲಿ ಮತದಾನವಾದ ಮತಪೆಟ್ಟಿಗೆಗಳು ಮತ್ತು ದಾಖಲೆ/ಸಾಮಗ್ರಿಗಳನ್ನು ತಹಶೀಲ್ದಾರರು ಕ್ರೋಢೀಕರಿಸಿಕೊಂಡು ಸೂಕ್ತ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಗೆ ತಲುಪವವರು ಇಲ್ಲಿಂದ ಜಿಲ್ಲೆಯ ಎಲ್ಲ ಮತಪೆಟ್ಟಿಗೆಗಳು ಮತ್ತು ದಾಖಲೆಗಳನ್ನು ಸೂಕ್ತ ಪೊಲೀಸ್ ಬಂದೂಬಸ್ತ್ ಮೂಲಕ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ ಸ್ಟ್ರಾಂಗ್ ರೂಂ (ಭದ್ರತಾ ಕೊಠಡಿ)ಗೆ ಸಾಗಿಸಿ ಹಸ್ತಾಂತರಿಸಲಾಗುವುದು.
ಅಕ್ಟೋಬರ್ 27 ರಂದು ಮತ ಎಣಿಕೆ :
ದಿನಾಂಕ 27-10-2026 ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಪಾಪಿಸಿದ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯವನ್ನು ಜರುಗಲಿದೆ. ಒಟ್ಟಾರೆ ಈ ಚುನಾವಣೆಗಾಗಿ ಅಗತ್ಯ ಎಲ್ಲ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಲಾದೆ ಎಂದು ತಿಳಿಸಿದ್ದಾರೆ.

