
ಕರ್ನಾಟಕ ಶಕ್ತಿ ಕೇಂದ್ರ ಸಮಿತಿಗೆ ಸಂಜಯಗಾಂಧಿ ನೇಮಕ
ಹಾವೇರಿ; ಬೆಂಗಳೂರಿನಲ್ಲಿಯ ಶಾಸಕರ ಭವನದಲ್ಲಿ ಮಂಗಳವಾರ ಕರ್ನಾಟಕ ಶಕ್ತಿ ಕೇಂದ್ರ ಸಮಿತಿ ಬೆಂಗಳೂರು, ಕೇಂದ್ರ ಕಾರ್ಯಕಾರಿ ಸಮಿತಿಯ ಶಿಫಾರಸಿನ ಮೇರೆಗೆ ರಾಜ್ಯ ಅಧ್ಯಕ್ಷತಿ ಹಾಗೂ ಸಚಿವರಾದ ಆರ್.ಬಿ. ತಿಮ್ಮಾಪುರ, ರಾಜ್ಯಸಭಾ ಮಾಜಿ ಸದಸ್ಯ ಡಾ. ಎಲ್ ಹನುಮಂತಯ್ಯ , ರಾಜ್ಯ ಕಾರ್ಯದರ್ಶಿ ಲೋಕೇಶ್ ಎಲ್, ಕಾರಗಯ್ಯ ಎಚ್, ಸಂತೋಷ್ ಜಿ, ಅನೇಕ ಮುಖಂಡರು ಕರ್ನಾಟಕ ಶಕ್ತಿ ಕೇಂದ್ರ ಸಮಿತಿ ಹಾವೇರಿ ಜಿಲ್ಲೆಗೆ ಸಂಜಯಗಾಂಧಿ ಪು ಸಂಜೀವಣ್ಣನವರನ್ನು ಹಾವೇರಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ನೀಡಿದ್ದಾರೆ; ಈ ಒಂದು ಸಂದರ್ಭದಲ್ಲಿ ಮಾತನಾಡಿರುವ ರಾಜ್ಯ ಅಧ್ಯಕ್ಷ ಆರ್ ಬಿ ತಿಮ್ಮಾಪುರ ಅವರು, ತಾವು ತತಕ್ಷಣ ಅಧಿಕಾರ ಸ್ವೀಕರಿಸಿ, ತಮ್ಮ ಹೆಸರಿನ ಮುಂದೆ ಸೂಚಿಸಲಾದ ಜಿಲ್ಲೆಯಲ್ಲಿ ಕರ್ನಾಟಕ ಶಕ್ತಿ ಕೇಂದ್ರ ಸಮಿತಿಯ ಜಿಲ್ಲಾ ಸಮಿತಿಯನ್ನು ರಚಿಸಿ, ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನ್ಮುಖರಾಗಬೇಕೆಂದು ಸೂಚಿಸಿದ್ದಾರೆ.

