ತೈಲ & ಅನಿಲ ಬೆಲೆ ಹೆಚ್ಚಳ ಡಿವೈಎಫ್‌ಐ ಖಂಡನೆ  

Date:

ತೈಲ & ಅನಿಲ ಬೆಲೆ ಹೆಚ್ಚಳ ಡಿವೈಎಫ್‌ಐ ಖಂಡನೆ  
ಹಾವೇರಿ: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ದರಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿರುವುದರಿಂದಾಗಿ ಜನಸಾಮಾನ್ಯರ ಜೀವನದ ಮೇಲೆ ಭಾರೀ ಹೊರೆ ಉಂಟು ಮಾಡಿದೆ. ಕೇಂದ್ರ ಸರ್ಕಾರ ತಕ್ಷಣವೇ ತೈಲ ಮತ್ತು ಅನಿಲ ದರಗಳನ್ನು ಇಳಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್  ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಸೋಮವಾರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ಇಂದು (ಸೋಮವಾರ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ ೨.೬೧ ರೂ ಮತ್ತು ೨.೭೧ ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ಎರಡೇ ವಾರದಲ್ಲಿ ಇಂಧನ ಬೆಲೆಗಳು ಲೀಟರ್‌ಗೆ ೭.೫ ರೂಪಾಯಿಯಷ್ಟು ತುಟ್ಟಿಯಾಗಿ ಪೆಟ್ರೋಲ್ ೧೧೦, ಡಿಸೇಲ್ ೯೫ ರೂಪಾಯಿ ಏರಿಕೆಯಾಗಿದ್ದು, ಇನ್ನೂ ಬೆಲೆ ಹೆಚ್ಚಳವಾಗುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇಂಧನ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚಾಗಿ, ಅದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ, ಮಧ್ಯಮ ವರ್ಗ ಹಾಗೂ ಕಾರ್ಮಿಕ ಜನತೆ ಮತ್ತಷ್ಟು ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅಡುಗೆ ಅನಿಲದ ಬೆಲೆ ಏರಿಕೆಯಿಂದ ಬಡ ಹಾಗೂ ಮದ್ಯಮ ವರ್ಗದ ಜನತೆಯ ಬದುಕು ಸಂಕಷ್ಟಕರವಾಗಿದೆ.ಅಲ್ಲದೇ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಕೊರತೆಯಾಗುತ್ತಿರುವುದು ಕೂಡ ಜನರಿಗೆ ಸಂಕಷ್ಟ ತಂದೊಡ್ಡಿದ್ದು, ಅನಿಶ್ಚಿತೆಯಲ್ಲಿ ಬದುಕುವಂತಾಗಿದೆ. ಜಮಸಾಮಾನ್ಯರಿಗೆ ಸಮರ್ಪಕವಾಗಿ ಅಡುಗೆ ಅನಿಲ ಹಾಗೂ ತೈಲ ದೊರೆಯುವಂತೆ ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಿದೆ.
ತೈಲ ಬೆಲೆ ಹೆಚ್ಚಳದಿಂದಾಗಿ ಸಾಮಾನ್ಯ ಜನರಿಗೆ ಬದುಕು ನಡೆಸುವುದೇ ದುಸ್ತರವಾಗಿದ್ದು, ಜನರ ಮೇಲೆ ತೆರಿಗೆ ಭಾರ ಹಾಕಿರುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಹಿಂಪಡೆಯಬೇಕು. ಆ ಮೂಲಕ ಜನಪರ ನೀತಿಯನ್ನು ಅನುಸರಿಸಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ದರಗಳನ್ನು ತಕ್ಷಣವೇ ಕಡಿಮೆ ಮಾಡಬೇಕು.ಜನರ ಬದುಕಿಗೆ ಸಂಬಂಧಿಸಿದ ಈ ಪ್ರಮುಖ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪೆಟ್ರೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಲು ಕ್ರಮ ಕೈಗೊಳ್ಳದಿದ್ದರೆ, ಜನತೆ ತೀವ್ರವಾದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಡಿವೈಎಫ್‌ಐ ರಾಜ್ಯ ಸಮಿತಿಯು ಎಚ್ಚರಿಸುತ್ತದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ(ಎಐ) ವಿಶ್ವವಿದ್ಯಾಲಯ ಘೋಷಿಸಿದ ಸಿ.ಎಂ.ಡಿ.ಕೆ.ಶಿವಕುಮಾರ

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ(ಎಐ) ವಿಶ್ವವಿದ್ಯಾಲಯ ಘೋಷಿಸಿದ...

ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಆಗ್ರಹ-ಆರ್‌ಟಿಐ ಪತ್ರಕರ್ತರ ಮೆಲೆ ನಿಗಾಕ್ಕೆ ಮನವಿ : ಡಿಜಿಪಿ ಭೇಟಿ ಮಾಡಿದ ಕೆಯುಡಬ್ಲೂಜೆ ನಿಯೋಗ

ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಆಗ್ರಹ-ಆರ್‌ಟಿಐ ಪತ್ರಕರ್ತರ ಮೆಲೆ ನಿಗಾಕ್ಕೆ ಮನವಿ ಡಿಜಿಪಿ...

ಹಾವೇರಿಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸಂಜಯಗಾಂಧಿ ಸಂಜೀವಣ್ಣನವರ 

ಹಾವೇರಿಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸಂಜಯಗಾಂಧಿ ಸಂಜೀವಣ್ಣನವರ ಹಾವೇರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್...

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾಗಿ ಶೆಟ್ಟಿ ವಿಭೂತಿ

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾಗಿ ಶೆಟ್ಟಿ ವಿಭೂತಿ ಹಾವೇರಿ: ಕರ್ನಾಟಕ ಪ್ರದೇಶ...