
ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆ
ಹಾವೇರಿ: ಸಮ್ಮೇಳನ ಉದ್ಘಾಟನೆಗೂ ಮುನ್ನ ನಗರದ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ ಭವನದವರೆಗೆ ಸಮ್ಮೇಳನಾಧ್ಯಕ್ಷ ಜಿ.ಎಂ.ಓಂಕಾರಣ್ಣನವರನ್ನು ಸಾರೋಟಿದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ಡಿಎಸ್ಎಸ್ ರಾಜ್ಯ ಸಂಚಾಲಕ ಎಸ್.ಫಕ್ಕೀರಪ್ಪ ಚಾಲನೆ ನೀಡಿದರು. ವಿ.ಎಸ್. ಪಾಟೀಲ, ಸತೀಶ ಕುಲಕರ್ಣಿ, ವಿರೂಪಾಕ್ಷಪ್ಪ ಕೊರಗಲ್ಲ ಇದ್ದರು. ಈ ವೇಳೆ ವಿವಿಧ ಕಲಾ ತಂಡಗಳು ಗಮನಸೆಳೆದವು. ಸಮಾರಂಭದಲ್ಲಿ ವಿವಿಧ ಸಾಹಿತಿಗಳ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಕವಿಗೋಷ್ಠಿಗಳು, ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.
ಸಮಾರಂಭದಲ್ಲಿ ಡಾ.ಜಿ.ಎಚ್ ಇಮ್ರಾಪುರ, ಜಿ.ಎಂ ಮುಂದಿನಮನಿ, ಲಿಂಗಯ್ಯ ಹಿರೇಮಠ, ಸಂಜಯಗಾಂಧಿ ಸಂಜೀವಣ್ಣವರ, ನಿಂಗಪ್ಪ ಚಾವಡಿ, ರವೀಂದ್ರ ಮುದ್ದಿ, ಸೋಮಣ್ಣ ಡೊಂಬರಮತ್ತೂರ, ಅಕ್ಕಮಹಾದೇವಿ ನೀರಲಗಿ, ಬಾಲಚಂದ್ರ ಹೆಗಡೆ, ಎಸ್.ಎಲ್ ಕಾಡದೇವರಮಠ, ಚಂಪಾ ಹುಣಸಿಕಟ್ಟಿ, ನಾಗರಾಜ ಹೆಚ್., ಎಫ್.ಹೆಚ್ ಕೊರವರ, ವೈ.ಬಿ ಲಕ್ಷ್ಮಣ, ಲೀಲಾವತಿ ಪಾಟೀಲ, ಕುಮಾರ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

