ಯಾವ “ಮೋಹನ ” ಮುರಳಿ ಕಳಿಸಿತು  “ನನ್ನ ” ಬಳಿ ನಿಮ್ಮನು…..

Date:

ಯಾವ “ಮೋಹನ ” ಮುರಳಿ ಕಳಿಸಿತು  “ನನ್ನ ” ಬಳಿ ನಿಮ್ಮನು……..
  ಮುಸ್ಸಂಜೆ ಸಮಯ, ಹೊರಗಡೆ ಗಿಡ, ಗಂಟೆಗಳಲ್ಲಿ ಪಕ್ಷಿಗಳ ಚಿಲಿ,ಪಿಲಿ ಕೊರಳ ಸದ್ದು ಜೋರಾಗಿ ಕೇಳಿ ಬರುತ್ತಿತ್ತು. ” ಲೋಕ ಬೆಳಗಿದ ಸೂರ್ಯ
 ತನ್ನ ನಿತ್ಯದ ಕಾಯಕ ಮುಗಿಸಿ , ಚಂದ್ರನಿಗೆ ರಾತ್ರಿಯ ಕತ್ತಲೆ ಸಮಯದಲ್ಲಿ ಬೆಳಗುವ ಕಾಯಕ ವಹಿಸಿ ತಾಯ ಒಡಲಿನ ಕಡೆಗೆ ಜಾರಿದ್ದ”. ಇತ್ತ ನಾನು ಹಾಸಿಗೆಯ ಜಾಡು ತಪ್ಪಿಸಿಕೊಳ್ಳಲು ಪರದಾಡುತ್ತಿದ್ದೆ.
ಪತ್ನಿ ಲಕ್ಷ್ಮೀ ಸೋಮವಾರ ಹುಬ್ಬಳ್ಳಿಗೆ ಡಾಕ್ಟರ್ ಹತ್ತಿರ ಹೋಗಬೇಕು. “ಹಾಲಿನವನಿಗೆ ರೊಕ್ಕಾ ಕೊಡಬೇಕು, ಸಕ್ಕರೆ, ಚಹಾ ಪುಡಿ ಕಾಲಿಯಾಗಿದೆ. ಅಕ್ಕಿ, ಬ್ಯಾಳಿ ಒಳಗೊಂಡಂತೆ ರೇಷನ ಇಲ್ಲಾ, ತರಕಾರಿ ಇಲ್ಲಾ”ಎಂದು ಇಲ್ಲಗಳ ಪಟ್ಟಿಯನ್ನು ತನ್ನ ಜೋರಾದ ಧ್ವನಿಯಲ್ಲಿ ಅಡುಗೆಮನೆಯಿಂದ ರಾಗಾ ಎಳೆದಳು.
 “ಬೆಳಕು ಹರಿಯಲಿ ಏನಾದರೂ ವ್ಯವಸ್ಥೆ ಮಾಡುವೆ” ಎಂದೆ. 
“ವಾತಾವರಣ ತುಸು ಬಿಸಿ ಇದ್ದ ಕಾರಣಕ್ಕೆ ಮನಸ್ಸಿನಲ್ಲಿ ತಳಮಳ ನಡೆದಿತ್ತು. ಸಾಲು, ಸಾಲು ನಾಲ್ಕು ಶಸ್ತ್ರ ಚಿಕಿತ್ಸೆಗೆ ಒಳಗಾದ ದೇಹ ಕ್ರಶವಾಗಿರುವುದನ್ನು ಕಂಡು ಮತ್ತೆ ಚೇತರಿಕೆ ಸಾಧ್ಯವೇ? ಎನ್ನುವ ಚಿಂತೆಯಲ್ಲಿ, ಕಳೆದು ಹೋದ ಮೊದಲಿನ ದಿನಗಳನ್ನು ನೆನೆದು ಮತ್ತಷ್ಟು ಕುಗ್ಗಿ ಹೋಗಿದ್ದೆ”.
ಹರಿದ‌ ಬನಿಯನ್, ಹರಕು ಮುರುಕು ಟವಲ್ ಸುತ್ತಿಕೊಂಡಿದ್ದ ನಾನು‌ ತುಂಡಾದ ಬಲಕಾಲನ್ನು ನೋಡಿಕೊಂಡು,  ಮೂರು ರಾಡ್ ಹಾಕಿರುವ ಎಡ ಕಾಲಿನ ಪ್ಲಾಸ್ಟರ್ ನೋಡುತ್ತ, ‌ಕಾಲಿನ ಸ್ಥಿತಿಯನ್ನು ಗಮನಿಸಿ “ನನ್ನ ಕಾಲು ಮತ್ತು ನನಗೆ ಎದುರಾಗುವ ಕಾಲದ ಪರೀಕ್ಷೆ ಸರಿ ಹೋಗುವುದು ಯಾವಾಗ? ಎನ್ನುವ ಚಿಂತೆಯಲ್ಲಿ ” ಹೇಗಿದ್ದವ, ಹೇಗಾಗಿ ಹೋದೆ”! ಎಂದು ಕೊಂಡು, ಕಾಲು ಎಳೆದುಕೊಂಡು
ಹಾಸಿಗೆ ಬಿಟ್ಟು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾದೆ, ಅಷ್ಟರಲ್ಲಿ ಬಾಗಿಲಿಗೆ ಹಾಕಿದ್ದ ಸೊಳ್ಳೆ ಪರದೆಯನ್ನು ಯಾರೋ ಸರಿಸಿದಂತಾಯಿತು. 
ಮಾಲತೇಶಣ್ಣಾ ಎನ್ನುವ ಕೂಗು ಕೇಳಿಸಿತು.
ಧ್ವನಿ ಪುನರಾವರ್ತಿತವಾದಾಗ  ಅದು ಚಿರಪರಿಚಿತ ಧ್ವನಿ ಯಾಗಿತ್ತು. ಬರ‍್ರೀ…. ಬರ‍್ರೀ…. ಮೋಹನಣ್ಣ ಒಳಗ ಬರ‍್ರೀ, ಎಂದು ಕುಳಿತಲ್ಲಿಂದಲೇ ಮೋಹನ ಅವರನ್ನು ಸ್ವಾಗತಿಸಿದೆ.
 ಮೋಹನ ಅವರ ಜೊತೆಗೆ ಅವರ ಶ್ರೀಮತಿ ಮಂಜುಳಾ ಅಕ್ಕನವರು ಸಹ ಆಗಮಿಸಿದ್ದರು. ಅವರನ್ನು ಕುಳಿತು ಕೊಳ್ಳಲು ಹೇಳಿ, ಅಡುಗೆಮನೆಯಲ್ಲಿದ್ದ ಶ್ರೀಮತಿಯನ್ನು ನನ್ನದೇ ಭಾಷೆಯಲ್ಲಿ ಕರೆದು, “ಮೋಹನಣ್ಣ ಮತ್ತ ಅಕ್ಕಾರು ಬಂದಾರ ಬಾ” ಎಂದು ಕರೆದೆ.
ಸುಮಾರು ಎರಡು ಗಂಟೆಗಳ ಹೊತ್ತು ನನ್ನ ಆರೋಗ್ಯ ವಿಚಾರಿಸಿದ ದಂಪತಿಗಳು ನನಗೆ ” “ಧೈರ್ಯ ಕಳೆದುಕೊಳ್ಳಬೇಡಿ, ಆರಾಮಾಗುವಿರಿ. ನಿಮ್ಮೊಂದಿಗೆ ನಾವಿದ್ದೇವೆ, ಯಾವಾಗಲೂ ನಿಮ್ಮನ್ನು ಮಾತನಾಡಿಸಲು ಬರಬೇಕಿತ್ತು, ಆದರೆ, ಕೆಲಸದ ಒತ್ತಡ ದಿಂದ ಜೊತೆಗೆ ಅನೇಕ ಕಾರಣಗಳಿಂದ ಬರಲು ಸಾಧ್ಯವಾಗಲಿಲ್ಲ” ಎನ್ನುವ ಮಾತುಗಳನ್ನಾಡಿದರು.
 ನನ್ನ ಅನಾರೋಗ್ಯದ ಬಗ್ಗೆ, ಮತ್ತೆ ಕಾಲಿನ ಆಪರೇಷನ್ ಬಗ್ಗೆ ವಿವರಿಸಿ, ಆಸ್ಪತ್ರೆಯ ಚಿಕಿತ್ಸೆಯ ಯ ಬಗ್ಗೆ  ಅವರೊಂದಿಗೆ ಮಾತನಾಡಿದೆ.
ಈ ಮಧ್ಯ ಅವರ ಮಗ, ಮಗಳು, ಮೊಮ್ಮಗನ, ನನ್ನ ಪುತ್ರಿ, ಅಳಿಯ, ಮಗ, ಮೊಮ್ಮಗನ ಬಗ್ಗೆ ಇಬ್ಬರೂ ಮಾತನಾಡುವ ಮೂಲಕ ನಮ್ಮ ಮಾತು ಕತೆ ಮುಂದುವರೆಯಿತು.
ಈ ನಡುವೆ ಶ್ರೀಮತಿ ಅವಲಕ್ಕಿ, ಬಾಳೆಹಣ್ಣು ಕೊಟ್ಟು ದಂಪತಿಗಳನ್ನು ಉಪಚರಿಸಿದಳು. 
ದಂಪತಿಗಳು ನನ್ನ ಆರೋಗ್ಯ ವಿಚಾರಿಸಲು ತಂದಿದ್ದ ಹಣ್ಣಿನ ಚೀಲವನ್ನು ಶ್ರೀಮತಿಗೆ ಕೊಟ್ಟು, ಈ ಬಡ ಕುಚೇಲನ ಮನೆಯ ಹಿಡಿ ಅವಲಕ್ಕಿ ಸವಿದರು.
ನಾನು ತುಂಬಾ ಆರೋಗ್ಯವಾಗಿದ್ದು ಚಟ ಪಟ ಎಂದು‌ ಓಡಾಡಿಕೊಂಡಿದ್ದವ, ಒಮ್ಮೆಲೆ ಅನಾರೋಗ್ಯಕ್ಕೆ ಒಳಗಾಗಿ ಕಾಲು ಕಳೆದುಕೊಂಡು  ಹಾಸಿಗೆ ಹಿಡಿದಿರುವ ಬಗ್ಗೆ ಬಹಳ ಬೇಸರ ವ್ಯಕ್ತ ಪಡಿಸಿದ ದಂಪತಿಗಳು “ಬಾರದು ಬಪ್ಪದು, ಬಪ್ಪದು ತಪ್ಪದು” ಎನ್ನುವ ಶರಣರ ಮಾತನ್ನು ಉಲ್ಲೇಖಿಸಿ “ಒಳ್ಳೆಯ ದಿನಗಳು ಬರುತ್ತವೆ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ”, ಎನ್ನುವ ಮಾತುಗಳ ಮೂಲಕ ನನಗೆ ಆತ್ಮವಿಶ್ವಾಸ ಮೂಡಿಸಿದರು.
 ‌ನಾನು ಇತ್ತೀಚೆಗೆ ಎದುರಿಸುತ್ತಿರುವ ಅನಾರೋಗ್ಯದ ಕಷ್ಟದ ಪರಿಸ್ಥಿತಿಯಲ್ಲಿ ಹಣಕಾಸು ಹೊಂದಿಸಲು ಪಟ್ಟ, ಪಡುತ್ತಿರುವ ಸಂಕಷ್ಟದ ಬಗ್ಗೆ ಶ್ರೀಮತಿ ತುಸು ಹೆಚ್ಚೆ ಮಾತನಾಡಿದಳು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೌಕರಿ ನಿರ್ವಹಿಸಿ ನಿವೃತ್ತಿ ಹೊಂದಿರುವ ಮೋಹನ ಅವರ ನನ್ನ ಸ್ನೇಹ ಮೂರು ದಶಕದ್ದು.ನಿಜವಾದ ಸ್ನೇಹಕ್ಕೆ ಜಾತಿ, ಮತ, ಬಡತನ ಅಥವಾ ಶ್ರೀಮಂತಿಕೆ ಅಡ್ಡಿಯಾಗಿಲ್ಲ.”ಜೀವನದಲ್ಲಿ ಬಹಳ ಕಷ್ಟ ಪಟ್ಟು ಜೀವನ ಕಟ್ಟಿಕೊಂಡ ಮೋಹನ ಅವರ ‌ಬದುಕು ಆದರ್ಶ ವಾದುದು. ಸತಿ, ಪತಿಗಳೊಂದಾದ ಭಕ್ತಿ ಹಿತ ಒಪ್ಪುವುದು ಶಿವಂಗೆ ಎನ್ನುವಂತೆ ದಂಪತಿಗಳ ಇಬ್ಬರೂ ಪರೋಪಕಾರಿ ಗುಣ ಹೊಂದಿದವರು. ಕಷ್ಟದಲ್ಲಿರುವವರಿಗೆ ತಮ್ಮ ‌ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ”.
 ಭಗವಂತನಿಗೆ ನಾವು ಕೊಡುವ ಉಡುಗೊರೆ ದೊಡ್ಡದಾಗಿರಬೇಕಾಗಿಲ್ಲ, ಅದನ್ನು ನೀಡುವ ಭಕ್ತಿ ಮತ್ತು ಪ್ರೀತಿ ನಿರ‍್ಮಲವಾಗಿದ್ದರೆ ಸಾಕು ಎಂಬುದನ್ನು ಅಕ್ಷರಶಃ ಇವರು ಪಾಲಿಸುತ್ತಾ ಬಂದಿರುವರು.
ಶ್ರೀಕೃಷ್ಣ ಮತ್ತು ಕುಚೇಲರ ಸ್ನೇಹವು ಜಗತ್ತಿನಲ್ಲಿಯೇ ಅತ್ಯುನ್ನತ ಮತ್ತು ನಿಸ್ವಾರ್ಥ ಸ್ನೇಹಕ್ಕೆ   ಅತ್ಯಂತ ಪ್ರಸಿದ್ಧವಾದ ಉದಾಹರಣೆಯಾಗಿದೆ.  ಇವರ ಕಥೆಯು ಶ್ರೀಮಂತಿಕೆ ಮತ್ತು ಬಡತನದ ನಡುವಿನ ಭೇದವನ್ನು ಅಳಿಸಿಹಾಕುವ ಸ್ನೇಹದ ಪಾವಿತ್ರ‍್ಯತೆಯನ್ನು ಸಾರುತ್ತದೆ. ಇಂತ ಸ್ನೇಹ ನಮ್ಮಿಬ್ಬರದಾಗಿದೆ.
 ಇಬ್ಬರೂ ಕಡು ಕಷ್ಟದ ದಿನಗಳಲ್ಲಿ ಬದುಕು ಕಟ್ಟಿಕೊಂಡವರು.ಮೋಹನ ಅವರು ಹಂತ ಹಂತವಾಗಿ ತಮ್ಮ ವ್ರತ್ತಿ ಬದುಕಿನಲ್ಲಿ ಎತ್ತರೆತ್ತರಕ್ಕೆ ಬೆಳೆದು ಬಂದವರಾಗಿದ್ದಾರೆ. ಇಂತವರು  ನನ್ನ ಮನೆಗೆ ಬಂದು ಎರಡು ಗಂಟೆಗಳ ಕಾಲ ಮಾತನಾಡುತ್ತಾ ತಮ್ಮ ಅನುಭವಗಳನ್ನು ಹಂಚಿಕೊಂಡರು.
“ಗಾಯ ದೇಹಕ್ಕೆ ಆಗಿದೆ ಮನಸ್ಸಿಗಲ್ಲ, ಚಿಂತೆ ಮಾಡಿ ಪ್ರಯೋಜನ ಇಲ್ಲ. ಚಿಂತೆ ಬಿಡಿ, ಚಿಂತನೆ ಮಾಡಿ, ಹಲವಾರು ಜನರಿಗೆ ದಾರಿ ತೋರಿಸಿರುವ ನೀವು ಪುಟದೇಳಬೇಕು” ಎಂದ ಮೋಹನ ಅವರ ಮಾತುಗಳು “ಜೀವನದಲ್ಲಿ ಅನುಭವಸ್ಥ ಹಿರಿಯ ಸ್ನೇಹಿತರ,ಬಂಧುಗಳ ಬೆಂಬಲ ಎಷ್ಟು ಮುಖ್ಯ ಎಂಬುದನ್ನು ನನಗೆ ನೆನಪಿಸಿದವು. 
ಅವರು ಬಂದು ತುಂಬಾ ಹೊತ್ತಾದ ಕಾರಣ ಮತ್ತೆ ಬರುವುದಾಗಿ ಹೊರಟಾಗ, ನಾನು ಆಯಿತು ಹೋಗಿ ಬನ್ನಿರಿ ಎಂದು ಹೇಳಿದೆ.
ಹೋಗುವ ವೇಳೆ ಮೋಹನ ಅವರು ನನ್ನ ಬಳಿ ಬಂದು ಬೊಗಸೆ ತುಂಬಾ ನೋಟುಗಳನ್ನು ಇಟ್ಟು, ಯಾವಾಗಲೂ ಬರಬೇಕಿತ್ತು ಎಂದರು. 
“ಬಹಳ ಬಾರ ಹೊರೆಸುತ್ತಿರುವಿರಿ ಎಂದಾಗ, ಇರಲಿ‌ ಕಷ್ಟದ ಸಮಯದಲ್ಲಿ ನೆರವಾಗುವದು ನಮ್ಮ ಧರ್ಮ” ಎಂದವರೆ ತಮ್ಮ ಶ್ರೀಮತಿ ಅವರೊಂದಿಗೆ ಹೊರ ನಡೆದರು.
ಕಷ್ಟಕಾಲದಲ್ಲಿ ನನ್ನ ಕೈಹಿಡಿದ ಅವರ ಪ್ರೀತಿಗೆ ನನ್ನ ಬಳಿ ಮಾತುಗಳು ಇರಲಿಲ್ಲ.”ನನ್ನ ಕಷ್ಟದ ಸಮಯದಲ್ಲಿ ಮಾರ್ಗದರ್ಶಕರಾಗಿ , ಸ್ನೇಹಿತರಾಗಿ ಅವರು ನೀಡಿದ ಆಸರೆ ನನಗೆ ದೊಡ್ಡ ಶಕ್ತಿ ನೀಡಿದೆ.ನಾನು ಧೃತಿಗೆಟ್ಟಿದ್ದಾಗ ಒಬ್ಬ ಹಿರಿಯ ಸ್ನೇಹಿತರಾಗಿ ಅವರು ತೋರಿದ ಕಾಳಜಿ ಮತ್ತು ನಿರೀಕ್ಷೆಯಿಲ್ಲದೆ ಅವರು ಚಾಚಿದ  ಸಹಾಯ ಹಸ್ತವನ್ನು ನಾನು ಎಂದಿಗೂ ಮರೆಯುವುದಿಲ್ಲ.
ಗಿಡ, ಮರಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಶುದ್ಧ ಆಮ್ಲ ಜನಕ ನೀಡುತ್ತವೆ, ಪರಿಸರ ರಕ್ಷಿಸುತ್ತವೆ. ನೀರು, ನೆರಳು‌ ನೀಡುತ್ತವೆ. ಪಕ್ಷಿಗಳಿಗೆ ಆಸರೆ ನೀಡುತ್ತವೆ, ಹಣ್ಣು ಬಿಡುತ್ತವೆ, ತಾವು ತಿನ್ನುವುದಿಲ್ಲ,  ನದಿಗಳು ತಮ್ಮ ನೀರನ್ನು ತಾವೇ ಕುಡಿಯುವುದಿಲ್ಲ, ಹಸುಗಳು ತಮ್ಮ ಹಾಲನ್ನು ತಾವೇ ಉಣ್ಣುವುದಿಲ್ಲ. ಇವೆಲ್ಲವೂ ಪರರಿಗಾಗಿ ಇರುವಂತೆಯೇ ಕೆಲವರು ನಮ್ಮ ಸಮಾಜದಲ್ಲಿ ಇದ್ದಾರೆ. “ಬಲಗೈಯಲ್ಲಿ ನೀಡಿದ ದಾನ ಎಡಗೈಗೆ ತಿಳಿಯಬಾರದು”  ಎನ್ನುವ ಉದಾರ ಗುಣದಿಂದ ಅವರು  ಉನ್ನತ ಸ್ಥಾನಕ್ಕೇರಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಮೋಹನ ಅವರು. 
ಅವರ ಶ್ರೀಮತಿ ಅವರು ಸಹಕಾರ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
“ನನ್ನ ಈ ಯಾತನಾಮಯದ ಸಂಕಷ್ಟದ ಮತ್ತು ಸಂಕಟದ  ಸಮಯದಲ್ಲಿ ಅವರು ನೀಡಿದ , ಚಾಚಿದ ನೆರವಿನ  ಸಹಾಯ ಹಸ್ತವನ್ನು ನಾನು ಎಂದಿಗೂ ಮರೆಯುವುದಿಲ್ಲ” ಪಡೆಯುವ ಕೈಗಳಿಗಿಂತ ನೀಡುವ ಕೈಗಳು ಯಾವಾಗಲೂ ಶ್ರೇಷ್ಠ ಅವರಿಗೆ ಮನಸ್ಸಿನಾಳದಿಂದ ಧನ್ಯವಾದಗಳನ್ನು ಹೇಳುತ್ತೇನೆ.
ಈ ಮಧ್ಯೆ ಮೋಹನ ದಂಪತಿಗಳು ಭೇಟಿಕೊಟ್ಟು ಹೋದ ನಂತರ ನನ್ನ ವಿದ್ಯಾ ಗುರುಗಳು, ಬಸವೇಶ್ವರ ನಗರ ಮಹಿಳಾ ವೇದಿಕೆಯ ವರು, ಕನ್ನಡ ಪರ ಸಂಘಟನೆಯವರು, ಹಾಗೂ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ  ಜಿಲ್ಲಾ ಅಧ್ಯಕ್ಷರಾದ ಚಂಪಾ ಹುಣಸಿಕಟ್ಟಿ, ಲೀಲಾವತಿ ಬಿ. ಪಾಟೀಲ, ಲತಾ ಹಳಕೊಪ್ಪ, ಡಾ. ಉಮಾ ಬಳಿಗಾರ, ರೇಣುಕಾ ನರಗುಂದ, ಕಮಲಾ ಬುಕ್ಕಶೆಟ್ಟಿ, ಪುಷ್ಪಾ ಸಾತೇನಹಳ್ಳಿ, ಹೇಮಲತಾ ಮುದ್ದಿ, ನಂದಾ ದಾವಣಗೆರೆ, ಸುಮಂಗಲಾ ಚೌಶೆಟ್ಟಿ, ರೇಣುಕಾ ಮಡಿವಾಳರ, ನೀಲಾ ಗಡಾದ, ನೀಲಮ್ಮ ಗೌಡಮ್ಮನವರ, ಜಯಶ್ರೀ ಅಂಕಲಕೋಟಿ, ಶೋಭಾ ಹಡಗಲಿ, ಮುಖ್ಯ ಶಿಕ್ಷಕರಾದ ಜಿ.ಎಮ್.ಓಂಕಾರಣ್ಣನವರ ಮುಂತಾದವರು ಆಗಮಿಸಿ  ಮಾನಸಿಕವಾಗಿ ಧೈರ್ಯ ತುಂಬಿದರು.
ಈ ಮಧ್ಯೆ ಡಾ.ವಿ.ಕ್ರ.ಗೋಕಾಕ ಟ್ರಸ್ಟ್ ಅಧ್ಯಕ್ಷರು, ಹಿರಿಯ ಸಾಹಿತಿಗಳಾದ ಡಾ.ಸತೀಶ ಕುಲಕರ್ಣಿ ಅವರು ಮನೆಗೆ ಆಗಮಿಸಿದ್ದರು. ಒಂದು ಗಂಟೆಯ ತಮ್ಮ ಅಮೂಲ್ಯ ಸಮಯವನ್ನು ನನ್ನ ಜೊತೆಗೆ ಕಳೆದು ಅನೇಕ ಅಮೂಲ್ಯ ವಿಚಾರಗಳನ್ನು ಹಂಚಿಕೊಂಡರು. ಆರೋಗ್ಯದ ಬಗ್ಗೆ ಕಾಳಜಿ‌ವಹಿಸುವಂತೆ ಮಾರ್ಗದರ್ಶನ ನೀಡಿ ಈ ಬಡಪಾಯಿಗೆ ಸಹಾಯ ಹಸ್ತ ಚಾಚುವ ಮೂಲಕ ನನ್ನಲ್ಲಿ ಯ ಏಕಾಂಕಿ ಭಾವನೆಯನ್ನು ಹೊಗಲಾಡಿಸಿದ್ದಾರೆ. 
ಇವರೊಂದಿಗೆ ಅನೇಕ ಶಿಕ್ಷಕರು, ನಿವೃತ್ತ ಶಿಕ್ಷಕರು, ಸ್ನೇಹಿತರು ಮನೆಗೆ ಆಗಮಿಸಿ ಇವರೆಲ್ಲರೂ ಪ್ರೀತಿ ತೋರಿಸಿದ್ದಾರೆ.
“ಪರೋಪಕಾರಾರ್ಥಂ ಇದಂ ಶರೀರಂ” ಎನ್ನುವ ಮಾತಿನಂತೆ ಗೊತ್ತು ಗುರಿಯಿಲ್ಲದೇ ಕಂಗಾಲಾಗಿರುವ ನನಗೆ ತೋರುತ್ತಿರುವ ಕರಳು ಬಳ್ಳಿಯ ಕಕ್ಕುಲತೆ ಪ್ರೀತಿಗೆ ಪ್ರತಿಯಾಗಿ ನಾನೇನು ಕೊಡಬಲ್ಲೆ?. ಆಗ ನೆನಪಾಗಿದ್ದೆ ಕವಿ ಡಾ.ಜಿ.ಎಸ್. ಶಿವರುದ್ರಪ್ಪ ನವರ ” ಯಾವ ಮೋಹನ ಮುರಳಿ ಕರೆಯಿತು ದೂರ ತಿರಕೆ ನಿನ್ನನು” ಎನ್ನುವ ಕವಿತೆಯ ಸಾಲು, ಆ ಸಾಲೆ ಯಾವ “ಮೋಹನ ” ಮುರಳಿ ಕಳಿಸಿತು ನನ್ನ ಬಳಿ ನಿಮ್ಮನು ಲೇಖನಕ್ಕೆ ಪ್ರೇರಣೆಯಾಗಿದೆ.
 ಮಾಲತೇಶ ಅಂಗೂರ, ಹಾವೇರಿ.
malatesh angur
sub-editor
kourava daily,
haveri

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ ಕಣದಿಂದ ನಾಮ ಪತ್ತ ವಾಪಸ್ ಪಡೆದ ಡಾ.ಕುಬೇರಪ್ಪ!

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ...

ಶವ ಸಂಸ್ಕಾರ ಸೇವೆಯಲ್ಲಿ ಸಾರ್ಥಕತೆ ಕಂಡ ಷಣ್ಮುಖಯ್ಯ

ಶವ ಸಂಸ್ಕಾರ ಸೇವೆಯಲ್ಲಿ ಸಾರ್ಥಕತೆ ಕಂಡ ಷಣ್ಮುಖಯ್ಯ  ಹಾವೇರಿ : ಹಾವೇರಿ ನಗರ...

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಅರ್ಜಿ ಸಲ್ಲಿಕೆ

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಡಾ. ಕುಬೇರಪ್ಪ...

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ “ಹುಲಿ ಬೀರ”

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ...