ಹಾವೇರಿ : ಗುಡುಗು, ಸಿಡಿಲು ನಡುವೆ ಉತ್ತಮ ಮಳೆ, ಸಿಡಿಲಿಗೆ ಓರ್ವ ಬಲಿ

Date:

ಹಾವೇರಿ : ಗುಡುಗು, ಸಿಡಿಲು ಸಮೇತ ಉತ್ತಮ ಮಳೆ, ಸಿಡಿಲಿಗೆ ಓರ್ವ ಬಲಿ
ಹಾವೇರಿ: ಹಾವೇರಿ ನಗರವು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರ
  ಸಂಜೆ ಭರ್ಜರಿ ಅರ್ದ ಗಂಟೆ ಉತ್ತಮ ಮಳೆಯಾಗಿದೆ.
ಸಿಡಿಲು ಬಡಿದು ರೈತನ ಸಾವು:ಜಿಲ್ಲೆಯ ವಿವಿಧಡೆ ಶುಕ್ರವಾರ ಸಂಜೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ರೈತನನ್ನ  62 ವರ್ಷದ
ಮಹದೇವಪ್ಪ ಶಿಡೇನೂರು  ಎಂದು ಗುರುತಿಸಲಾಗಿದೆ. ಮಹದೇವಪ್ಪ
ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ.
ಹಲಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ  ಘಟನೆ‌ ನಡೆದಿದೆ.

ಗುಡುಗು, ಸಿಡಿಲು ಮಿಂಚಿನೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ  ಧಾರಾಕಾರ ಮಳೆಯಿಂದ ನಗರದ ಹಲವೆಡೆ ಚರಂಡಿಗಳು ತುಂಬಿ ನೀರು ತುಂಬಿಕೊಂಡು ರಸ್ತೆಗಳ ಮೇಲೆ ಹರಿದಿದೆ. ನಗರದ ಹಾನಗಲ್ ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ತುಂಬಿಕೊಂಡು ರಸ್ತೆಗಳು ಕೆರೆಯಂತಾಗಿದ್ದವು. ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ‌ ನಿರ್ಮಾಣವಾಗಿತ್ತು. ಮಳೆ ನೀರಿನ ರಭಸಕ್ಕೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಗಳು ನೆಲಕ್ಕುರುಳಿ ಬಿದ್ದಿದ್ದವು.

ಪ್ರವಾಸಿ ಮಂದಿರದ ಹಳೆ ಪಿಬಿ ರಸ್ತೆ, ಅಂಚೆ ಕಚೇರಿಯ ರಸ್ತೆ, ನಾಗೇಂದ್ರ ನಮಟ್ಟಿಯ ಕೆಳ ಸೇತುವೆಯ ರಸ್ತೆ ‌ಸೇರಿದಂತೆ ನಗರದ ಹಲವು ರಸ್ತೆ ಗಳು ನೀರಿನಿಂದ ಮುಳುಗಿ ಹೊಗಿದ್ದವು, ವಾಹನ ಸವಾರರು, ಪಾದಚಾರಿ ಗಳು ಪರದಾಡಿದರು.
ಕಳೆದ ಎರಡು ತಿಂಗಳು
 ಕಣ್ಮರೆಯಾಗಿದ್ದ ಮಳೆರಾಯ ಶುಕ್ರವಾರ ಸಂಜೆ ದಿಢೀರ್ ಆಗಮಿಸಿ, ಗುಡುಗು, ಸಿಡಿಲು ಹಾಗೂ ಮಿಂಚಿನ ಆರ್ಭಟದೊಂದಿಗೆ ಧಾರಾಕಾರವಾಗಿ ಸುರಿದಿದ್ದಾನೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಬಿಸಿಲಿನ ಝಳಕ್ಕೆ ಕಾದು ಕೆಂಪಾಗಿದ್ದ ಭೂಮಿಗೆ ತಂಪಿನ ಅನುಭವವಾಗಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಶುಕ್ರವಾರ ಬೆಳಗ್ಗೆಯಿಂದಲೇ ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ದಿನವಿಡೀ ಬಿಸಿಲಿನ ಝಳದಿಂದ ಜನರು ತತ್ತರಿಸಿದ್ದರು. ಮಧ್ಯಾಹ್ನದ ವೇಳೆಯೂ ಬಿಸಿಲಿನ ಪ್ರಖರತೆ ಕಡಿಮೆಯಾಗಿರಲಿಲ್ಲ. ಆದರೆ, ಸಂಜೆ ವೇಳೆಗೆ ಹವಾಮಾನದಲ್ಲಿ ದಿಢೀರ್ ಬದಲಾವಣೆ ಕಂಡುಬAದಿತು. ಆಕಾಶದಲ್ಲಿ ಮೋಡಗಳು ದಟ್ಟವಾಗಿ ಆವರಿಸಿಕೊಂಡು, ಗುಡುಗು, ಸಿಡಿಲು ಹಾಗೂ ಮಿಂಚಿನ ಆರ್ಭಟದೊಂದಿಗೆ ಸಂಜೆ ೫.೨೦ರ ವೇಳೆಗೆ ಮಳೆ ಸುರಿಯಲಾರಂಭಿಸಿತು. ಹಠಾತ್ತನೆ ಆರಂಭವಾದ ಮಳೆ ಕೆಲಕಾಲ ಧಾರಾಕಾರವಾಗಿ ಸುರಿಯಿತು.
ಇದರಿಂದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಕೊಂಚ ನೆಮ್ಮದಿ ದೊರೆಯಿತು. ಮಳೆಗಾಗಿ ಕಾಯುತ್ತಿದ್ದ ಜನರಲ್ಲಿ ಸಂತಸ ಮೂಡಿತು. ಕಳೆದ ಎರಡು ತಿಂಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಭೂಮಿ ಒಣಗಿತ್ತು. ಇದೀಗ ಸಂಜೆ ಸುರಿದ ಮಳೆ ವಾತಾವರಣವನ್ನು ತಂಪಾಗಿಸುವುದರ ಜತೆಗೆ ಮಳೆ ಮುಂದುವರಿಯುವ ಆಶಾಭಾವನೆ ಮೂಡಿಸಿದೆ.
ರೈತರಲ್ಲಿ ಹೊಸ ನಿರೀಕ್ಷೆ: ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಶುಕ್ರವಾರ ಸುರಿದ ಮಳೆ ಹೊಸ ಭರವಸೆ ನೀಡಿದೆ. ಮುಂಗಾರು ಅವಧಿಯಲ್ಲಿ ಮಳೆಯ ಏರಿಳಿತದಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದ ರೈತರು, ಹಿಂಗಾರು ಮಳೆಯನ್ನೇ ಎದುರು ನೋಡುತ್ತಿದ್ದಾರೆ. ಈ ನಡುವೆ ಗುಡುಗು, ಸಿಡಿಲಿನೊಂದಿಗೆ ಸುರಿದ ಮಳೆ ಮುಂದಿನ ದಿನಗಳಲ್ಲಿಯೂ ಮಳೆಯಾಗಬಹುದು ಎಂಬ ನಿರೀಕ್ಷೆಯನ್ನು ಹುಟ್ಟಿಸಿದೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಮಳೆ ಸುರಿಯಲಿ ಎಂಬುದು ರೈತರ ಆಶಯವಾಗಿದೆ. ಮಳೆ ಆಗಮನದಿಂದ ಕೃಷಿ ವಲಯದಲ್ಲಿ ಚೈತನ್ಯ ಮೂಡಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಬೆಳೆಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ.
ಮೋಡ ಕವಿದ ವಾತಾವರಣ: ಜಿಲ್ಲಾ ಕೇಂದ್ರ ಹಾವೇರಿ ನಗರದ ಸುತ್ತಮುತ್ತö, ಹಿರೇಕೆರೂರು ತಾಲೂಕು ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಉಳಿದಂತೆ ಜಿಲ್ಲೆಯ ಹಲವೆಡೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿದ್ದುö, ರಾಣೇಬೆನ್ನೂರು, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಸವಣೂರು, ರಟ್ಟಿಹಳ್ಳಿ ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಗುಡುಗು, ಮಿಂಚಿನ ಆರ್ಭಟ ಜೋರಾಗಿದ್ದು, ರಾತ್ರಿ ವೇಳೆ ಮಳೆಯಾಗುವ ದಟ್ಟ ವಾತಾವರಣ ಕಂಡುಬಂದಿತು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಶಾಸಕ ಮಾನೆ ಶ್ರೀನಿವಾಸ  ಹೆಸರಿನಲ್ಲಿ ಹಣ ವಸೂಲಿ: ವಂಚಕ ಪೊಲೀಸ್ ವಶ, ವಿಚಾರಣೆ

ಶಾಸಕ ಮಾನೆ ಶ್ರೀನಿವಾಸ  ಹೆಸರಿನಲ್ಲಿ ಹಣ ವಸೂಲಿ: ವಂಚಕ ಪೊಲೀಸ್...

ಹೆಚ್ಚುತ್ತಲೇ ‌ಇದೆ ಬಿಸಿಲಿನ ಕಾವು, ಏರುತ್ತಿದೆ ಕಪಪ ಕ್ಷೇತ್ರದ ಚುನಾವಣಾ ಕಾವು

cricket premium legue . ಹೆಚ್ಚುತ್ತಲೇ ‌ಇದೆ ಬಿಸಿಲಿನ ಕಾವು, ಏರುತ್ತಿದೆ ಕಪಪ ಕ್ಷೇತ್ರದ...

ಯಾವ “ಮೋಹನ ” ಮುರಳಿ ಕಳಿಸಿತು  “ನನ್ನ ” ಬಳಿ ನಿಮ್ಮನು…..

ಯಾವ "ಮೋಹನ " ಮುರಳಿ ಕಳಿಸಿತು  "ನನ್ನ " ಬಳಿ...

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ ಕಣದಿಂದ ನಾಮ ಪತ್ತ ವಾಪಸ್ ಪಡೆದ ಡಾ.ಕುಬೇರಪ್ಪ!

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ...