ನ.೧೮ರಿಂದ ಶಾಲಾ-ಕಾಲೇಜುಗ ಬಂದ್‌ಗೆ ಡಾ. ಕುಬೇರಪ್ಪ ವಿರೋಧ

Date:

ನ.೧೮ರಿಂದ ಶಾಲಾ-ಕಾಲೇಜುಗ ಬಂದ್‌ಗೆ ಡಾ. ಕುಬೇರಪ್ಪ ವಿರೋಧ
ಹಾವೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುವುದರಲ್ಲಿ ತಪ್ಪಿಲ್ಲ. ಶಾಲಾ ಅವಧಿಯ ನಂತರ ಅಥವಾ ರಜಾ ದಿನಗಳಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಮ್ಮ ತಕರಾರಿಲ್ಲ. ಆದರೆ ನ.೧೮ರಿಂದ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವಂತೆ ನೀಡಿರುವ ಕರೆ ಅವೈಜ್ಞಾನಿಕ ಹಾಗೂ ರಾಜಕೀಯ ಪ್ರೇರಿತವಾಗಿದ್ದು, ಇದಕ್ಕೆ ಹಾವೇರಿ ಜಿಲ್ಲಾ ಅನುದಾನಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ವಿರೋಧವಿದೆ ಎಂದು ಒಕ್ಕೂಟದ ಪದಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.
ಶಾಲಾ-ಕಾಲೇಜು ಬಂದ್‌ಗೆ ಕರೆ ನೀಡಿರುವುದು ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರವಲ್ಲ. ಈಗಾಗಲೇ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿವೆ. ಮತ್ತೊಂದೆಡೆ ಶಿಕ್ಷಕರ ಮೇಲೆ ಇಲಾಖೆಯಿಂದ ವಿವಿಧ ಕೆಲಸಗಳ ಒತ್ತಡವಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಬಂದ್ ಮಾಡಿ ಶಿಕ್ಷಕರನ್ನು ಬೀದಿಗಿಳಿಸುವುದು ಅಪಾಯಕಾರಿ ಬೆಳವಣಿಗೆ. ಇದರಿಂದ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಆಗುವ ಅನ್ಯಾಯದ ವಿರುದ್ಧ ಶಿಕ್ಷಕರನ್ನೇ ಪ್ರಶ್ನಿಸುವ ಸಾಧ್ಯತೆಯಿದೆ. ಹೀಗಾಗಿ ಶಾಲಾ-ಕಾಲೇಜು ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಂದ್ರಶೇಖರ ಅವರ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ೨೮ ಬೇಡಿಕೆಗಳನ್ನು ಮುಂದಿಟ್ಟು ೨೧ ದಿನಗಳ ಕಾಲ ಶಾಲಾ-ಕಾಲೇಜು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಸಾರ್ವಜನಿಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು. ಆಗ ಕೇವಲ ?೨೫ ವೈದ್ಯಕೀಯ ಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ದೊರೆತಿದ್ದು, ೨೧ ದಿನಗಳ ರಜೆ ಅವಧಿಯ ವೇತನವನ್ನೂ ಶಿಕ್ಷಕರು ಕಳೆದುಕೊಂಡಿದ್ದರು. ಇಂತಹ ಹೋರಾಟದಿಂದ ಶಿಕ್ಷಕರಿಗೆ ಯಾವುದೇ ಲಾಭವಾಗುವುದಿಲ್ಲ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.
ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಪ್ರಯತ್ನಿಸಲಾಗಿತ್ತು. ಅನುದಾನಿತ ಶಾಲಾ-ಕಾಲೇಜುಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಲವು ವರ್ಷಗಳ ಕಾಲ ಹುದ್ದೆ ನಿರ್ಬಂಧ ವಿಧಿಸಲಾಗಿತ್ತು. ಬೋಧಕೇತರ ಹುದ್ದೆಗಳನ್ನು ಕಾಯಂ ಆಗಿ ಭರ್ತಿ ಮಾಡದಂತೆ ಕಾಯ್ದೆ ರೂಪಿಸಲಾಗಿತ್ತು. ಈ ನಿರ್ಧಾರಗಳು ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಮುಂದುವರಿದಿದ್ದವು ಎಂದು ಕುಬೇರಪ್ಪ ತಿಳಿಸಿದ್ದಾರೆ.
ಅನುದಾನಿತ ಶಾಲಾ-ಕಾಲೇಜುಗಳು ಇರುವ ಪ್ರದೇಶಗಳಲ್ಲಿ ನೂರಾರು ಸರ್ಕಾರಿ ಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಇದರಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿವೆ. ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಜಾರಿಗೊಳಿಸಿ, ಗಂಡ-ಹೆಂಡತಿಯನ್ನು ಶಾಶ್ವತವಾಗಿ ಬೇರ್ಪಡಿಸುವಂತಹ ಪರಿಸ್ಥಿತಿಯನ್ನೂ ಹಿಂದಿನ ಸರ್ಕಾರಗಳು ಸೃಷ್ಟಿಸಿವೆ ಎಂದು ಆರೋಪಿಸಿದ್ದಾರೆ.
ತಾವು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿದ್ದ ಸಂದರ್ಭದಲ್ಲಿ ಅನುದಾನರಹಿತ ಶಾಲಾ-ಕಾಲೇಜುಗಳಿಗೆ ಅನುದಾನ ನೀಡುವುದು, ಅನುದಾನಿತ ಸಂಸ್ಥೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಹಳೆಯ ಪಿಂಚಣಿ ಯೋಜನೆ ಮುಂದುವರಿಸುವುದು ಹಾಗೂ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಈ ಕುರಿತು ಸಮಿತಿ ರಚಿಸಿ ವರದಿ ಪಡೆಯುವ ಪ್ರಕ್ರಿಯೆಯೂ ನಡೆದಿದೆ. ಇತ್ತೀಚೆಗೆ ಉಪಮುಖ್ಯಮಂತ್ರಿಗಳು ಕೂಡ ಶೀಘ್ರದಲ್ಲೇ ಈ ಕುರಿತು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅನುದಾನಿತ ಶಾಲಾ-ಕಾಲೇಜುಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಶಿಕ್ಷಕರು ಮತ್ತು ಪದವೀಧರರ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ. ಹೀಗಿರುವಾಗ ಶಿಕ್ಷಕರನ್ನು ಬೀದಿಗಿಳಿಸುವ ಬದಲು, ವಿಧಾನ ಪರಿಷತ್ತಿನ ಎಲ್ಲ ೧೪ ಸದಸ್ಯರೇ ವಿಧಾನಸೌಧದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಿ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಮಸ್ಯೆಗಳನ್ನು ಏಕೆ ಪರಿಹರಿಸಲಿಲ್ಲ ಎಂಬುದಕ್ಕೆ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸ್ಪಷ್ಟ ಭರವಸೆ ಹಾಗೂ ಸೂಕ್ತ ಕ್ರಮಗಳನ್ನು ಪ್ರಕಟಿಸಿದ ನಂತರವೂ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಹೋರಾಟದ ಶ್ರೇಯಸ್ಸು ಪಡೆಯಲು ಪ್ರಯತ್ನಿಸುವುದನ್ನು ನಮ್ಮ ಆಡಳಿತ ಮಂಡಳಿಗಳ ಒಕ್ಕೂಟ ಖಂಡಿಸುತ್ತದೆ. ಶಿಕ್ಷಕರು ರಾಜಕೀಯ ಪ್ರೇರಿತ ಪ್ರತಿಭಟನೆಗಳಿಂದ ದೂರವಿದ್ದು, ಆಡಳಿತ ಮಂಡಳಿಯ ನಿರ್ಧಾರವನ್ನು ಗೌರವಿಸಬೇಕು ಎಂದು ಡಾ. ಆರ್.ಎಂ. ಕುಬೇರಪ್ಪ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಪ್ರದಾನ

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ...

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ

ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಪ್ರಿಯದರ್ಶಿನಿ...

ಹಾವೇರಿ:ವಿಎಓ ನೇಮಕಾತಿ ಪರೀಕ್ಷಾ ಅಕ್ರಮ-ನಾಲ್ವರು ಹೆಡ್‌ಕಾನ್‌ಸ್ಟೆಬಲ್‌ ಅಮಾನತು

  ಹಾವೇರಿ:ವಿಎಓ ನೇಮಕಾತಿ ಪರೀಕ್ಷಾ ಅಕ್ರಮ-ನಾಲ್ವರು ಹೆಡ್‌ಕಾನ್‌ಸ್ಟೆಬಲ್‌ ಅಮಾನತು ಓರ್ವ ಸಿಪಿಐ , ಇಬ್ಬರು...

ಹಾವೇರಿಯಲ್ಲಿ ಕಾಡುಹಂದಿ ಬೇಟೆ; ಆರೋಪಿ ಬಂಧನ

ಹಾವೇರಿಯಲ್ಲಿ ಕಾಡುಹಂದಿ ಬೇಟೆ; ಆರೋಪಿ ಬಂಧನ ಸುಟ್ಟ ಕಾಡುಹಂದಿ ಮಾಂಸ ಮಾರಾಟಕ್ಕೆ ಯತ್ನ...