ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ

Date:

ಹಾವೇರಿ: ವಿಶ್ವಕಾರ್ಮಿಕರ ದಿನಾಚರಣೆಯ ಹಿನ್ನೆಲೆಯಲ್ಲಿ ಇಲ್ಲಿನ ಪ್ರಮುಖ ಕಾರ್ಮಿಕರ ಸಂಘಟನೆಯಾಗಿರುವ ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮೇ.೧ ರಂದು ಶುಕ್ರವಾರ ಬೆಳಿಗ್ಗೆ ವಿಶ್ವಕಾರ್ಮಿಕರ ದಿನಾಚರಣೆಯನ್ನು ಕಾರ್ಮಿಕರ ವೃತ್ತ ಎಂದೇ ಹೆಸರಾಗಿರುವ ಇಲ್ಲಿನ ಸುಭಾಸ್‌ಸರ್ಕಲ್‌ನಲ್ಲಿ ನೂರಾರು ಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮೂಗದೂರ ಮಾತನಾಡಿ, ಎಲ್ಲಾ ಶ್ರಮಜೀವಿಗಳನ್ನು ನೆನೆದು ವಿಶ್ವ ಕಾರ್ಮಿಕ ದಿನಚಾರಣೆಯನ್ನು ಆಚರಿಸುತ್ತೇವೆ. ಆದರೆ ದುಡಿಯವ ವರ್ಗದವರ ಭವಣೆ ನಿಂತಿಲ್ಲ. ಕಾರ್ಮಿಕರಿಗಾಗಿ ಸರ್ಕಾರದ ಹತ್ತಾರು ಸೌಲಭ್ಯಗಳಿವೆ. ಆದರೆ ಸಂಘಟನೆ ಮತ್ತು ಹೋರಾಟದ ಕೊರತೆಯಿಂದ ಅರ್ಹ ಕಾರ್ಮಿಕರಿಗೆ ಹಕ್ಕುಗಳು ದೊರೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಕಲಿ ಕಾರ್ಮಿಕ ಕಾರ್ಡನೆಪದಲ್ಲಿ ಹಾವೇರಿಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನೂರಾರು ಅರ್ಹ ಕಾರ್ಮಿಕರ ಕಾರ್ಡುಗಳನ್ನು ರದ್ದುಮಾಡುವ ಮೂಲಕ ಶ್ರಮಜೀವಿಗಳಿಗೆ ಅನ್ಯಾಯಮಾಡಿದ್ದಾರೆ. ಅರ್ಹ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರಯಲೇ ಬೇಕು, ನಾವು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಅರ್ಹ ಕಾರ್ಮಿರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಹಕ್ಕುಗಳನ್ನು ಕೇಳುತ್ತಿದ್ದೇವೆ. ನಾವು ಸಂಘಟಿತರಾಗಿ ಹೋರಾಟ ಮಾಡಿದರೆ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳಗಳಿಗೆ ತೆರಳಿ ಅವರಿಗೆ ಸಿಹಿ ಹಂಚುವ ಮೂಲಕ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಶುಭಕೋರಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ಈ ವೇಳೆ ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಾರ್ಮಿಕರ ಸಂಘದ ಮುಖಂಡರುಗಳಾದ ನಜೀರಸಾಬ ಪಟೇಲ, ಗುಲ್ಜಾರ ಗಣಜೂರ, ಸಂಜೀವಪ್ಪ ಹರಪನಹಳ್ಳಿ, ಹಸನಸಾಬ ಗಣಜೂರ, ಮಾರುತಿ ಕದರಮಮಡಲಗಿ, ನಾಗರಾಜ ಮಲಗೋಡ, ಬಸಯ್ಯ ಕುಲಕರ್ಣಿ,ರಿಯಾಜ ಅಹ್ಮದ ಕೊಟ್ಟಿಗೇರಿ, ಮಹಮ್ಮದ ರಫೀಕ ದೇವಗಿರಿ, ರಿಯಾಜ್ ಅಹ್ಮದ್ ದೇವಿಹೊಸೂರ, ಮಕಬೂಲಹ್ಮದ ಇನಾಮದಾರ, ಅಹ್ಮದ ಪಟೇಲ, ಕರಿಮಸಾಬ ಸವಣೂರ, ಹಜರತ್‌ಅಲಿ ಶೇಕಸನದಿ, ಮುಕ್ತಿಯಾರ ಅಹ್ಮದ್ ಹುಂಬಿಗೇರಿ, ಮಹಬೂಬಖಾನ ಪಠಾಣ, ಪ್ರಕಾ ಅರಸನಾಳ, ರಮ್ಜಾನಸಾಬ ಜಮಾದಾರ, ಮಾರುತಿ ಮುಳಗುಂದ, ಅಲ್ಲಾಉದ್ದಿನ, ವೆಂಕಟೇಶ ಹರಪಮಹಳ್ಳಿ, ಸುಬಾನ ಪಟೇಲ್, ಮಹ್ಮದಖಾನ ಗುತ್ತಲ ಮೊದಲಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯಲ್ಲಿ ಮಹಿಳೆಯ ೭ಲಕ್ಷ ಮೌಲ್ಯದ ಮಾಂಗಲ್ಯ ಸರ್ ಕಿತ್ತು ಪರಾರಿಯಾದ ಖದೀಮರು

ಹಾವೇರಿಯಲ್ಲಿ: ಮಹಿಳೆಯ ೭ಲಕ್ಷ ಮೌಲ್ಯದ ಮಾಂಗಲ್ಯ ಸರ್ ಕಿತ್ತು ಪರಾರಿಯಾದ ಖದೀಮರು ಹಾವೇರಿ:...

ವಾಣಿಜ್ಯ ಸಿಲಿಂಡರ್ ಬೆಲೆ ೩೦೭೧, ಬಿಜೆಪಿ ಹೋರಾಟ ಯಾವಾಗ..?

ವಾಣಿಜ್ಯ ಸಿಲಿಂಡರ್ ಬೆಲೆ ೩೦೭೧, ಬಿಜೆಪಿ ಹೋರಾಟ ಯಾವಾಗ..? ಹಾವೇರಿ: ಕೇಂದ್ರ ಸರ್ಕಾರ...

ವಾಣಿಜ್ಯ ಸಿಲಿಂಡರ್‌  ಬೆಲೆ 993 ರೂ. ಹೆಚ್ಚಳ

    ವಾಣಿಜ್ಯ ಸಿಲಿಂಡರ್‌  ಬೆಲೆ 993 ರೂ. ಹೆಚ್ಚಳ ನವದೆಹಲಿ​: ದೇಶಾದ್ಯಂತ 19 ಕೆಜಿ...

ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟದ ಬದುಕು ನಮಗೆ ಆದರ್ಶವಾಗಲಿ; ಉಡಚಪ್ಪ ಮಾಳಗಿ

ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟದ ಬದುಕು ನಮಗೆ ಆದರ್ಶವಾಗಲಿ; ಉಡಚಪ್ಪ ಮಾಳಗಿ ಹಾವೇರಿ:ಶೋಷಿತರ...