ಏ-೨೬ಕ್ಕೆ ಹಾವೇರಿಯಲ್ಲಿ ಮಹರ್ಷಿ ವಾಲ್ಮೀಕಿ ನೂತನ ಪುತ್ಥಳಿ ಅನಾವರಣ- ಸಮಾರಭ ಯಶಸ್ವಿಗೊಳಿಸಲು ರಮೇಶ ಆನವಟ್ಟಿ ಕರೆ
ಹಾವೇರಿ: ಇಲ್ಲಿನ ಹಳೆ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಪಿ.ಡಬ್ಲೂ ಡಿ. ಕ್ವಾಟರ್ಸ ಹತ್ತಿರದ ನಗರದ ವಾಲ್ಮೀಕಿ ಸರ್ಕಲ್‌ನಲ್ಲಿ ಮಹರ್ಷಿ ವಾಲ್ಮೀಕಿಯವರ ನೂತನ ಪುತ್ಥಳಿ ಅನಾವರಣ ಸಮಾರಭವನ್ನು ಏ.೨೬ರಂದು ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ, ಸಮಾಜ ಭಾಂದವರು, ಸರ್ವಸಮಾಜದವರು ಸದರಿ ಸಮಾರಂಭವನ್ನು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಆನವಟ್ಟಿ ಕರೆ ನೀಡಿದರು.
ಶುಕ್ರವಾರ ಇಲ್ಲಿನ ವಾಲ್ಮೀಕಿ ಸರ್ಕಲ್‌ನಲ್ಲಿ ನಡೆದ ಸಮಾಜದ ಪ್ರಮುಖರ ಸಭೆಯಲ್ಲಿ ನಾತನಾಡಿದ ಅವರು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಬೆಂಗಳೂರ, ಜಿಲ್ಲಾ ಘಟಕ ಹಾವೇರಿಯವತಿಯಿಂದ ಆದಿಕವಿ, ಮಹರ್ಷಿ ವಾಲ್ಮೀಕಿಯವರ ನೂತನ ಪುತ್ಥಳಿಯ ಅನಾವರಣ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಜಿ, ಸಾನಿಧ್ಯವನ್ನು ಹುಕ್ಕೇರಿಮಠದ ಡಾ. ಸದಾಶಿವ ಮಹಾಸ್ವಾಮಿಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಾಲ್ಮೀಕಿ ನಾಯಕ ಮಹಾಸಭಾ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಆನವಟ್ಟಿವಹಿಸುವರು, ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ನೆರವೇರಿಸಲಿದ್ದಾರೆ.
ಮಹರ್ಷಿ ವಾಲ್ಮೀಕಿಯವರ ನೂತನ ಪುತ್ಥಳಿಗೆ ಉಪ ಸಭಾಧ್ಯಕ್ಷರು ಹಾಗೂ ಶಾಸಕರಾದ ರುದ್ರಪ್ಪ ಲಮಾಣಿ ಹಾಗೂ ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಮಾಜಿ ಸಚಿವರಾದ ರಾಜುಗೌಡ ಪುಷ್ಪಾರ್ಚನೆಯನ್ನು ನೆರವೇರಿಸುವರು. ಪ್ರಾಸ್ತವಿಕವಾಗಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯಾಧ್ಯಕ್ಷ ಜಿ.ಟಿ. ಚಂದ್ರಶೇಖರಪ್ಪ ಮಾತನಾಡುವರು.
ಮುಖ್ಯಅತಿಥಿಗಳಾಗಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ , ಮಾಜಿ ಸಚಿವರು ಬಿ. ಶ್ರೀರಾಮುಲು, ಲೋಕಸಭಾ ಸದಸ್ಯರು, ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯರಾದ ಜಿ. ಕುಮಾರನಾಯಕ, ಈ. ತುಕಾರಾಮ, ಪ್ರಿಯಾಂಕ ಜಾರಕಿಹೊಳಿ, ಜವಳಿ, ಕಬ್ಬು, ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕರುಗಳಾದ ಬಸವರಾಜ ಶಿವಣ್ಣನವರ, ವಿಧಾನ ಪರಿಷತ ಮುಖ್ಯ ಸಚೇತಕ ಸಲೀಂ ಅಹ್ಮದ, ಶಾಸಕರುಗಳಾದ ಕೆ.ಎನ್.ರಾಜಣ್ಣ, ರಮೇಶ ಜಾರಕಿಹೋಳಿ, ಬಾಲಚಂದ್ರ ಜಾರಕಿಹೊಳಿ, ಬಸವನಗೌಡ ದದ್ದಲ್, ಟಿ.ರಘುಮೂರ್ತಿ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯು.ಬಿ.ಬಣಕಾರ, ಯಾಸೀರಖಾನ್ ಪಠಾಣ, ಜಿ.ಎನ್.ಗಣೇಶ, ಅನಿಲ ಚಿಕ್ಕಮಾದು, ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ, ಪ್ರಮುಖರಾದ ಬಿ.ಆರ್. ತುಳಸಿರಾಮ್, ನೆಹರು ಓಲೇಕಾರ, ಕೆ. ಮಂಜಪ್ಪ, ಜಿ.ಸಿ.ಗಿರಿಯಪ್ಪನವರ, ಆಂಧ್ರಪ್ರದೇಶದ ಡಿ.ಐ.ಜಿ ಡಾ. ಪಕ್ಕೀರಪ್ಪ ಕಾಗಿನೆಲೆ, ಬಂಗಾರ ಹನುಮಂತ ಆನಂದಸ್ವಾಮಿ ಗಡ್ಡದೇವರಮಠ, ವಿರುಪಾಕ್ಷಪ್ಪ ಬಳ್ಳಾರಿ, ನಾಗರಾಜಪ್ಪ ಹಳಳ್ಳಪ್ಪನವರ, ಅಶೋಕ ಹರನಗಿರಿ, ಡಿ.ಎಮ್.ಸಾಲಿ, ಶಂಕರಗೌಡ ಪಾಟೀಲ, ನಾಗರಾಜ ಬಡಮ್ಮನವರ, ಶ್ರೀಮತಿ ರತ್ನಾ ಭೀಮಕ್ಕನವರ, ಮಲ್ಲಿಕಾರ್ಜುನ ಬೂದಗಟ್ಟಿ , ಸಿ.ಸಿ.ಪಾಟೀಲ ಸೇರಿದಂತೆ ಸಮಾಜದ ಪ್ರಮುಖರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸನ್ಮಾನಿತರು: ವಿವಿಧ ರಂಗದಲ್ಲಿ ಸಾಧನೆ ಮಾಡಿರುವ ಸೋಮನಗೌಡ ಪಾಟೀಲ, ಮಂಜುನಾಥ ಓಲೇಕಾರ, ಶ್ರೀಧರ ದೊಡ್ಡಮನಿ, ಅಶೋಕ ತಳವಾಡಿರ, ಹೊನ್ನಪ್ಪ ಮಾಳಗಿ, ಹೊನ್ನಪ್ಪ ದೊಡ್ಡಮನಿ, ಮಾಲತೇಶ ಅಂಗೂರ, ಬಸವರಾಜ ಹಾದಿಮನಿ, ಶ್ರೀಧರ (ರಾಜು) ಆನವಟ್ಟಿ, ಪ್ರೊ. ಎನ್. ಕೆಂಚವೀರಪ್ಪ, ಶಿವಪ್ಪ ಜವಳಿ, ದೇವೆಂದ್ರಪ್ಪ ಅಳ್ಳಳ್ಳಿ, ಮಂಜುಳಾ ಕರಬಸಮ್ಮನವರ, ಬಸವರಾಜ ಭೀಮಕ್ಕನವರ, ಚಂದ್ರಣ್ಣ ಬೇಡರ, ನಾಗಪ್ಪ ತಿಪ್ಪಕ್ಕನವರ, ರಾಮಣ್ಣ ಕೋಡಿಹಳ್ಳಿ, ಎನ್.ಕೆ.ಮರೋಳ, ಅಶೋಕ (ಬಸಣ್ಣ) ಬನ್ನಿಹಳ್ಳಿ, ಹನುಮಂತಪ್ಪ ತಳವಾರ, ಎನ್.ಎಮ್.ಈಟೇರ, ಯಲ್ಲಪ್ಪ ಗುರಪ್ಪ ತಳವಾರ, ರಾಮಣ್ಣ ಮದ್ದೂರ, ರಾಮಣ್ಣ ಅಗಡಿ, ನಾಗರಾಜ ಯರಿಮನಿ, ನೀಲಪ್ಪ ಹುಲಿಗೆಮ್ಮನವರ, ಶಿವಬಸಪ್ಪ ದೊಡ್ಡತಳವಾರ ಅವರುಗಳನ್ನು ಸನ್ಮಾನಿಸಲಾಗುತ್ತದೆ. ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಮೇಶ ಆನವಟ್ಟಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶೇಖರ ಕಳ್ಳಿಮನಿ, ಬಸವರಾಜ ಭೀಮಕ್ಕವರ, ದ್ಯಾಮಣ್ಣ ಕೊಟ್ಟೂರ, ವೀರೇಶ ಹ್ಯಾಡ್ಲ, ಮಾಲತೇಶ ರಿತ್ತಿ ಸೇರಿದಂತೆ ಅನೇಕ ಯುವ ಮುಖಂಡರು ಹಾಜರಿದ್ದರು.



