
ಹೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್ಗೆರೂ.೧೦ ಪೈಸೆ ಮರುಪಾವತಿ:ಸೈಯದ್ ಅಜೀಮ್ಪೀರ್ ಖಾದ್ರಿ
ಹಾವೇರಿ: ಇಂಧನ ಸಚಿವ ಕೆ.ಜೆ.ಜಾರ್ಜ್
ಮಾರ್ಗದರ್ಶನಲ್ಲಿ ಉತ್ತಮ ವಾಗಿ
ಕಾರ್ಯನಿರ್ವಹಿಸುತ್ತಿರುವ ಹೆಸ್ಕಾಂ,
೨೦೨೪-೨೫ರ ಸಾಲಿನಲ್ಲಿ ರೂ.೧೫೩.೪೬
ಕೋಟಿ ಉಳಿತಾಯ ಮಾಡಿದ್ದು, ಈ ಹಣ
ಗ್ರಾಹಕರಿಗೆ ಮರುಪಾವತಿಸುತ್ತಿದ್ದೇವೆ
ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್
ಅಜೀಮ್ಪೀರ್ ಖಾದ್ರಿ ತಿಳಿಸಿದ್ದಾರೆ.
ವಿದ್ಯುತ್ ಖರೀದಿ, ಪೂರೈಕೆಯನ್ನು ಉತ್ತಮವಾಗಿ ನಿರ್ವಹಿಸಿದ ಪರಿಣಾಮ ೨೦೨೪-೨೦೨೫ರಲ್ಲಿ ಹೆಸ್ಕಾಂ ರೂ.೧೫೩.೪೬ಕೋಟಿ ಉಳಿತಾಯ
ಮಾಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ)
ಆದೇಶದ ಅನ್ವಯ ೨೦೨೪-೨೫ನೇ ಆರ್ಥಿಕ ವರ್ಷದ ಪ್ರತಿಯೊಬ್ಬ ಗ್ರಾಹಕರಿಗೆ ಮಾತ್ರ ೨೦೨೪-೨೫ನೇ ಸಾಲಿನ ಅವಧಿಯಲ್ಲಿ ಅವರ ನಿಜವಾದ ಬಳಕೆಯನ್ನು
ಆಧರಿಸಿ ಪ್ರತಿ ಯೂನಿಟ್ಗೆ ೧೦ಪೈಸೆಯಂತೆ ೨೦೨೬-೨೦೨೭ರಲ್ಲಿ ಪ್ರತಿ ತಿಂಗಳು ಸಮಾನ ಕಂತುಗಳಲ್ಲಿ (೧೨ಕಂತುಗಳು) ಮರು ಪಾವತಿಸಲಾಗುತ್ತದೆ.
ಈ ಮೊತ್ತವನ್ನು ವಿದ್ಯುತ್ ಬಿಲ್ನಲ್ಲಿ ಆರ್ಥಿಕ ವರ್ಷ (ಈಙ)೨೫ಟ್ರೂ ಅಪ್ ಶುಲ್ಕ ಎಂದು ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಸದಾ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಗಲು ಹೊತ್ತಿನಲ್ಲಿಯೇ ಏಳು ಗಂಟೆಗಳ ಕಾಲ ವಿದ್ಯುತ್ ನೀಡುವ ನಿಟ್ಟಿನಲ್ಲಿ ಕುಸುಮ್ ಬಿ
ಹಾಗೂ ಕುಸುಮ್ ಸಿ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಗ್ರಾಹಕರಿಗೆ ೨೦೦ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಯಶಸ್ವಿಯಾಗಿದೆ. ಮುಖ್ಯಮಂತ್ರಿಗಳ ಹಾಗೂ ಇಂಧನ ಸಚಿವರ
ಸಹಕಾರದೊಂದಿಗೆ ಹೆಸ್ಕಾಂ ಜನಪರವಾಗಿ ಕೆಲಸ ಮಾಡುತ್ತಿದೆ. ರೈತರ
ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ನೀಡಲು ನವೀಕೃತ ಶೀಘ್ರ ಸಂಪರ್ಕ ಯೋಜನೆಯನ್ನೂ ಜಾರಿಗೆ ತರಲಾಗಿದೆ ಎಂದು ಸೈಯದ್
ಅಜೀಮ್ಪೀರ್ ಖಾದ್ರಿ ತಿಳಿಸಿದ್ದಾರೆ

