ರಾಣೇಬೆನ್ನೂರನ ಭೂಮಿಕಾ ರೈತ ಉತ್ಪಾದಕರ ಸಂಘಕ್ಕೆ ರಾಜ್ಯದ ಪ್ರತಿಷ್ಠಿತ “ರೈತ ರತ್ನ” ಪ್ರಶಸ್ತಿ

Date:

ಹಾವೇರಿ: ಜಿಲ್ಲೆಯ ರಾಣೇಬೆನ್ನೂರನ ಭೂಮಿಕಾ ರೈತ ಉತ್ಪಾದಕರ ಸಂಘವು ರಾಜ್ಯದ ಪ್ರತಿಷ್ಠಿತ “ರೈತ ರತ್ನ” ಪ್ರಶಸ್ತಿಗೆ ಜೂರಿ ಆಯ್ಕೆ ಆಗಿದೆ , ಪ್ರತಿಷ್ಠಿತ “ಕನ್ನಡ ಪ್ರಭ” ದಿನ ಪತ್ರಿಕೆ ಹಾಗೂ “ಸುವರ್ಣ” ಚಾನೆಲ್ ಬೆಂಗಳೂರು ಇವರು ನೀಡುವ ಈ ಪ್ರಶಸ್ತಿ ವಿತರಣೆ ಸಮಾರಂಭ ಬೆಂಗಳೂರು ನಲ್ಲಿ ನಡೆಯಲಿದೆ.
ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ರಾಣೇಬೆನ್ನೂರ ಕಳೆದ ಎಂಟು ವರ್ಷಗಳಿಂದ ಭೂಮಿಕಾ ರೈತ ಉತ್ಪಾದಕರ ಸಂಘ ರಚನೆ ಮಾಡಿ ಬಹಳಷ್ಟು ಏಳು ಬಿಳು ಕಂಡು ಇಂದು ಉತ್ತಮ ಸ್ಥಿತಿಯಲ್ಲಿ ಸಂಘ ನಡಿಯುತ್ತಿದೆ ೩೫ ಲಕ್ಷ ಈ ವರ್ಷ ವಹಿವಾಟು ನಡಿಸಿದೆ. ಏಳುನೂರು ಷೇರುದಾರರನ್ನು ಹೊಂದಿದ್ದು ಮುಖ್ಯವಾಗಿ ರೈತರಿಗೆ ವಿವಿಧ ದೇಶಿ ಬೀಜಗಳನ್ನು ವಿತರಿಸಿ, ಮತ್ತೆ ರೈತರಿಂದ ಖರೀದಿಸಿ ರೈತರಿಗೆ ಒಂದೇ ಬೆಳೆ ಬೆಳೆಯದೆ ಬೆಳೆ ಬದಲಾವಣೆಗಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಸುತ್ತಿದೆ.
೨೨ ತಳಿ ರಾಗಿ ಹಾಗೂ ೧೩ ತಳಿ ಬೆಂಡಿಗಳನ್ನು ಬೆಳೆಸಿದ್ದು ವಾಸನ ಹೈದರಾಬಾದ್ ಹಾಗೂ ಸಹಜ ಸಮೃದ್ಧ ಸಂಸ್ಥೆ ಮೈಸೂರು ಇವರೊಂದಿಗೆ ತಾಂತ್ರಿಕ ತರಬೇತಿ ಪಡೆದುಕೊಂಡು ಹಾವೇರಿ ಜಿಲ್ಲೆಯಲ್ಲಿ ಸುಮಾರು ಹಳ್ಳಿಗಳ್ಳಿ ಸಿರಿಧಾನ್ಯಗಳು, ಅಕ್ಕಡಿ ಸಾಲು ಪದ್ಧತಿ, ತರಕಾರಿ ಸೊಪ್ಪು ಬೀಜಗಳನ್ನು ವಿತರಿಸಿ ರೈತರಲ್ಲಿ ಬೆಳೆ ಪರಿವರ್ತನೆ ಹಾಗೂ ಸುಸ್ತೀರ ಕೃಷಿ ಮಾಡುವಂತೆ ಪ್ರೇರಣೆ ನೀಡುತ್ತಿದೆ. ಮೂರು ಮಹಿಳಾ ಬೀಜ ಬ್ಯಾಂಕ್ ಹಾಗೂ ಮೂರು ಜೈವಿಕ ಕೀಟ ನಾಶಕ, ಸ್ಥಳೀಯವಾಗಿ ರೈತರಿಗೆ ಬೀಜ ನೀಡುವದು ಜೈವಿಕ ಕೀಟನಾಶಕ, ಜೀವಾಮೃತ ಮಾಡಲು ಪ್ರೇರಪಿಸಿದೆ. ಭೂಮಿಕಾ ರೈತ ಉತ್ಪಾದಕರ ಸಂಘ ಸಿರಿಧಾನ್ಯ ಮೌಲ್ಯವರ್ಧನೇ ಮಾಡಿ ಮಾರಾಟ ಮಾಡುವದು ಬೇರೆ ಬೇರೆ ಕಡೆಗೆ ಮೇಳಗಳಿಗೆ ಹೋಗಿ ಸಿರಿಧಾನ್ಯ ಬೀಜ ಹಾಗೂ ಸಾವಯವ ಪದ್ಧತಿ ಮಹತ್ವ ಹೇಳುವದರ ಜೊತೆಗೆ ರೈತರಿಗೆ ಕೃಷಿ ಇಲಾಖೆ ರಾಣೇಬೆನ್ನೂರ ಇವರಿಂದ ಸಹಾಯ ಪಡೆದುಕೊಂಡು ಟ್ರ್ಯಾಕ್ಟರ್ ಹಾಗೂ ಸಲಕರಣೆ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಉಳುಮೆ ಮಾಡಲು ಸಲಕರಣೆ ಸೇವೆ ನೀಡುತ್ತದೆ.
ಈ ಸಂಘದ ಬೆಳವಣಿಗೆ ಗಾಗಿ ಮೊದಲು ಕ್ರಿಸ್ಟಲ್ ಬೆಂಗಳೂರು ಇವರು ಸಹಾಯ ಮಾಡಿದ್ದರು, ನಂತರ ಅಂಧೇರಿ ಹಿಲ್ಫ್ ಎಂಬ ಸಂಸ್ಥೆ ಸಹ ಸಹಾಯ ಮಾಡುತ್ತಿದೆ. ೧೩ ಜನ ಆಡಳಿತ ಮಂಡಳಿ ಅವರು ಟೊಂಕ ಕಟ್ಟಿ ಭೂಮಿಕಾ ರೈತ ಉತ್ಪಾದಕರ ಸೇವೆ ಇನ್ನೂ ಬಹಳಷ್ಟು ರೈತರಿಗೆ ಹಾಗೂ ಮಹಿಳೆಯರ ಗುಂಪುಗಳ ಮೂಲಕ ಮೌಲ್ಯವರ್ದಿತ ಉತ್ಪನ್ನ ಹಾಗೂ ಸಿರಿಧಾನ್ಯ, ಅಕ್ಕಡಿಕಾಳು, ತರಕಾರಿ ಸೊಪು, ಸಾವಯವ ಹಾಗೂ ಸಮಗ್ರ ಪದ್ಧತಿ ಅಳವಡಿಸಿಕೊಂಡು ರೈತರು ಖರ್ಚು ಕಡಿಮಿ ಮಾಡಿ ತಮ್ಮ ಆದಾಯ ಹೆಚ್ಚಿಸುವ ಕಡೆಗೆ ಪರಿವರ್ತನೆ ಮಾಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ಬೆನ್ನಲುಬಾಗಿ ನಿಂತಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ ಜಿಲ್ಲೆಯಲ್ಲಿ ಬರ ಘೊಷಿಸಿ, ರೈತರ ನೆರವಿಗೆ ಧಾವಿಸಿ-ವೆಂಕಟೇಶ ನಾರಾಯಣಿ

ಹಾವೇರಿ ಜಿಲ್ಲೆಯಲ್ಲಿ ಬರ ಘೊಷಿಸಿ, ರೈತರ ನೆರವಿಗೆ ಧಾವಿಸಿ-ವೆಂಕಟೇಶ ನಾರಾಯಣಿ ಹಾವೇರಿ: ಹಾವೇರಿ...

ಹಾವೇರಿ ಜಿಲ್ಲಾ ಕಾಂಗ್ರೆಸ್‌ಗೆ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಆನವಟ್ಟಿ

ಹಾವೇರಿ ಜಿಲ್ಲಾ ಕಾಂಗ್ರೆಸ್‌ಗೆ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಆನವಟ್ಟಿ ಹಾವೇರಿ:...

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ(ಎಐ) ವಿಶ್ವವಿದ್ಯಾಲಯ ಘೋಷಿಸಿದ ಸಿ.ಎಂ.ಡಿ.ಕೆ.ಶಿವಕುಮಾರ

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ(ಎಐ) ವಿಶ್ವವಿದ್ಯಾಲಯ ಘೋಷಿಸಿದ...

ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಆಗ್ರಹ-ಆರ್‌ಟಿಐ ಪತ್ರಕರ್ತರ ಮೆಲೆ ನಿಗಾಕ್ಕೆ ಮನವಿ : ಡಿಜಿಪಿ ಭೇಟಿ ಮಾಡಿದ ಕೆಯುಡಬ್ಲೂಜೆ ನಿಯೋಗ

ನಕಲಿ ಪತ್ರಕರ್ತರ ಮೇಲೆ ಕ್ರಮಕ್ಕೆ ಆಗ್ರಹ-ಆರ್‌ಟಿಐ ಪತ್ರಕರ್ತರ ಮೆಲೆ ನಿಗಾಕ್ಕೆ ಮನವಿ ಡಿಜಿಪಿ...