ಡೊನೇಶನ್ ಹಾವಳಿ-ತಪ್ಪಿತಸ್ಥ ಶಿಕ್ಷಣ ಸಂಸ್ಥೆಗಳ ತನಿಖೆಗೆ ರವೀಂದ್ರೌಡ ಪಾಟೀಲ ಆಗ್ರಹ

Date:

ಹಾವೇರಿ : ಖಾಸಗಿ ಶಾಲೆಗಳ ಮಿತಿಮೀರಿದ ಡೊನೇಶನ್ ಹಾವಳಿ ತಡೆಯುವಂತೆ ಒತ್ತಾಯಿಸಿ ಹಾಗೂ ಎಗ್ಗಿಲ್ಲದೆ ಡೊನೇಶನ್ ವಸೂಲಿ ಮಾಡುತ್ತಿರುವ ಹಾಗೂ ಕೆಲವು ಸರಕಾರದಿಂದ ಅನುದಾನಿತಗೊಂಡ ಶಿಕ್ಷಣ ಸಂಸ್ಥೆಯವರು ಕೂಡ ಸುಮಾರು
ವರ್ಷಗಳಿಂದ ಡೊನೇಶನ್ ವಸೂಲಿ ಮಾಡಿ ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಪೋಷಕರಿಗೆ, ವಿದ್ಯಾರ್ಥಿಗಳಿಗೆ ನಿರಂತರ ಅನ್ಯಾಯ ಮಾಡಿದ್ದು ಈಗ ಭರ್ಜರಿಯಾಗಿ ಎಡ್ಮಿಶನ್ ಮಾಡಿಸಿಕೊಳ್ಳುತ್ತಾ ಯಾರ ಹಂಗಿಲ್ಲದೆ ಫೀ ಹೆಸರಿನಲ್ಲಿ ಡೊನೇಶನ್ ವಸೂಲಿ ಮಾಡುವುದನ್ನು ತಡೆಗಟ್ಟಲು ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯ ‘ಡೆರಾ’ ಕಮಿಟಿ ಸಭೆ ಕರೆದು ತಪ್ಪಿತಸ್ಥ ಶಿಕ್ಷಣ ಸಂಸ್ಥೆಗಳ ಮೇಲೆ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ವಿಕಾಸ ಪರಿಷತ್ ರಾಜ್ಯಾಧ್ಯಕ್ಷ ರವೀಂದ್ರಗೌಡ ಪಾಟೀಲ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳನ್ನು ಕರ್ನಾಟಕ ರಾಜ್ಯ ವಿದ್ಯಾರ್ಥಿ ವಿಕಾಸ ಪರಷತ್, ಕರ್ನಾಟಕ ರಾಜ್ಯ ರೈತ ಸಂಘ, ರೈತ ಮಹಿಳಾ ಸಂಘಟನೆ, ಐ.ಎಫ್.ಟಿ.ಯು ಸಂಘಟನೆ ಹಾವೇರಿ ಭಾರತ ವಿದ್ಯಾರ್ಥಿ ಫೆಡರೇಶನ್, ಭ್ರಷ್ಟಾಚಾರ ನಿರ್ಮೂಲನಾ ಹೋರಾಟ ಸಮಿತಿ, ಪ್ರಜ್ಞಾವಂತ
ನಾಗರಿಕರ ವೇದಿಕೆ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಅಟೋ ಚಾಲಕರ ಹಾಗೂ ಮಾಲಕರ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಪದಾಶಿಕಾರಿಗೊಂದಿಗೆ ಭೇಟಿ ಮಾಡಿದ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದ್ದು ಇದೊಂದು ದೊಡ್ಡ ಮಾಫಿಯಾ ಇದೆ.
ಬಡವರ, ಪ್ರತಿಭಾವಂತ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಮರಚಿಕೆಯಾಗುತ್ತಿದೆ ಡೊನೇಶನ್ ಹಾವಳಿ ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಖಾಸಗಿ ಶಾಲೆಯವರೊಂದಿಗೆ ಮಿಲಾಪಿಯಾಗಿದ್ದಾರೆ ಎಂದು ಆಪಾದಿಸಿದ ಅವರು ರಾಣೇಬೆನ್ನೂರಿನಲ್ಲಿ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯವರು ಒಂದರಿಂದ ಐದನೇ ತರಗತಿವರೆಗೆ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಸರ್ಕಾರದಿಂದ ಗ್ರಾಂಟ್ ಆಗಿದ್ದರೂ ಕೂಡ ೬ ರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯ ತನಕ ಅವರು ಪ್ರಾರಂಭಿಸಿರುವ ಇಂಗ್ಲಿಷ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳಿಗೆ ವಸೂಲಿ ಮಾಡುವ ಡೊನೇಶನ್‌ನ್ನು ಒಂದರಿಂದ ಐದನೇ ತರಗತಿಗಳಿಗೆ ಗ್ರಾಂಟ್ ಆದ ತರಗತಿಯ ಮಕ್ಕಳಿಂದಲೂ ಸುಮಾರು ವರ್ಷಗಳಿಂದ ಡೊನೇಶನ್ ವಸೂಲಿ ಮಾಡಿದ್ದು ಬ್ರಹ್ಮಾಂಡ ಭ್ರಷ್ಟಾಚರ ಎಸಗಿದ್ದಾರೆ ಎಂದರು.
ಐ.ಏಫ್.ಟಿ.ಯು ಸಂಘಟನೆಯ ರಾಜ್ಯ ಮುಖಂಡ ಹೊನ್ನಪ್ಪ ಮರಿಯಮ್ಮನವರ ಮಾತನಾಡಿ ಯಾವ ಕ್ಷೇತ್ರದಲ್ಲಿಯೂ ನಡೆಯದಂತಹ ಭ್ರಷ್ಟಾಚಾರ ಈ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಇದರ ಬಗ್ಗೆ ತನಿಖೆಯಾಗಬೇಕೆಂದರು. ವಾರದೊಳಗೆ ಡೆರಾ
ಕಮಿಟಿ ಸಭೆ ಕರೆದು ದೂರದಾರ, ಹೋರಾಟಗಾರರನ್ನು ಸಭೆಗೆ ಅಹ್ವಾನಿಸಿ ಸಮಸ್ಯೆ ಆಲಿಸಬೇಕೆಂದರು.
ಈ ಸಂದರ್ಭದಲ್ಲಿ ಡಿ.ಡಿ.ಪಿ.ಐ. ಮೋಹನ ದಂಡಿನರವರಿಗೆ ಹಾವೇರಿ ಜಿಪಂ ಸಿ.ಇ.ಓ ದಲ್ಜಿತ್‌ಕುಮಾರ ರವರಿಗೆ ಈ ಬಗ್ಗೆ ಇದೇ ಸಂದರ್ಭದಲ್ಲಿ ತುರ್ತು ಡೆರಾ ಕಮಿಟಿ ಸಭೆ ಕರೆದು ಸಮಸ್ಯೆ ವಿಚಾರಿಸಬೇಕೆಂದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಜಗದೀಶ ಕೆರೂಡಿ, ಹರಿಹರಗೌಡ ಪಾಟೀಲ, ಸುರೇಶ ಮಲ್ಲಾಪುರ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ ಯಶೋಧಾ

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ...

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾಸೇವೆಯ ಉದ್ದೇಶ: ಬಸವರಾಜ ಶಿವಣ್ಣನವರ

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾಸೇವೆಯ ಉದ್ದೇಶ: ಬಸವರಾಜ ಶಿವಣ್ಣನವರ ಬ್ಯಾಡಗಿ :...

ಹಾವೇರಿ:ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

  ಹಾವೇರಿ:ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಹಾವೇರಿ: ಪರಿಶಿಷ್ಟ ವರ್ಗದ ಜನಾಂಗದ...

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಪ್ರಭು ಬಿಷ್ಟನಗೌಡ್ರ ನೇಮಕ

    ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಪ್ರಭು ಬಿಷ್ಟನಗೌಡ್ರ ನೇಮಕ ಹಾವೇರಿ: ಹಾವೇರಿ...