
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಪ್ರಭು ಬಿಷ್ಟನಗೌಡ್ರ ನೇಮಕ
ಹಾವೇರಿ: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಮುಖಂಡ ಪ್ರಭು ಬಿಷ್ಟನಗೌಡ್ರ ಅವರನ್ನು ಸೆ.4ರಂದು
ಶುಕ್ರವಾರ ನೇಮಿಸಲಾಗಿದೆ.
ಈ ಮೊದಲು ಅಧ್ಯಕ್ಷರಾಗಿದ್ದ
ಸಣ್ಣ ಫಕೀರಗೌಡ ನಿಂಗನಗೌಡ ಗಾಜೀಗೌಡ ಅವರ ಬದಲಿಗೆ ಪ್ರಭುಗೌಡ ಶಂಕರಗೌಡ ಬಿಷ್ಟನಗೌಡ್ರ ವಕೀಲರು, ಶಿವಯೋಗೀಶ್ವರ ನಗರ ಹಾವೇರಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ನಗರಾಭಿವೃದ್ಧಿ ಇಲಾಖೆ
ಆದೇಶಿಸಿದೆ.
ತಮ್ಮನ್ನು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲು ಶ್ರಮಿಸಿದ ಸಕ್ಕರೆ ಹಾಗೂ ಜವಳಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ್ ಕುಮಾರ್ ನೀರಲಗಿ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳಿಗೆ, ಕಾಂಗ್ರೆಸ್ ಪಕ್ಷದ ಮುಖಂಡರುಗಳಿ ಬಿಷ್ಟನಗೌಡ್ರ ಕೃತಜ್ಞತೆ ಸಲ್ಲಿಸಿದ್ದಾರೆ.
malatesh angur
haveri
haveri

