
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕರಾಗಿ ಸಂಜಯಗಾಂಧಿ ನೇಮಕ
ಹಾವೇರಿ: ಹಾವೇರಿ ಜಿಲ್ಲೆಯ ಕಾಂಗ್ರೆಸ್ ಪ್ರಚಾರ ಸಮಿತಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕರನ್ನಾಗಿ ಕಾಂಗ್ರೆಸ್ ಮುಖಂಡ.ಸಂಜಯಗಾಂಧಿ ಪು ಸಂಜೀವಣ್ಣನವರನ್ನು ನೇಮಕ
ಮಾಡಿ ಆದೇಶ ಪತ್ರವನ್ನು ಗುರುವಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ನೀಡಿದರು.
ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪಕ್ಷದ ಹಿರಿಯ ಮುಖಂಡರುಗಳಾದ ವಾಸುದೇವಮೂರ್ತಿ,ರಾಜ್ಯ ಉಪಾಧ್ಯಕ್ಷರು, ಸಾಮಾಜಿಕ ಜಾಲತಾಣ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ, ಎಸ್ ನಾರಾಯಣ್ ಮುಖ್ಯ ಸಂಯೋಜಕ ಡಾ.ಎಲ್ ಹನುಮಂತಯ್ಯ ರಾಜ್ಯ ಉಪಾಧ್ಯಕ್ಷ ಎಂ ಶಿವಣ್ಣ, ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತನಾದ ತನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸಂಜೀವ ಕುಮಾರ್ ಎಂ ನೀರಲಗಿ, , ಹಾಗೂ ಸಭಾಧ್ಯಕ್ಷರಾಗಿರುವ ರುದ್ರಪ್ಪ ಮಾನಪ್ಪ ಲಮಾಣಿ, ಬ್ಯಾಡಗಿ ಕ್ಷೇತ್ರದ ಶಾಸಕರಾದ ಬಸವರಾಜ್ ಶಿವಣ್ಣನವರ, ಕೊಟ್ರೇಶಣ್ಣ ಬಸಗಣ್ಣಿ, ಸಿದ್ದಪ್ಪ ಬಾಲಣ್ಣನವರ ಮತ್ತಿತರರಿಗೆ ಸಂಜಯಗಾಂಧಿ ಧನ್ಯವಾದ ಅರ್ಪಿಸಿದ್ದಾರೆ.

