ರಾಣೆಬೆನ್ನೂರು ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹15.60 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ, ಇಬ್ಬರ ಬಂಧನ

Date:

ಹಾವೇರಿ:  ಜಿಲ್ಲೆಯ ರಾಣೇಬೆನ್ನೂರು ನಗರದ ಐಸಿಐಸಿಐ (ICICI) ಬ್ಯಾಂಕ್‌ನ ನಗದು ಠೇವಣಿ ಯಂತ್ರಕ್ಕೆ (CDM) ನಕಲಿ ನೋಟುಗಳನ್ನು ಜಮಾ ಮಾಡಿ ಚಲಾವಣೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ರಾಣೆಬೆನ್ನೂರು ನಗರ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹15,60,000 ಮೌಲ್ಯದ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ಘಟನೆಯ ಹಿನ್ನೆಲೆ:
ನವೆಂಬರ್ 14ರಂದು ಸಂಜೆ ಸುಮಾರು 4:53ರ ವೇಳೆಗೆ ಬ್ಯಾಂಕ್ ಗ್ರಾಹಕನಾದ ಸುರೇಶ್ ಜಿ. ಜಲ್ಲಾಳ ಎಂಬಾತ ರಾಣೆಬೆನ್ನೂರು ಶಾಖೆಯ ಐಸಿಐಸಿಐ ಬ್ಯಾಂಕ್‌ನ ನಗದು ಠೇವಣಿ ಯಂತ್ರದ ಮೂಲಕ ₹500 ಮುಖಬೆಲೆಯ 76 ನಕಲಿ ನೋಟುಗಳನ್ನು (ಒಟ್ಟು ₹38,000) ಜಮಾ ಮಾಡಿದ್ದ. ಈ ಕುರಿತು ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಕೇಶ್ ಕರಿದ್ಯಾವಣ್ಣನವರ ನವೆಂಬರ್ 19ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 178, 179 ಮತ್ತು 180ರ ಅಡಿಯಲ್ಲಿ ತನಿಖೆ ಕೈಗೊಂಡಿದ್ದರು.
ವಿಶೇಷ ತಂಡದಿಂದ ಕಾರ್ಯಾಚರಣೆ:
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಶಿರಕೋಳ ಹಾಗೂ ಡಿವೈಎಸ್‌ಪಿ ಲೋಕೇಶ್ ಜಿ. ಅವರ ಮಾರ್ಗದರ್ಶನದಲ್ಲಿ, ಸಿಪಿಐ ವೆಂಕಟೇಶ್ ಎನ್. ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ತಂಡವು ಕಾರ್ಯಾಚರಣೆ ನಡೆಸಿ ನವೆಂಬರ್ 23ರಂದು ಪ್ರಮುಖ ಆರೋಪಿ, ಮೇಡ್ಲೇರಿ ನಿವಾಸಿ ಸುರೇಶ್ ಮಾಲತೇಶಪ್ಪ ಜಲ್ಲಾಳ (38) ಎಂಬಾತನನ್ನು ಬಂಧಿಸಿ, ಆತನಿಂದ ₹50,000 ಮೌಲ್ಯದ (100 ನೋಟುಗಳು) ನಕಲಿ ನೋಟುಗಳನ್ನು ವಶಪಡಿಸಿಕೊಂಡಿತ್ತು. ತನಿಖೆಯನ್ನು ಮುಂದುವರಿಸಿದ ಪೊಲೀಸರು ನವೆಂಬರ್ 24ರಂದು ಮತ್ತೊಬ್ಬ ಆರೋಪಿ, ಮೇಡ್ಲೇರಿ ನಿವಾಸಿ ಮಾಲತೇಶ್ ದೇವೇಂದ್ರಪ್ಪ ಮೈಲಾರ (29) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಬಳಿಯಿದ್ದ ₹14,72,000 ಮೌಲ್ಯದ (2,944 ನೋಟುಗಳು) ನಕಲಿ ನೋಟುಗಳು ಪತ್ತೆಯಾಗಿವೆ.
ಸಿನಿಮಾ ಶೂಟಿಂಗ್ ನೋಟುಗಳ ಬಳಕೆ:
ಬ್ಯಾಂಕ್ ಅಧಿಕಾರಿಗಳಿಂದ ಜಪ್ತಿ ಮಾಡಿದ ₹38,000 ಹಾಗೂ ಆರೋಪಿಗಳಿಂದ ವಶಪಡಿಸಿಕೊಂಡ ₹15,22,000 ಸೇರಿ ಒಟ್ಟು ₹15,60,000 ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಳ್ಳಲಾದ ನೋಟುಗಳ ಮೇಲೆ “CHILDREN BANK OF INDIA, MOVIE SHOOTING PURPOSE ONLY” ಮತ್ತು “I PROMISE TO PAY THE BEARER THE SUM OF FIVE HUNDRED COUPON” ಎಂದು ಮುದ್ರಿತವಾಗಿರುವುದು ಕಂಡುಬಂದಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ರಾಣೆಬೆನ್ನೂರು ನಗರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ

ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ ಹಾವೇರಿ:...

ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಾಯ, ಮೂವರ ರಕ್ಷಣೆ

ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಾಯ, ಮೂವರ ರಕ್ಷಣೆ ಅಪಘಾತದಲ್ಲಿ...

ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ ಪ್ರತಿಷ್ಠಾಪನೆ

ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ...

ನ.೨೭ಕ್ಕೆ ಹಾವೇರಿಗೆ ಸಿಎಂ ಡಿ.ಕೆ.ಶಿವಕುಮಾರ-ಕನಕದಾಸರ ಕಂಚಿನ ಮೂರ್ತಿಯ ಅನಾವರಣ-ಶಿವಣ್ಣನವರ

ನ.೨೭ಕ್ಕೆ ಹಾವೇರಿಗೆ ಸಿಎಂ ಡಿ.ಕೆ.ಶಿವಕುಮಾರ-ಕನಕದಾಸರ ಕಂಚಿನ ಮೂರ್ತಿಯ ಅನಾವರಣ-ಶಿವಣ್ಣನವರ ಹಾವೇರಿ: ಸಂತ ಕನಕದಾಸರ...