
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
ಹಾವೇರಿಜಿಲ್ಲೆಗೆ ನಿವೇದಿತಾ ಅಜ್ಜಮ್ಮನವರ ಪ್ರಥಮ 625ರಲ್ಲಿ 623 ಅಂಕ
ಹಾವೇರಿ : ಎಸ್ಎಸ್ಎಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಹಾವೇರಿಜಿಲ್ಲೆಗೆ ನಿವೇದಿತಾ ಅಜ್ಜಮ್ಮನವರ 625ರಲ್ಲಿ 623 ಅಂಕ ಪಡೆಯುವ ಮೂಲಕ ಪ್ರಥಮಸ್ಥಾನ ಪಡೆದಿದ್ದಾರೆ.
ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಿವೇದಿತಾ ಪರಶುರಾಮ ಅಜ್ಜಮ್ಮನವರ 625ರಲ್ಲಿ 623 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೃಷಿಕ ಕುಟುಂಬದ ಹಿನ್ನೆಲೆಯ ನಿವೇದಿತಾ ಅವರು ತಮ್ಮ ಪರಿಶ್ರಮ ಮತ್ತು ನಿಯಮಿತ ಅಭ್ಯಾಸದ ಮೂಲಕ ಈ ಸಾಧನೆ ಮಾಡಿದ್ದು, ಐದು ವಿಷಯಗಳಲ್ಲಿ ಶೇಕಡಾ 100 ಅಂಕಗಳನ್ನು ಗಳಿಸಿದ್ದಾರೆ. ಸೈನ್ಸ್ ವಿಷಯದಲ್ಲಿ ಮಾತ್ರ ಎರಡು ಅಂಕಗಳ ಕೊರತೆಯಿಂದ ಪೂರ್ಣ ಅಂಕ ತಪ್ಪಿದೆ..
ವಿದ್ಯಾರ್ಥಿನಿಯ ಈ ಅಪೂರ್ವ ಸಾಧನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶ ಗೌಡ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಹಲವಾರು ಗಣ್ಯರು, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ವೈ.ಎಚ್. ಕುಡುಪಲಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ..
ಗ್ರಾಮ ಹಾಗೂ ತಾಲೂಕ ಹಾಗೂ ಜಿಲ್ಲೆಗೆ ಕೀರ್ತಿ ತಂದ ನಿವೇದಿತಾ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗಿದೆ.

