“ಕರುಣ ಬಂದರ ಕಾಯೋ………

Date:

“ಕರುಣ ಬಂದರ ಕಾಯೋ………
ಆವ ಕಾಯಕವಾದರೂ ಸ್ವಕಾಯಕವ ಮಾಡಿಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮ.
                            -ಲದ್ದೆಯ ಸೋಮಣ್ಣ
ಹಾಗೆ ವಚನಗಳನ್ನು ಓದುತ್ತಿದ್ದಾಗ ನನ್ನನು ಬಹಳವಾಗಿ ಕಾಡಿದ ಮತ್ತೆ, ಮತ್ತೆ ಓದಿ ಈ”ವಚನ ಪಚನ” ಮಾಡಿ ಕೊಳ್ಳಲು ಸಾಕಷ್ಟು ಪರದಾಡಿದೆ.
ಬಸವಣ್ಣನವರ ಸಮಕಾಲಿನರಾದ ಶರಣ ಲದ್ದೆಯ ಸೋಮೇಶ್ವರ ಅವರ ವಚನ ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು………..
(ಬಸವಣ್ಣನವರ ಸಮಕಾಲೀನ ಶರಣ ಸೋಮಣ್ಣ ಈಗಿನ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲದ್ದೆ (ಲಾಧಾ) ಗ್ರಾಮದವನು. ಲದ್ದೆ ಎಂದರೆ ಹೊರೆ ಎಂಬ ರ‍್ಥವೂ ಇದೆ. ಲದ್ದೆ ಗ್ರಾಮದಿಂದ ಹುಲ್ಲಿನ ಹೊರೆಯನ್ನು ಹೊತ್ತು, ಸಮೀಪದ ಬಸವಕಲ್ಯಾಣ ತಾಲ್ಲೂಕಿನ ಹುಲಸೂರಿನಲ್ಲಿ ಮಾರುವ ಕಾಯಕವನ್ನು ಕೈಕೊಂಡಿದ್ದ ಎಂದು ಶರಣ ಸಾಹಿತಿ ರಮ್ಜಾನ್ ರ‍್ಗಾ ಸರ್ ತಮ್ಮ ಲೇಖನ ಒಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ)
(೧೨ ನೇ ಶತಮಾನ,ಕುದುರೆ ಲಾಯದಲ್ಲಿ ಲಾಯ ಶುದ್ದಿಮಾಡುವ ಕಾಯಕದಲ್ಲಿ ತೊಡಗಿದ್ದ ಎನ್ನುವ ಮಾತಿದೆ) ಇರಲಿ
ಶರಣ  ಸೋಮಣ್ಣ ತನ್ನ ವಚನದಲ್ಲಿ
ನಮ್ಮ ಪಾಲಿಗೆ ಬಂದ ಕಾಯಕವನ್ನು ಅತ್ಯಂತ ನಿಷ್ಟೆ ಮತ್ತು ಪ್ರಮಾಣಿಕತೆಯಿಂದ ಮಾಡಬೇಕು, ಅದರಿಂದ ಬಂದ ಫಲವನ್ನು ದಾಸೋಹವ ಮಾಡಿ ಅನುಭವಿಸ ಬೇಕು.ಇದರಾಚೆಗೆ ರೋಗ ಬಂದರೆ ನೆರಳಬೇಕು,ಮರಣ ಬಂದರೆ ಸಾಯಬೇಕು.
ದೈನೇಸಿಯಗಿ ಜೀವ ಉಳಿಸು,ರೋಗ ಇಲ್ಲವಾಗಿಸು ಎಂದು ದೇವರ ಮೊರೆ ಹೋಗಬಾರದು ಎಂಬುದು  ಲದ್ದೆಯ ಸೋಮಣ್ಣನವರು ಅಭಿಪ್ರಾಯ ಇರಬಹುದು. ಯಾವುದೇ ಸಂದರ್ಭದಲ್ಲಿ ಧೈರ್ಯ
ಗೆಡಬಾರದು ಎಂಬುದು ಈ ಅಧ್ಭುತ  ವಚನದ ಸಂದೇಶ.
ಆದರೆ ಎಲ್ಲವೂ ಸರಿಯಾಗಿದ್ದು ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಅಘಾತಗಳು ಮನುಷ್ಯನ ಜಂಘಾಬಲವನ್ನು ಅಲಗಾಡಿಸುತ್ತವೆ. ಆತ್ಮವಿಶ್ವಾಸವನ್ನು ಕುಗ್ಗಿ ಸುತ್ತವೆ.
ನನ್ನ ಬದುಕಿನಲ್ಲಿ ಎದುರಾದ ಅನಿರೀಕ್ಷಿತ ಅಘಾತ ನನ್ನ ಬದುಕಿನ ಚಿತ್ರಣವನ್ನೇ ಬದಲಾಯಿಸಿ ಬಿಟ್ಡಿದೆ. ಸ್ವತಂತ್ರ ಹಕ್ಕಿಯ ಹಾಗೆ ಹಾರಾಡಿಕೊಂಡಿದ್ದ ನಾನು ರೆಕ್ಕೆ ಮುರಿದ ಹಕ್ಕಿಯ ಹಾಗೆ ನನ್ನ ಕಾಲು ಕಳೆದುಕೊಂಡ ಪರಾವಲಂಬಿಯಾಗಿರುವೆ.
 ಬಲಕಾಲು ಹೋಗಿದೆ, ಎಡಕಾಲು ಇದೆಯಲ್ಲ ಎನ್ನುವ ಧೈರ್ಯ
ದಲ್ಲಿದ್ದೆ, ಆದರೆ ನನ್ನ ‌ ದುರಾದೃಷ್ಟಕ್ಕೆ ಎಡಕಾಲಿನ ಹೆಬ್ಬೆರಳು ಕಟ್ಟಾಗಿದ್ದು, ಹೇಗೋ ಗಾಯವಾಸಿಯಾಗಿತ್ತು. ಕ್ರತಕ ಕಾಲಿನ ಸಹಾಯದಿಂದ ಓಡಾಡುವ ಪ್ರಯತ್ನವನ್ನು ಮಾಡುತ್ತಿದ್ದೆ. ಯಾವಾಗ ಒಂದೇ ಕಾಲಿನ ಮೇಲೆ ಒತ್ತಡ ಜಾಸ್ತಿಯಾಗಿ ಎಡಕಾಲಿನ ಪಾದದ ಮೂಳೆ ಸವೆದು ಕಾಲು ನೆಲದ ಮೇಲೆ ಇಡಲಾರದಷ್ಟು ಯಾತನೆ ಉಂಟಾಯಿತು.
ಚಿಕಿತ್ಸೆಗಾಗಿ ಹಲವಾರು ವೈದ್ಯರನ್ನು ಸಂಪರ್ಕವನ್ನು ಮಾಡಿದಾಗ
ಎಕ್ಸರೆ, ಸ್ಕಾನಿಂಗ್ ಮಾಡಿ ನಿಮಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ, ಆಪರೇಷನ್ ಮಾಡಿದರೆ ತಡೆದುಕೊಳ್ಳುವ ಶಕ್ತಿ ಇಲ್ಲ.  ಪಾದದ ಮೊಳೆಗಳು ಸವೆದಿವೆ, ಶಸ್ತ್ರ ಚಿಕಿತ್ಸೆಯ ಮೂಲಕ ಸ್ಕ್ರೂ ಅಳವಡಿಸಿದರೆ “ಕಾಲು ಸರಿ ಹೋಗುತ್ತದೆ” ಎನ್ನುವ ಭರವಸೆಯನ್ನು ಹುಟ್ಟಿಸಿದರು.
ಕಾಲಿನ ನೋವು, ಒಂದು ‌ರೀತಿ ಯಮಯಾತನೆ. ನೋವಿನಿಂದಾಗಿ ಸರಿಯಾಗಿ ‌ನಿದ್ದೆ ಬರುವುದಿಲ್ಲ. ಸದಾ ದುಗುಡ, ನರಳುವುದು ನಿತ್ಯದ ದಿನ ಚರಿಯಾಗಿದೆ. ಯಾರಾದರೂ ಬಂದರೆ ಅವರೊಂದಿಗೆ ಮಾತನಾಡುವ ಮೂಲಕ ಸಮಯ ಕಳೆಯುವುದು, ಮತ್ತೆ ಯಥಾಸ್ಥಿತಿ ಮೌನಕ್ಕೆ ಜಾರುವುದು,” ಹೇಗಿದ್ದ ಜೀವನ ಹೇಗಾಯಿತಲ್ಲ”? ಎಂದು ಯೋಚಿಸುವದು. ಕಣ್ಣೀರು ಹಾಕುವುದು, ತುಸು ಹೊತ್ತಾದ ಮೇಲೆ ನನಗೆ ನಾನೇ ಸಮಾದಾನ ಹೇಳಿಕೊಂಡ, ಸುದ್ದಿ ಮನೆಗೆ ಪ್ರವೇಶಿಸುವದು. ಎರಡು ಗಂಟೆ ಸುದ್ದಿಯ ಒಡನಾಟದಲ್ಲಿ ಸಮಯ ಸವೆಸಿ ಮತ್ತೆ ಹಾಸಿಗೆ ಹಿಡಿಯುವುದು, ಬೇಸರವಾದಾಗ ಪುಸ್ತಕ, ಮೊಬೈಲ್ ಹಿಡಿಯುವದು ಸಾಮಾನ್ಯವಾಗಿದೆ.
ಹೀಗೆ ಓದುತ್ತಿದ್ದಾಗ ಶರಣ ಲದ್ದೆಯ ಸೋಮಣ್ಣನ  ವಚನದ ಸಾಲು “ರೋಗ ಬಂದರೆ ನೆರಳಬೇಕು, ಮರಣ ಬಂದರೆ ಸಾಯಬೇಕು.” ಬಹುವಾಗಿ ಕಾಡಿತು.
ಆತನ ವಚನದ ಭಾವರ‍್ಥ
ಯಾವುದೇ ಕಾಯಕವಾದರೂ ತಲ್ಲೀನವಾಗಿ ಮಾಡು. ಕಾಯಕದಿಂದ ಬಂದದ್ದನ್ನು ದಾಸೋಹಂ ಭಾವದಿಂದ ಶರಣಸಂಕುಲ (ಗುರು ಲಿಂಗ ಜಂಗಮ)ಕ್ಕೆ ರ‍್ಪಿಸು. ಪ್ರಸಾದವನ್ನು ಬಯಸು. ರ‍್ಪಿಸಿದ ನಂತರ ಉಳಿದದ್ದನ್ನು ಪ್ರಸಾದವಾಗಿ ಸ್ವೀಕರಿಸು. ರೋಗ ಬಂದರೆ ನರಳು, ನೋವಾದರೆ ಅರಚು, ಸಾವು ಬಂದರೆ ಸಾಯಿ, ಇದಕ್ಕೆ ಆ ದೇವರ ಹಂಗೇಕೆ? ಎಂದು ಲದ್ದೆಯ ಸೋಮಣ್ಣ ಪ್ರಶ್ನಿಸುತ್ತಾನೆ.
ಆತ್ಮಗೌರವ, ಕಾಯಕನಿಷ್ಠೆ, ಶರಣಸಂಕುಲಕ್ಕೆ ನಿಷ್ಠೆ, ದೇವರ ಹಂಗಿನಲ್ಲಿ ಕೂಡ ಇರಬಾರದೆಂಬ ಛಲ ಮತ್ತು ಜನನದಂತೆ ಮರಣ ಕೂಡ ಜೈವಿಕ ಪ್ರಕ್ರಿಯೆಯಗಿರುವುದರಿಂದ ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂಬ ಮಹತ್ವದ ನಿಲುವುಗಳನ್ನು ಲದ್ದೆಯ ಸೋಮಣ್ಣ ಈ ವಚನದಲ್ಲಿ ತಾಳಿದ್ದಾನೆ.
ಹೌದಲ್ಲ, ಶರಣ ಸೋಮಣ್ಣ ಸರಿಯಾಗಿಯೇ ಹೇಳಿದ್ದಾನೆ. ನಾನು ನನ್ನ ಕಾಯಕವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿರುವೆ
(ನೂರಕ್ಕೆ ನೂರರಷ್ಟು ಇಲ್ಲದಿರಬಹುದು)
ಇನ್ನು ಜನಪದರ‌ ಬಹು‌ ಜನಪ್ರಿಯ ಪದ
“ಕರುಣ ಬಂದರ ಕಾಯೋ ಮರಣ ಬಂದರ ಒಯ್ಯೋ ಕರುಣಿ ಕಲ್ಯಾಣಿ ಬಸವಣ್ಣ ಕಡೆತನಕ
ಕಾಯೋ ಅಭಿಮಾನ” ಎನ್ನುವ ಸಾಲು ಸದಾ ಕಾಡುತ್ತಿರುತ್ತದೆ.
ರೋಗ ಬಂದಿದೆ ನರಳುತ್ತಿರುವೆ.‌ಗುಣಮುಖನಾಗಲು ವೈದ್ಯರ ಮೊರೆ ಹೋಗುತ್ತಿರುವೆ, ಮೊರೆ ಹೋಗಿರುವೆ.ದೈನೇಸಿಯಗಿ ಜೀವ ಉಳಿಸು,ರೋಗ ಇಲ್ಲವಾಗಿಸು ಎಂದು ಯಾರಲ್ಲೂ ಮೊರೆ ಹೋಗಿಲ್ಲ. ವೈದ್ಯರ ಮೊರೆ ಹೋಗಿರುವೆ.
ನಾನೊಂತರ ಹಾಗೆ ಮಾತನಾಡುತ್ತಿದ್ದರು ಮೌನಿ ,  ಸುತ್ತಲು ಜನರಿದ್ದರು ಒಬ್ಬಂಟಿ , ದುಃಖದಲ್ಲಿ ನಗುವವನು ನಾನು ಅತಿ ಸಂತೋಷದಲ್ಲಿಯೂ ಮುಗುಳ್ಳಕ್ಕು ಸುಮ್ಮನಾಗುವವನು ,  ಆಡಂಬರ, ಆಚರಣೆಗಳನ್ನು ಇಷ್ಟಪಡದವನು ,
ಮಾಡದ ತಪ್ಪಿಗೆ ನೋವಾದದ್ದೇಕೆ ಎಂದು ಯೋಚಿಸುವವ,
“ನೂರಾರು ಪುಟಗಳಷ್ಟು ವಿಷಯ ಹೊಂದಿದ್ದರು ಯಾರು ತೆರೆದು ನೋಡದ ಗ್ರಂಥವು ನಾನು”
ವಿಶ್ವ ಗುರು ಬಸವಣ್ಣನವರ ವಚನದಲ್ಲಿ
“ಎನ್ನ ವಾಮ-ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನವು ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ? ಕೂಡಲಸಂಗಮದೇವ”
ಎಂದಿರುವರು.
ನನ್ನ ಸುಖ-ದುಃಖ, ಆರೋಗ್ಯ ಹಾಗೂ ಯೋಗಕ್ಷೇಮ ಎಲ್ಲವೂ ನಿಮ್ಮದೇ. ನನಗೆ ಆಗುವ ನಷ್ಟ ಅಥವಾ ಲಾಭ (ಹಾನಿ-ವೃದ್ಧಿ) ನಿಮ್ಮ ಇಚ್ಛೆಯಂತೆ, ಲೋಕದಲ್ಲಿ ನನಗೆ ಸಿಕ್ಕಿರುವ, ಸಿಗುತ್ತಿರುವ ಗೌರವ ಅಥವಾ ಅಪಮಾನಗಳು ಕೂಡ ನಿಮ್ಮವೇ ಎಂದು “ಕರುಣ ಬಂದರ ಕಾಯೋ ಎಂದು ಬಸವಣ್ಣನವರ ಮೇಲೆ ಬಾರ ಹಾಕಿರುವೆ.
ನಾನಿನ್ನು ಆಪರೇಷನ್ ಥೇಟರ್ ಗೆ ಹೋಗಿ ಬರುವೆ.
ಮಾಲತೇಶ ಅಂಗೂರ.
malatesh angur
haveri

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ ಯಶೋಧಾ

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ...

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾಸೇವೆಯ ಉದ್ದೇಶ: ಬಸವರಾಜ ಶಿವಣ್ಣನವರ

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾಸೇವೆಯ ಉದ್ದೇಶ: ಬಸವರಾಜ ಶಿವಣ್ಣನವರ ಬ್ಯಾಡಗಿ :...

ಹಾವೇರಿ:ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

  ಹಾವೇರಿ:ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಹಾವೇರಿ: ಪರಿಶಿಷ್ಟ ವರ್ಗದ ಜನಾಂಗದ...

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಪ್ರಭು ಬಿಷ್ಟನಗೌಡ್ರ ನೇಮಕ

    ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಪ್ರಭು ಬಿಷ್ಟನಗೌಡ್ರ ನೇಮಕ ಹಾವೇರಿ: ಹಾವೇರಿ...