ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್  ಪರಿಷತ್ ಚುನಾವಣೆ ಕಣದಿಂದ ನಾಮ ಪತ್ತ ವಾಪಸ್ ಪಡೆದ ಡಾ.ಕುಬೇರಪ್ಪ!

Date:

ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ, ಸಚಿವ ಜಾರಕಿಹೊಳಿ ಸಂಧಾನ ಸಕ್ಸಸ್ 
ಪರಿಷತ್ ಚುನಾವಣೆ ಕಣದಿಂದ ನಾಮ ಪತ್ತ ವಾಪಸ್ ಪಡೆದ ಡಾ.ಕುಬೇರಪ್ಪ!
ಹಾವೇರಿ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಪಶ್ಚಿಮ ಪದವಿಧರರ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಸಿದ್ದ ಡಾ.ಆರ್.ಎಮ್.ಕುಬೇರಪ್ಪ ಅವರು ಶುಕ್ರವಾರ ತಮ್ಮ ನಾಮಪತ್ರ ವಾಪಸ್ ಪಡೆಯುವ ಮೂಲಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಕೆಪಿಸಿಸಿ ಶಿಕ್ಷಕರ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷರು ಹಾಗೂ ‌
ಅಹಿಂದ ಮುಖಂಡರಾಗಿರುವ ಡಾ. ಕುಬೇರಪ್ಪ  ಕಾಂಗ್ರೆಸ್ ‌ಪಕ್ಷದಲ್ಲಿ ತಮಗೆ ಅನ್ಯಾಯವಾಗಿದೆ ಎಂದು
ಆಕ್ರೋಶಗೊಂಡು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. 
ಬೆಂಗಳೂರಿನಲ್ಲಿ ಗುರುವಾರ
ಹಿರಿಯ ನಾಯಕರ ಮನವೊಲಿಕೆ ಬಳಿಕ ವಿಧಾನ ಪರಿಷತ್‌ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಡಾ.ಆ‌ರ್.ಎಂ.ಕುಬೇರಪ್ಪ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
 ಇವರ ಸ್ಪರ್ಧೆಯಿಂದ ಪಕ್ಷದ ಅಧಿಕೃತ ಅಭ್ಯರ್ಥಿಗೆ ಆಗುವ ಹಾನಿ ಬಗ್ಗೆ ಹಾವೇರಿ ಜಿಲ್ಲೆಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ತಂದರು. ಆಗ
ಕೆಪಿಸಿಸಿ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ ಹಾಗೂ ಲೋಕೋಪಯೋಗಿ 
ಸಚಿವ ಸತೀಶ ಜಾರಕಿಹೊಳಿ ಅವರು ಡಾ.ಕುಬೇರಪ್ಪ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಮುನಿಸು ತಣಿಸುವ ಪ್ರಯತ್ನ ಮಾಡಿದರು. “ಹಿರಿಯರಾದ ತಮಗೆ ಆಗಿರುವ ಅನ್ಯಾಯ ಹಾಗೂ ನೋವಿನ ಬಗ್ಗೆ ಅರಿವಿದೆ. ಪಕ್ಷದ ಹಿತದೃಷ್ಟಿಯಿಂದ ತಾವು ಕಣದಿಂದ ಹಿಂದೆ ಸರಿಯಬೇಕು, ನಿಮ್ಮ ಸೇವೆಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು, ನಿಗಮ ಮಂಡಳಿ ಅಥವಾ ವಿಧಾನ ಪರಿಷತ್ತಿನಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ನಾವು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ,” ಎಂದು ಹರಿಪ್ರಸಾದ ಹಾಗೂ ಜಾರಕಿಹೊಳಿ ಭರವಸೆ ನೀಡಿದರು ಎನ್ನಲಾಗಿದೆ.
ಸಂಧಾನ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ‌ಮತ್ತಿತರರು ಇದ್ದರು.
ವರಿಷ್ಠರ ಈ ಭರವಸೆ ಮೇರೆಗೆ ಕುಬೇರಪ್ಪ ತಮ್ಮ ನಾಮಪತ್ರ ಹಿಂಪಡೆಯಲು ಒಪ್ಪಿಕೊಂಡಿದ್ದು, ಕುಬೇರಪ್ಪ ಅವರ ಬೆಂಬಲಿಗರು ಅವರ ನಾಮಪತ್ರವನ್ನು ಧಾರವಾಡದ ಚುನಾವಣಾ ಅಧಿಕಾರಿಗಳ ಕಚೇಯಲ್ಲಿ‌ ವಾಪಾಸ ಪಡೆದರೆಂದು‌ಡಾ.ಕುಬೇರಪ್ಪ ತಿಳಿಸಿದ್ದಾರೆ.
ಪಕ್ಷದ ಹಿರಿಯರಿಗೆ ನನ್ನ ನೋವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ನನಗೆ ಅನ್ಯಾಯ ಆಗದಂತೆ ನೋಡಿ ಕೊಳ್ಳುವ ಭರವಸೆ ನೀಡಿದ್ದಾರೆ. ಅವರ ಮಾತಿಗೆ ಮನ್ನಣೆ ನೀಡಿ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದು, ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಗೆಲುವಿಗೆ ಶ್ರಮಿಸಲಿದ್ದೇನೆ,” ಎಂದು ಡಾ.ಆ‌ರ್.ಎಂ.ಕುಬೇರಪ್ಪ ಅವರು ತಿಳಿಸಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೋಹನ ಲಿಂಬಿಕಾಯಿ ಹಾಗೂ ಬಿಜೆಪಿಯ ಹಾಲಿ ಸದಸ್ಯ ಪ್ರೊ. ಎಸ್.ವಿ.ಸಂಕನೂರ ನಡುವೆ ಪೈಪೋಟಿ ನಡೆಯಲಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಶವ ಸಂಸ್ಕಾರ ಸೇವೆಯಲ್ಲಿ ಸಾರ್ಥಕತೆ ಕಂಡ ಷಣ್ಮುಖಯ್ಯ

ಶವ ಸಂಸ್ಕಾರ ಸೇವೆಯಲ್ಲಿ ಸಾರ್ಥಕತೆ ಕಂಡ ಷಣ್ಮುಖಯ್ಯ  ಹಾವೇರಿ : ಹಾವೇರಿ ನಗರ...

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಅರ್ಜಿ ಸಲ್ಲಿಕೆ

ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಡಾ. ಕುಬೇರಪ್ಪ ಅ-೦೬ ರಂದು ಡಾ. ಕುಬೇರಪ್ಪ...

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ “ಹುಲಿ ಬೀರ”

ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ...

ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ 

ಕ. ಪ. ಪದವೀಧರರ ಚುನಾವಣೆಗೆ ಶಿವಕುಮಾರ ನಾಮ ಪತ್ರ  ಹಾವೇರಿ: ಜಿಲ್ಲೆಯ...