’ಅಶ್ಲೀಲ ಹಾಡುಗಳಿಂದ ನಮ್ಮ ಸಂಸ್ಕೃತಿ ಹಾಳು’ : ’ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿಗೆ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ

Date:

ಹಾವೇರಿ: ಚಲನಚಿತ್ರಗಳ ಹಾಡು ಬಿಡುಗಡೆ ಆಗಬೇಕಾದರೆ ಅದು ಸೆನ್ಸಾರ್ ಆಗಬೇಕು. ಸೆನ್ಸಾರ್ ಕಮಿಟಿ ಒಪ್ಪಿದೆ ಮೇಲೆ ಅದು ಅಶ್ಲೀಲ ಇಲ್ಲ ಎಂದು ಅರ್ಥ. ”ನೋಡುಗರೂ ಕೂಡಾ ಹಾಗೇ ಆಗಿದ್ದಾರೆ. ಬೇಡಿಕೆ ಮೇಲೆ ಉತ್ಪಾದನೆ ಅನ್ನೋ ಹಾಗೆ… ರಾಜ್‌ಕುಮಾರ್, ವಿಷ್ಣುವರ್ಧನ್ ಅವರಂತಹ ಮೇರುನಟರ ಹಿಂದಿನ ಸಿನಿಮಾ ಹಾಡುಗಳು ಇಂದಿಗೂ ಬದುಕಿವೆ. ಈಗ ಎಷ್ಟೇ ಅಶ್ಲೀಲ ಬಂದ್ರೂ ಆ ಹಾಡುಗಳಿಗೆ ಒಂದು ವರ್ಷವೂ ಆಯುಷ್ಯ ಇಲ್ಲ. ಸ್ವಲ್ಪ ಸಮಯಕ್ಕೆ ಪಾಪ್ಯುಲರ್ ಆಗಬಹುದು. ಆದರೆ ಅದ್ಯಾವುದಕ್ಕೂ ಲಾಂಗ್ ಲೈಫ್ ಇಲ್ಲ ಎಂದು ಹಿರಿಯ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಹಾಡುಗಳು ಉತ್ತಮ ಸಂಸ್ಕೃತಿ ಹೊಂದಿದ್ದವು. ಆದರೆ ಈಗ ಹಾಗಿಲ್ಲ. ಅಶ್ಲೀಲತೆಯುಳ್ಳ ಹಾಡುಗಳನ್ನು ಬರೆಯೋದ್ರಿಂದ ಸಂಸ್ಕೃತಿಯನ್ನು ಹಾಳು ಮಾಡಿದಂತಾಗುತ್ತದೆ. ಯುವಕರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಬಾರದು. ಉತ್ತಮ ಸಾಹಿತ್ಯವಿದ್ರೆ ಜನರು ಖಂಡಿತಾ ಒಪ್ಪುತ್ತಾರೆ. ಅವುಗಳಿಗೆ ಲಾಂಗ್‌ಲೈಫ್ ಕೂಡಾ ಇದೆ ಎಂದು ತಿಳಿಸಿದರು.
”ಕನ್ನಡ ಚಿತ್ರರಂಗದ ಮೇಲೆ ಮಧ್ಯಪ್ರಾಚ್ಯ ಸಂಘರ್ಷ ಯಾವುದೇ ಪರಿಣಾಮ ಬೀರಲ್ಲ. ಈಗಾಗಲೇ ಚಿತ್ರರಂಗ ಎಫೆಕ್ಟ್‌ನಲ್ಲಿದೆ”, ”ಪ್ರಸ್ತುತ ಬಹುತೇಕ ಸಿನಿಮಾಗಳು ಓಡುತ್ತಿಲ್ಲ. ವರ್ಷಕ್ಕೆ ಗರಿಷ್ಠ ಶೇ.೫ರಷ್ಟು ಸಕ್ಸಸ್ ಬಿಟ್ರೆ, ಶೇ.೯೫ರಷ್ಟು ಫೇಲ್ಯೂರ್. ಚುನಾವಣೆ ಬಳಿಕ ೧೦೦ ಕಥೆ ಕೇಳಿದೆ. ತೃಪ್ತಿಕರ ಕಥೆ ತಂದುಕೊಡುವ ಶಕ್ತಿ ಬಹಳ ಕಡಿಮೆ ಇದೆ. ಹಾಗಾಗಿ, ಸಿನಿಮಾ ಇಂಡಸ್ಟ್ರಿಯಲ್ಲಿ ಕಮಿಟ್ಮೆಂಟ್ಸ್ ಬಹಳ ಕಡಿಮೆಯಾಗಿದೆ. ಒಬ್ಬ ನಿರ್ಮಾಪಕ ಸಿಕ್ಕಿದ್ರು ಅಂದ್ರೆ ಅವರನ್ನು ಯಾವ ರೀತಿ ಸುಲಿಗೆ ಮಾಡಬೇಕು ಅನ್ನೋ ಪಿತೂರಿ ಬಹಳ ನಡೆಯುತ್ತಿದೆ. ಇನ್ನು, ನಾವು ಆ ಕಾಲದಲ್ಲಿ ಮಾಡುತ್ತಿದ್ದ ಸಿನಿಮಾಗಳು ಮತ್ತು ಸದ್ಯದ ಪರಿಸ್ಥಿತಿ ವಿಭಿನ್ನ. ಹಾಗಾಗಿ, ಕನ್ನಡದಲ್ಲಿ ಸಕ್ಸಸ್ ರೇಟ್ ಕಡಿಮೆ ಇದೆ” ಎಂದು ಆರೋಪಿಸಿದರು.
”ಉತ್ತಮ ಚಿತ್ರಗಳು ಬಂದ್ರೆ ಜನರು ಖಂಡಿತವಾಗಿಯೂ ಸಿನಿಮಾ ನೋಡ್ತಾರೆ. ನಾವು ಜನರನ್ನು ದೂಷಿಸೋದು ತಪ್ಪು. ಥಿಯೇಟರ್ಸ್‌ಗೆ ಪ್ರೇಕ್ಷಕರು ಬರೋದಿಲ್ಲ ಅನ್ನೋದಕ್ಕಿಂತ, ಉತ್ತಮ ಚಿತ್ರಗಳನ್ನು ಮಾಡುವ ಪ್ರಯತ್ನ ಆಗಬೇಕು. ಸು ಫ್ರಮ್ ಸೋ, ಕಾಂತಾರ ಬಿಟ್ರೆ ಬೇರೆ ಯಾವುದೇ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಇಲ್ಲಿ ಕಂಬೈನ್ಡ್ ಎಫರ್ಟ್ಸ್ ಬಹಳ ಕಡಿಮೆ ಇದೆ. ಬರಹಗಾರರು ಕಡಿಮೆ ಇದ್ದಾರೆ. ಇನ್ವಾಲ್ವ್‌ಮೆಂಟ್ಸ್, ಕಮಿಟ್?ಮೆಂಟ್ಸ್? ಇಲ್ಲ. ಹಾಗಾಗಿ, ಮಧ್ಯಪ್ರಾಚ್ಯ ಸಂಘರ್ಷಕ್ಕೂ ಸಿನಿಮಾ ಇಂಡಸ್ಟ್ರಿಗೂ ಸಂಬಂಧ ಇಲ್ಲ” ಎಂದು ಹೇಳಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

“ಗಣಿತಯಾವಗಲೂ ಸತ್ಯವನ್ನೇ ಹೇಳುತ್ತದೆ” ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೋರಗಲ್ ವಿರುಪಾಕ್ಷಪ್ಪ

"ಗಣಿತಯಾವಗಲೂ ಸತ್ಯವನ್ನೇ ಹೇಳುತ್ತದೆ" ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ...

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಅವರಿಗೆ ಅಭಿನಂದನಾ ಪತ್ರ

  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಅವರಿಗೆ ಅಭಿನಂದನಾ ಪತ್ರ ಹಾವೇರಿ: ಅಟಲ್‌ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿಯಲ್ಲಿ...

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕರಾಗಿ ಸಂಜಯಗಾಂಧಿ ನೇಮಕ

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕರಾಗಿ ಸಂಜಯಗಾಂಧಿ ನೇಮಕ ಹಾವೇರಿ: ಹಾವೇರಿ ಜಿಲ್ಲೆಯ...

ಎಸ್.ಆರ್. ನಂದಿಹಳ್ಳಿಗೆ ’ಮೂಡಣ’ ದತ್ತಿನಿಧಿ ವಾರ್ಷಿಕ ಪ್ರಶಸ್ತಿ

ಎಸ್.ಆರ್. ನಂದಿಹಳ್ಳಿಗೆ ’ಮೂಡಣ’ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಹಾವೇರಿ : ಕರ್ನಾಟಕ ಕಾರ್ಯನಿರತ...