“ಗಣಿತಯಾವಗಲೂ ಸತ್ಯವನ್ನೇ ಹೇಳುತ್ತದೆ” ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೋರಗಲ್ ವಿರುಪಾಕ್ಷಪ್ಪ

Date:

ಹಾವೇರಿ: ’ಗಣಿತವು ಎಲ್ಲ ವಿಜ್ಞಾನಗಳ ತಾಯಿ’. ಅದು ಎಂದೂ ಸುಳ್ಳು ಹೇಳುವುದಿಲ್ಲ, ಸತ್ಯವನ್ನೇ ಪ್ರತಿಪಾದಿಸುತ್ತದೆ.ನಾನು ಗಣಿತ ಮಾಸ್ತರ, ನನ್ನ ಹೆಂಡತಿಯ ಹೆಸರು ರುದ್ರಮ್ಮ.ಅದರೆ ಗಣಿತ ಪ್ರೀತಿಯಿಂದ ಜಗತ್ತಿನ ಮೊದಲ ಗಣಿತಜ್ಞೆ ಲೀಲಾವತಿಯ ಹೆಸರನ್ನು ಲಗ್ನ ಪತ್ರದಲ್ಲಿ ಹಾಕಿಸಿ ಮದುವೆಯಾದೆ.ವಿಜ್ಞಾನ ತರಗತಿಯಿಂದ ನಗೆ ಇಂಗ್ಲೀಷ ಬರೊಲ್ಲ ಎಂದು ಹೊರಗೆ ಹಾಕಿದಾಗ ಕನ್ನಡ ಕಲಿಯಲಾರಂಭಿಸಿ ಸಾಹಿತಿಯಾದೆ ಎಂದು ನಿವೃತ್ತ ಗಣಿತ ಪ್ರೊ.ಕೋರಗಲ್ ವಿರುಪಾಕ್ಷಪ್ಪ ಅವರು ಹೇಳಿದರು.
ನಗರದ ಜಿ.ಎಚ್.ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದಿಂದ ’ಸಾಧಕರೊಂದಿಗೆ ಸಂವಾದ’ ದಲ್ಲಿ ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ಮೇಲಿನಂತೆ ಉತ್ತರಿಸಿದರು. ಸುಮಾರು ಎರಡು ಗಂಟೆಗಳ ಕಾಲ ನೆನಪಿನ ಬುತ್ತಿ ಬಿಚ್ಚಿಟ್ಟರು.ನಂತರನಡೆದ ಸಂವಾದರೋಚಕ, ಹಾಸ್ಯ, ಗಂಭೀರ ಹಲವು ವಲಯಗಳಲ್ಲಿ ತುಂಬಿದ ಸಭೆಯನ್ನು ಮಂತ್ರ ಮುಗ್ಧರನ್ನಾಗಿಸಿದರು.
ಹದಿನೈದು ವರ್ಷದವನಿದ್ದಾಗಕನ್ನಡ ಶಾಲೆಗೆ ಹೊರಟೆ. ಅಲ್ಲಿಯತನಕ ದನಕಾಯುವುದೇ ನನ್ನ ಕಾಯಕವಾಗಿತ್ತು. ಉಕ್ಕಿನ ಮನುಷ್ಯನೆಂದೇ ಪ್ರಸಿದ್ಧರಾರ ಕೆ.ಎಚ್.ಪಾಟೀಲರು ನನಗೆ ಬದುಕನ್ನು ಕೊಟ್ಟರು. ಅವರೇ ಸಂದರ್ಶನ ನಡೆಸಿ ಗಣಿತ ಪ್ರಾಧ್ಯಾಪಕನ್ನನ್ನಾಗಿಸಿದರು. ಅರವತ್ತು ವರ್ಷಗಳ ಹಿಂದೆ ಇದೇ ದಿನ (ಅಗಷ್ಟ್ ೧) ನಾನು ಜಿ.ಎಚ್.ಕಾಲೇಜಿಗೆ ಹಾಜರ್ ಆಗಿದ್ದೆ. ಅಂತಹ ಇನ್ನೊಂದು ಸುದಿನ ಸಂವಾದ ನಡೆಯುತ್ತಿರುವುದು ಆತ್ಮತೃಪ್ತಿತಂದಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದಜಂಟಿ ನಿರ್ದೇಶಕರಾದಕೆ.ಎಚ್.ಚನ್ನೂರ ಪ್ರಾಸ್ತಾವಿಕ ನುಡಿಗಳನ್ನಾಡಿ ವಿಭಾಗ ಮಟ್ಟದಲ್ಲಿ ಬೇರೆ ಬೇರೆಕ್ಷೇತ್ರ ಸಾಧಕರನ್ನು ಗುರುತಿಸಿ ಅವರೊಂದಿಗೆ ಸಂವಾದ ನಡೆಸುವುದು, ಅವರ ಅನುಭವಗಳ ಮೂಲಕ ಹೊಸ ಪೀಳಿಗೆಗೆ ಪ್ರೋತ್ಸಾಹದದಾರಿತೋರಿಸುವುದೇ ಸಂವಾದದ ಉದ್ದೇಶಎಂದರು.
ಸಂವಾದದಲ್ಲಿ ಬಸವ ಬಳಗದ ಅಧ್ಯಕ್ಷರಾದ ವಿರುಪಾಕ್ಷಪ್ಪಯಳಗೇರಿ, ಶಂಭನಗೌಡ ನೀರಲಗಿ, ಶ್ರೀದೇವಿ ದೊಡ್ಡಮನಿ, ಸಿದ್ದೇಶ್ವರ ಹುಣಸಿಕ್ಕಟ್ಟೀಮಠ, ಡಾ.ಆತ್ಮಾನಂದ ಹೊಳೆಯಣ್ಣವರ, ಸ್ನೇಹಾ ಹಿರೇಮಠ, ಎಸ್.ಸಿ. ಹೊಸಮನಿ, ಸೌಮ್ಯಾ ಶಿಶುನಾಳ, ರಾಜೇಂದ್ರರಿತ್ತಿ, ರವೀಂದ್ರ ಶೆಟ್ಟರ, ಭೀಮ ಹೊಳೆಪ್ಪನವರ, ಮಂಜುನಾಥ ಸಣ್ಣಿಂಗಮ್ಮನವರ, ಚಂದ್ರಶೇಖರ ಮಾಳಗಿ, ಜುಬೇದಾ ನಾಯಕ್, ಶಶಿಕಲಾ ಅಕ್ಕಿ ಮುಂತಾದ ಮೂವತ್ತಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಆರಂಭದಲ್ಲಿ ಪ್ರೊ.ಕೋರಗಲ್ ವಿರುಪಾಕ್ಷಪ್ಪ ಅವರನ್ನು ಇಲಾಖೆ ಪರವಾಗಿ ಸನ್ಮಾನಿಸಲಾಯಿತು. ಪ್ರಾ.ಎಂ.ಎಂ. ಹೊಳ್ಳಿಯವರ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂಜೀವನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಹಿರೇಮಠ, ಸಾಹಿತಿ ಡಾ.ಸತೀಶ ಕುಲಕರ್ಣಿ, ಕೋರಗಲ್‌ರ ಪುತ್ರ ರವಿಶಂಕರ್ ಕೋರಗಲ್, ಪುಷ್ಪಾ ಕೋರಗಲ್ ಹಾಗೂ ಪುತ್ರಿ ನಂದಿನಿ ವ್ಹಿ.ಕೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಅನಿತ ಹರನಗಿರಿ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ ಯಶೋಧಾ

ಹಾವೇರಿಜಿಲ್ಲೆಯಲ್ಲಿ  ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ...

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾಸೇವೆಯ ಉದ್ದೇಶ: ಬಸವರಾಜ ಶಿವಣ್ಣನವರ

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾಸೇವೆಯ ಉದ್ದೇಶ: ಬಸವರಾಜ ಶಿವಣ್ಣನವರ ಬ್ಯಾಡಗಿ :...

ಹಾವೇರಿ:ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

  ಹಾವೇರಿ:ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಹಾವೇರಿ: ಪರಿಶಿಷ್ಟ ವರ್ಗದ ಜನಾಂಗದ...

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಪ್ರಭು ಬಿಷ್ಟನಗೌಡ್ರ ನೇಮಕ

    ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಪ್ರಭು ಬಿಷ್ಟನಗೌಡ್ರ ನೇಮಕ ಹಾವೇರಿ: ಹಾವೇರಿ...