ನ.೨೭ಕ್ಕೆ ಹಾವೇರಿಗೆ ಸಿಎಂ ಡಿ.ಕೆ.ಶಿವಕುಮಾರ-ಕನಕದಾಸರ ಕಂಚಿನ ಮೂರ್ತಿಯ ಅನಾವರಣ-ಶಿವಣ್ಣನವರ

Date:

ಹಾವೇರಿ: ಸಂತ ಕನಕದಾಸರ ೫೩೯ನೇ ಜಯಂತ್ಯುತ್ಸವದ ಅಂಗವಾಗಿ ನ.೨೬ ಮತ್ತು ೨೭ರಂದು ಕಾಗಿನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನ.೨೭ರಂದು ಹಾವೇರಿಯಲ್ಲಿ ಕನಕದಾಸರ ಎಂಟೂವರೆ ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಹಾವೇರಿ ತಾಲೂಕಿಗೆ ಕನಕದಾಸರ ಜಯಂತ್ಯುತ್ಸವದ ಜವಾಬ್ದಾರಿ ದೊರೆತಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಹಿರೇಕೆರೂರು, ರಾಣೇಬೆನ್ನೂರು ಸೇರಿದಂತೆ ವಿವಿಧ ತಾಲೂಕುಗಳ ಸಮಾಜದ ಮುಖಂಡರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಬಾರಿ ಹಾವೇರಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಪ್ರಚಾರ ಕೈಗೊಂಡು ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.
ನ.೨೬ರಂದು ಸುಮಾರು ಆರು ಲಕ್ಷ ರೊಟ್ಟಿಗಳೊಂದಿಗೆ ಕಾಗಿನೆಲೆಯಲ್ಲಿ ರೊಟ್ಟಿ ಜಾತ್ರೆ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳ ಜನರು ಉತ್ಸಾಹದಿಂದ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನ.೨೭ರಂದು ನಡೆಯುವ ಕನಕದಾಸರ ಜಯಂತ್ಯುತ್ಸವಕ್ಕೆ ನಾಡಿನ ದೊರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಆಗಮಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗಮಿಸುವುದಾಗಿ ಮೊದಲು ತಿಳಿಸಿದ್ದರು, ಆದರೆ ಕಾರಣಾಂತರಗಳಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿರುವುದಾಗಿ ಹೇಳಿದರು.
ನ.೨೭ರಂದು ಬೆಳಗ್ಗೆ ೧೦ ಗಂಟೆಗೆ ಸಿಎಂ ಡಿ.ಕೆ. ಶಿವಕುಮಾರ ಕೊಪ್ಪಳದಿಂದ ಹೊರಟು ೧೧ ಗಂಟೆಗೆ ಹಾವೇರಿಯ ಕೆಎಲ್‌ಇ ಮೈದಾನಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹಾವೇರಿ ನಗರದ ಕಾಗಿನೆಲೆ ಕ್ರಾಸ್‌ನಲ್ಲಿ ಸುಮಾರು ೧೦ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಎಂಟೂವರೆ ಅಡಿ ಎತ್ತರದ ಕನಕದಾಸರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ. ಬಳಿಕ ಕಾಗಿನೆಲೆಯಲ್ಲಿ ಜರುಗಲಿರುವ ಕನಕದಾಸರ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಈ ಎಲ್ಲಾ ಧಾರ್ಮಿಕ ಸಮಾರಂಭದ ಕಾರ್ಯಕ್ರಮಗಳು ಜರುಗಲಿವೆ. ನಿರಂಜನಾನಂದಪುರಿ ಸ್ವಾಮೀಜಿ ಅವರು ಹಾವೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ರೇವಣಸಿದ್ದೇಶ್ವರ ಜೋಳಿಗೆ ಹಿಡಿದು ದುಶ್ಚಟಗಳ ಭಿಕ್ಷೆ ಪಡೆದು ಸದ್ಗುಣಗಳ ದೀಕ್ಷೆ ನೀಡುವ ಅಭಿಯಾನ ನಡೆಸುತ್ತಿದ್ದಾರೆ. ಇದರ ಸಮಾರೋಪ ಸಮಾರಂಭವೂ ಕನಕದಾಸರ ಜಯಂತ್ಯುತ್ಸವದೊಂದಿಗೆ ನಡೆಯಲಿದೆ ಎಂದರು.
ಕಾಗಿನೆಲೆ ಹಾಗೂ ಬಾಡದ ಅಭಿವೃದ್ಧಿಗೆ ಸರಕಾರ ವಿಶೇಷ ಆದ್ಯತೆ ನೀಡಿದ್ದು, ೨೦೨೬-೨೭ನೇ ಸಾಲಿನ ಬಜೆಟ್‌ನಲ್ಲಿ ೩೪ ಕೋಟಿ ರೂ.ಅನುದಾನ ಒದಗಿಸಲಾಗಿದೆ. ಈ ಅನುದಾನದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯಲಿದೆ. ಸಮಾಜದ ಎಲ್ಲ ಮುಖಂಡರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಯಂತ್ಯುತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಅನ್ವೇರಿ, ಉಪಾಧ್ಯಕ್ಷ ಅಶೋಕ ಬಣಕಾರ, ಮುಖಂಡ ಗಿರೀಶ ಇಂಡಿಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ ಪ್ರತಿಷ್ಠಾಪನೆ

ನ. ೨೭ರಂದು ಹಾವೇರಿಯಲ್ಲಿ ಕನಕದಾಸರ ೮.೫ ಅಡಿ ಎತ್ತರದ ಕಂಚಿನ ಮೂರ್ತಿ...

ಆಶ್ರಯ ಮನೆಗಳ ಹಂಚಿಕೆ ಕನಸು ನನಸಾಗಿದೆ: ಸಚಿವ ರುದ್ರಪ್ಪ ಲಮಾಣಿ

ಆಶ್ರಯ ಮನೆಗಳ ಹಂಚಿಕೆ ಕನಸು ನನಸಾಗಿದೆ: ಸಚಿವ ರುದ್ರಪ್ಪ ಲಮಾಣಿ ಹಾವೇರಿ...

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಜಯ!

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಜಯ! ಮಂಗಳವಾರ ಬೆಳಗಿನಜಾವ ೩-೨೫ರವರೆಗೆ ಸಭೆ ಟನ್‌ಗೆ ₹3,225...

ಏಡ್ಸ್ ನಿಯಂತ್ರಣದಲ್ಲಿ ಹಾವೇರಿ ಜಿಲ್ಲೆಗೆ ರಾಷ್ಟ್ರಮಟ್ಟದ ಗೌರವ

ಏಡ್ಸ್ ನಿಯಂತ್ರಣದಲ್ಲಿ ಹಾವೇರಿ ಜಿಲ್ಲೆಗೆ ರಾಷ್ಟ್ರಮಟ್ಟದ ಗೌರವ ವಿಶ್ವ ಏಡ್ಸ್ ದಿನಾಚರಣೆ...