ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆಯಿಂದ ಮಾತನಾಡಲಿ:  ವೀರಣ್ಣ ಪಾಟೀಲ

Date:

ಹಾವೇರಿ ನಾಡಿನ: ಹಿರಿಯ, ಅನುಭವಿ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ದ ಮಾತನಾಡುವಾಗ ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ವಹಿಸಬೇಕು. ದೊಡ್ಡವರನ್ನು ಟೀಕಿಸಿದ ಮಾತ್ರಕ್ಕೆ ತಾನು ದೊಡ್ಡವನಾಗುತ್ತೇನೆ ಎಂಬ ಭ್ರಮೆ ಬಿಡಬೇಕು. ಇಲ್ಲದಿದ್ದಲ್ಲಿ ಇದರ ಪರಿಣಾಮ ಎದುರಿ ಸಬೇಕಾಗುತ್ತದೆ ಎಂದು  ಕೆಪಿಸಿಸಿ ಸಂಯೋಜಕ  ವೀರಣ್ಣ ಪಾಟೀಲ ತಿಳಿಸಿದ್ದಾರೆ.
ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ದ ಹಗರುಮಾತುಗನ್ನಾಡಿರುವ ಬಗ್ಗೆ ಹೇಳಿಕೆ ನೀಡಿದ್ದು, ಸತತ ಮೂರು ಚುನಾವಣೆಗಳಲ್ಲಿ ಸೋಲುವ ಮೂಲಕ ಹ್ಯಾಟ್ರಿಕ್ ಸೋಲಿನ ಸರದಾರರೆಂದೇ ಕುಖ್ಯಾತರಾಗಿರುವ ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿನ್ನೂ ಅಂಬೆಗಾಲಿಡುತ್ತಿದ್ದಾರೆ. ಡಿಕೆಶಿ ಅವರ ಬಗ್ಗೆ ಮಾತನಾಡಲು ರಾಜಕೀಯ ಅನುಭವ ಇರಬೇಕು. ನನಗೂ ಮಾತನಾಡಲು ಬರುತ್ತದೆ ಎಂದು ಹಿರಿಯರ ಬಗ್ಗೆ ಎಲ್ಲಿ ಬೇಕೋ – ಅಲ್ಲಿ, ಹೇಗೆ ಬೇಕೋ ಹಾಗೆ ಬಾಯಿ ಚಪಲಕ್ಕೆ ಮಾತನಾಡುವುದಲ್ಲ. ಅದಕ್ಕೂ ಯೋಗ್ಯತೆ ಇರ ಬೇಕು.
ಕಳೆದ ೪೫ ವರ್ಷದಿಂದ ರಾಜ್ಯದಲ್ಲಿರುವ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಮಾಡುವ ಮುನ್ನ ನೀವು ಹಾಲಿಯಾಗಿ. ೧೯೮೮ರಿಂದ ಡಿ.ಕೆ. ಶಿವಕುಮಾರ್ ಅವರು ರಾಜಕೀಯದಲ್ಲಿದ್ದಾರೆ. ಜಿಪಂ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿನ ರಾಜಕೀಯ ಅನುಭವಕ್ಕೆ ಗೌರವ ಕೊಡಬೇಕು. ನಿಖಿಲ್   ಕುಮಾರಸ್ವಾಮಿಯವರಿಗೆ ರಾಜಕೀಯದಲ್ಲಿ ಅನುಭವ ಕಡಿಮೆ. ಕುಮಾರಸ್ವಾಮಿ ಹೆಸರೇ ಅವರಿಗೆ ಬಲ. ಮಾಜಿ ಮುಖ್ಯಮಂತ್ರಿ ಮಗ ಹಾಗೂ ಮಾಜಿ ಪ್ರಧಾನಿಯ ಮೊಮ್ಮಗ ಎಂಬುದನ್ನು ಬಿಟ್ಟರೆ ನಿಮ್ಮ ಸಾಧನೆ ಏನು? ಎಂಬುದನ್ನು ತಿಳಿಸಿ. ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ನಿಮ್ಮ ಸಾಮರ್ಥ್ಯ ಸಾಬೀತು ಪಡಿಸಿ. ಸಾಮಾನ್ಯ ಕಾರ್ಯಕರ್ತರನ್ನು ಸಹ ಎಂಎಲ್‌ಎ ಮಾಡುವ ಶಕ್ತಿ, ಸಾಮರ್ಥ್ಯ ಡಿಕೆಶಿ ಅವರಿಗಿದೆ. ಅವರ ಸದೃಢ ನಾಯಕತ್ವ, ಕಾರ್ಯ ವೈಖರಿಯ ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ.
ಗೃಹಲಕ್ಷ್ಮಿ ಯೋಜನೆ ಲಕ್ಷಾಂತರ ಹೆಣ್ಣು ಮಕ್ಕಳ ಬದುಕಿಗೆ ಆಸರೆಯಾಗಿದೆ. ಹಣ ಪಾವತಿಯಲ್ಲಿ ವಿಳಂಬವಾಗುತ್ತಿರಬಹುದೇ ಹೊರತು ಕೊಟ್ಟ ಮಾತಿನಂತೆ ಹಣ ನೀಡುವುದು ನಿಂತಿಲ್ಲ. ಕುಮಾರಸ್ವಾಮಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಕೇಂದ್ರ ಸಚಿವರಾದ ನಂತರ ಉಕ್ಕು ಮತ್ತು ಕಬ್ಬಿಣದ ಬೆಲೆ ಶೇ. ೨೦ರಷ್ಟು ಹೆಚ್ಚಳವಾಗಿದೆ. ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಪುನರಾರಂಭಿಸುವುದಾಗಿ ಹೇಳುತ್ತಾ ಕಲರ್, ಕಲರ್ ಕಾಗೆ ಹಾರಿಸುತ್ತಿದ್ದಾರೆ. ತಂದೆ- ಮಗನಿಗೆ ಡಿಕೆಶಿ ದುಸ್ವಪ್ನವಾಗಿದ್ದಾರೆ. ಆದ್ದರಿಂದಲೇ ಮನ ಬಂದಂತೆ ಮಾತನಾಡುತ್ತಿದ್ದಾರೆ. ಇವರು ಇನ್ನಾದರೂ ತಮ್ಮ ನಡೆ-ನುಡಿ ಬದಲಿಸಿಕೊಳ್ಳಲಿ ಎಂದು ಕೆಪಿಸಿಸಿ ಸಂಯೋಜಕ  ವೀರಣ್ಣ ಪಾಟೀಲ  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ತೈಲ & ಅನಿಲ ಬೆಲೆ ಹೆಚ್ಚಳ ಡಿವೈಎಫ್‌ಐ ಖಂಡನೆ  

-- ತೈಲ & ಅನಿಲ ಬೆಲೆ ಹೆಚ್ಚಳ ಡಿವೈಎಫ್‌ಐ ಖಂಡನೆ   ಹಾವೇರಿ: ಪಶ್ಚಿಮ...

ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆ

ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆ ಹಾವೇರಿ: ಸಮ್ಮೇಳನ ಉದ್ಘಾಟನೆಗೂ ಮುನ್ನ ನಗರದ ವಾಲ್ಮೀಕಿ ವೃತ್ತದಿಂದ...

ವಿಧಾನ ಪರಿಷತ್ ಕಚೇರಿಯಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಶಿಸ್ತು ಕ್ರಮ: ಬಸವರಾಜ ಹೊರಟ್ಟಿ

ವಿಧಾನ ಪರಿಷತ್ ಕಚೇರಿಯಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಶಿಸ್ತು...

ಅಂಗನವಾಡಿ ಕೇಂದ್ರದಲ್ಲಿ ಅಕ್ಕನನ್ನೇ ಭೀಕರವಾಗಿ ಕೊಚ್ಚಿ ಕೊಲೆಮಾಡಿದ ತಮ್ಮ

-ಅಂಗನವಾಡಿ ಕೇಂದ್ರದಲ್ಲಿ ಅಕ್ಕನನ್ನೇ ಭೀಕರವಾಗಿ ಕೊಚ್ಚಿ ಕೊಲೆಮಾಡಿದ ತಮ್ಮ ಹಾವೇರಿ: ಒಡಹುಟ್ಟಿದ...