ಸಿಬಿಐ-ಇಡಿ ಹೆಸರಿನಲ್ಲಿ ಬೆದರಿಕೆ ಹಾವೇರಿ ವ್ಯಕ್ತಿಗೆ ೨೧.೫೦ ಲಕ್ಷರು ವಂಚನೆ

Date:

ಹಾವೇರಿ: ರಣಭೀರ ಸಿಂಗ್ ಹಾಗೂ ಪ್ರದೀಪ್‌ಕುಮಾರ ಎನ್ನುವ ಯಾರೋ ಅನಾಮಧೇಯ ವ್ಯಕ್ತಿಗಳು ಸಿಬಿಐ ಆಫೀಸ್‌ರ್, ಇಡಿ ಅಧಿಕಾರಿಗಳು ಎಂದು ಹೆದರಿಸಿ ಹಾವೇರಿಯ ನಾಗಭೂಷಣ ಎನ್ನುವ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ೨೧.೫೦ಲಕ್ಷರುಗಳನ್ನು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಮೋಸ ಮಾಡಿರುವ ಬಗ್ಗೆ ಮೇ.೩೦ರಂದು ಹಾವೇರಿಯ ಸೈಬರ್ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಬಿಐ-ಇಡಿ ಹೆಸರಿನಲ್ಲಿ ಅಧಿಕಾರಿಗಳು ಎಂದು ಪರಿಚಯ ಮಾಡಿಕೊಂಡ ಇಬ್ಬರು ಖದೀಮರು ತಮ್ಮ ವ್ಯಾಟ್ಸಪ್ ನಂಬರ್‌ನಿಂದ  ದಿನಾಂಕ: ೧೨-೦೫-೨೦೨೬ ರಂದು ಮಧ್ಯಾಹ್ನ ೦೩-೦೦ ಗಂಟೆಯಿಂದ ದಿನಾಂಕ: ೨೮-೦೫-೨೦೨೬ ರಂದು ಮಧ್ಯಾಹ್ನ ೧೨-೫೯ ಗಂಟೆಯವರೆಗಿನ ಅವಧಿಯಲ್ಲಿ  ನಾಗಭೂಷಣಗೆ ಕರೆಮಾಡಿ ಆಡಿಯೋ & ವೀಡಿಯೋ ಕಾಲ್ ಮಾಡಿ ನಾವು ಇಡಿ ಇಲಾಖೆಯವರು ಹಾಗೂ ಎಟಿಎಸ್ ಇನ್ವೆಸ್ಟಿಗೇಷನ್ ಏಜನ್ಸಿ, ಸಿಬಿಐ ಮುಂಬೈ ಎಂದು ಕರೆ ಮಾಡಿ, ನಿಮ್ಮ ಮೇಲೆ ಮನಿ ಲ್ಯಾಂಡರಿಂಗ್ ಪ್ರಾಡ್ ಕೇಸು ಕೇಸ್ ಪೈನಾನ್ಸ ಅಪರಾಧ ಆಗಿರುತ್ತದೆ.   ನೀವು ಪೆಹ್ಲಾಗಾಮ ಅಟ್ಯಾಕ್‌ದಲ್ಲಿ ಉಗ್ರಗಾಮಿ ಆದಿಲ್‌ಗೋರಿ  ನಿಮ್ ಆಧಾರ ಕಾರ್ಡ ಬಳಿಸಿಕೊಂಡು  ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಮನಿ ಲ್ಯಾಂಡ್ರಿಂಗ್ ಹಣ
ವರ್ಗಾವಣೆ ಮಾಡಿದ್ದು ತಾವು ೧೫% ಲಾಭವನ್ನು ಪಡೆದುಕೊಂಡಿರುತ್ತೀರಿ. ಆದಿಲ್‌ಗೋರಿ ಉಗ್ರರು ನಮ್ಮ ಬಳಿ ಸಿಕ್ಕಿದ್ದಾರೆ ಅವರು ನಿಮ್ಮ ಹೆಸರನ್ನು ಹಾಗೂ ನಿಮ್ಮ ಆಧಾರ ಕಾರ್ಡನ್ನು ತೋರಿಸಿ ನೀವು ಇದರಲ್ಲಿ ಭಾಗಿ ಯಾಗಿದ್ದಿರಿ, ನಿಮ್ಮ ಹೆಸರನ್ನು ಇಲ್ಲಿ ಹೇಳಿದ್ದಾರೆ.
ಬ್ಯಾಂಕ್ ಖಾತೆ ತೆರೆಯಲು ಸಹಿ ಮಾಡಿ ಸಹಾಯ ಮಾಡಿದ್ದೀರಿ ಅಂತ ಹೇಳಿದ್ದು, ನೀವು ಭಾಗಿಯಾಗಿ ಅಕ್ರಮ ಹಣ ವರ್ಗಾವಣೆ ಕಾರ್ಯಾಚರಣೆಯಲ್ಲಿ ಬ್ಯಾಂಕ್ ಖಾತೆ ಸೇರಿದಂತೆ  ಬಹು ಬ್ಯಾಂಕಿಂಗ್ ಮಾರ್ಗಗಳನ್ನು ಬಳಸಿಕೊಂಡು ವಂಚನೆ ಮಾಡಿ ಹಣ ವರ್ಗಾವಣೆ ಮಾಡಿದ್ದೀರಿ, ಈಗಾಗಲೆ ಆರ್.ಬಿ.ಐ ರವರು ಶಂಕಿತರ ಬ್ಯಾಂಕ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ, ೪೫ ವ್ಯಕ್ತಿಗಳು ಸುಳ್ಳು ದಾಖಲತಿಗಳನ್ನು ತೋರಿಸಿ ಖಾತೆ ತೆರೆದಿದ್ದು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ನಿಮಗೆ ವಿಚಾರಣೆಗಾಗಿ ನಾವು ಕರೆ ಮಾಡಿದ್ದೇವೆ ಎಂದು ದೂರುದಾರನಿಗೆ ದಿನಾಂಕ: ೧೨-೦೫-೨೦೨೬  ರಂದು ಸುಮಾರು  ಮಧ್ಯಾಹ್ನ ೦೩:೦೦ ಗಂಟೆಯಿಂದ ದಿನಾಂಕ: ೧೩-೦೫-೨೦೨೬ ಮಧ್ಯರಾತ್ರಿ ೦೩:೦೦ ಗಂಟೆವರೆಗೆ  ಸುಮಾರು ೧೨ ತಾಸುಗಳಕಾಲ ರಣಬೀರ್‌ಸಿಂಗ್ ಐಪಿಎಸ್ ಅಧಿಕಾರಿಗಳು ನಾವು  ಎಂದು ಹೇಳಿ ಮುಂದುವರೆದು ನಂತರ ದೂರುದಾರ ಆಪಾದಿತರ ಖಾತೆಗೆ  ದಿನಾಂಕ: ೧೮-೦೫-೨೦೨೬ ರಂದು ಎಸ್.ಬಿ.ಐ ಖಾತೆ ಬ್ಯಾಂಕ್ ಶಾಖೆ ಹಾನಗಲ್‌ದಿಂದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಕೌಂಟ್ ತಮ್ಮ ಖಾತೆಯಿಂದ ರೂ. ೫,೫೦,೦೦೦/-ಗಳನ್ನು ಹಾಗೂ ದಿನಾಂಕ: ೨೦-೦೫-೨೦೨೬ ರಂದು ರೂ. ೧೬,೦೦,೦೦೦/- ಗಳನ್ನು  ಆಪಾಧಿತರು  ಕಳುಹಿಸಿಕೊಟ್ಟ ಯುನಿಟಿ ಬ್ಯಾಂಕ್‌ದ ಕರೆಂಟ್ ಅಕೌಂಟ್ ನಂಬರ್‌ಗೆ  ಒಟ್ಟು ಫಿರ‍್ಯಾದಿಯಿಂದ  ರೂ. ೨೧,೫೦,೦೦೦/- ಗಳನ್ನು ಮೋಸದಿಂದ ಹಾಗೂ ಹೆದರಿಸಿ, ಬೆದರಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ.
ನಂತರ ಫಿರ‍್ಯಾದಿಯು ತಾನು ಮೋಸ ಹೋದ ಬಗ್ಗೆ ೧೯೩೦ ಗೆ ಕರೆ ಮಾಡಿ ವಿಷಯ ತಿಳಿಸಿ, ದಾಖಲಾತಿಗಳೊಂದಿಗೆ ಸೈಬರ್ ಠಾಣೆಗೆ ಬಂದು ದೂರು  ನೀಡಿದ್ದು, ಸದರಿ ಆಪಾದಿತರು  ಇ.ಡಿ., ಸಿಬಿಐ ಪೊಲೀಸ್ ಅಧಿಕಾರಿಗಳಂತೆ ನಟಿಸಿ, ಪೊಲೀಸ್ ವೇಷ ಧರಿಸಿಕೊಂಡು ಪಿರ‍್ಯಾದಿಗೆ ವ್ಯಾಟ್ಸಪ್ ವೀಡಿಯೋದಲ್ಲಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿ ಫಿರ‍್ಯಾದಿ ಖಾತೆಯಿಂದ  ಹಣವನ್ನು ನಂಬಿಸಿ ತಮ್ಮ ಖಾತೆಗಳಿಗೆ ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಕೊಂಡ ರಣಭೀರ ಸಿಂಗ್ ಹಾಗೂ ಪ್ರದೀಪ್ ಕುಮಾರ ಸಿಬಿಐ ಆಫೀಸ್‌ರ್, ಇಡಿ ಅಧಿಕಾರಿಗಳು ಹೇಳಿಕೊಂಡು ಕೃತ್ಯ ಎಸಗಿದ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಹಾವೇರಿ ಸೈಬರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಡಿ.ಕೆ.ಶಿವಕುಮಾರ ನಾಯಕತ್ವದಲ್ಲಿ ನಾಡಿನಲ್ಲಿ ಹೊಸ ಅಧ್ಯಾಯ ಆರಂಭ- ಶಾಸಕ ಮಾನೆ

ಡಿ.ಕೆ.ಶಿವಕುಮಾರ ನಾಯಕತ್ವದಲ್ಲಿ ನಾಡಿನಲ್ಲಿ ಹೊಸ ಅಧ್ಯಾಯ ಆರಂಭ- ಶಾಸಕ ಮಾನೆ ಹಾನಗಲ್: ತಳ...

ರಾಜ್ಯ ಸರಕಾರ ಬೆಲೆ ಏರಿಕೆಗೆ ತಕ್ಕಂತೆ ವೈಜ್ಞಾನಿಕ ಕನಿಷ್ಠ ವೇತನ ಜಾರಿಗೊಳಿಸಬೇಕು: ಬಸವರಾಜ ಪೂಜಾರ

ರಾಜ್ಯ ಸರಕಾರ ಬೆಲೆ ಏರಿಕೆಗೆ ತಕ್ಕಂತೆ ವೈಜ್ಞಾನಿಕ ಕನಿಷ್ಠ ವೇತನ ಜಾರಿಗೊಳಿಸಬೇಕು:...

ಅಧಿಕಾರ ಹಸ್ತಾಂತರ ಗೊಂದಲಕ್ಕೆ ಕೊನೆಗೂ ತೆರೆ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಅಧಿಕಾರ ಹಸ್ತಾಂತರ ಗೊಂದಲಕ್ಕೆ ಕೊನೆಗೂ ತೆರೆ: ಸಿಎಂ ಸ್ಥಾನಕ್ಕೆ...

ಹಾವೇರಿಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲು ಆಗ್ರಹ

ಹಾವೇರಿಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲು ಆಗ್ರಹ ಹಾವೇರಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊದಲ ಸಂಪುಟದಲ್ಲಿ...